ಶಿಕ್ಷಣ ಸಂಸ್ಥೆಗಳು ಪದವಿ ನೀಡಿದರೆ  ಸಾಲದು, ವೃತ್ತಿ ಕೌಶಲ್ಯ ಬೆಳೆಸುವುದು ಅವಶ್ಯ
ಮೈಸೂರು

ಶಿಕ್ಷಣ ಸಂಸ್ಥೆಗಳು ಪದವಿ ನೀಡಿದರೆ ಸಾಲದು, ವೃತ್ತಿ ಕೌಶಲ್ಯ ಬೆಳೆಸುವುದು ಅವಶ್ಯ

March 13, 2019

ಮೈಸೂರು: ಪ್ರಸ್ತುತ ದಲ್ಲಿ ಶಿಕ್ಷಣ ಸಂಸ್ಥೆಗಳು ಕೇವಲ ಪದವೀ ಧರರನ್ನಷ್ಟೇ ಸೃಷ್ಟಿ ಮಾಡಿದರೆ ಸಾಲದು. ಅವರಿಗೆ ವೃತ್ತಿಕೌಶಲ್ಯ ಹಾಗೂ ಸ್ಪರ್ಧಾತ್ಮಕ ಜಗತ್ತು ಅಪೇಕ್ಷಿಸುವ ಚಾಕಚಕ್ಯತೆ ಬೆಳೆ ಸುವ ಮಹತ್ವದ ಜವಾಬ್ದಾರಿ ವಹಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿರುವ `ಇಗ್ನೈಟ್-2019’ ಎರಡು ದಿನಗಳ ರಾಜ್ಯ ಮಟ್ಟದ ವಾಣಿಜ್ಯ, ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ (ಐಟಿ) ಸಂಬಂಧಿಸಿದ ವಿವಿಧ ಸ್ಪರ್ಧೆಗಳ ಅಂತರ ಕಾಲೇಜು ಉತ್ಸವಕ್ಕೆ ಮಂಗಳವಾರ ಕಾಲೇಜಿನ ಲಲಿತಾ ಸ್ಮಾರಕ ಭವನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಈ ಹಿಂದೆ ಯಾವುದೇ ಪದವಿ ಶಿಕ್ಷಣ ವಾದರೂ ಪಠ್ಯಕ್ರಮಕ್ಕೆ ಸೀಮಿತಗೊಳ್ಳುತ್ತಿದ್ದ ಸನ್ನಿವೇಶವೇ ಹೆಚ್ಚು. ಆದರೆ ಈಗ ಕೇವಲ ಪಠ್ಯಕ್ಕೆ ಅಂಟಿಕೊಂಡರೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಕಾಣಲಾಗದು. ಹೀಗಾಗಿ ಈ ರೀತಿಯ ಸ್ಪರ್ಧಾ ಚಟುವಟಿಕೆ ಗಳು ಇಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಪದವಿ ಹಾಗೂ ಸ್ನಾತಕೋತ್ತರ ಪದವೀಧರರು ಹೆಚ್ಚಿನ ಪ್ರಮಾಣದಲ್ಲಿ ಹೊರ ಬರುತ್ತಿದ್ದು, ವೃತ್ತಿ ಬದುಕಿಗೆ ಅಗತ್ಯವಾದ ಕೌಶಲ್ಯ ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಇಂತಹ ಚಟುವಟಿಕೆ ಗಳು ವೃತ್ತಿ ಕೌಶಲ್ಯ ಸಂಪಾದಿಸಲು ಪೂರಕ ವಾತಾವರಣ ನಿರ್ಮಿಸಲಿವೆ. ಈ ಬಗೆಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿ ಕೊಳ್ಳಲು ಅನುವು ಮಾಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು.

ಪದವಿ ಪೂರೈಸಿದ ಹಲವರು ತಮ್ಮ ಭವಿಷ್ಯದ ದಿನಗಳ ಬಗ್ಗೆ ಯಾವುದೇ ಸೂಕ್ತ ನಿರ್ಧಾರ ಹೊಂದಿರುವುದಿಲ್ಲ. ಹೀಗಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗ ಬೇಕು. ಕೇವಲ ಅಂಕ ಗಳಿಕೆಯಿಂದ ಮಾತ್ರ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಿಲ್ಲ. ನಿರಂತರ ಅಧ್ಯಯನ ಶೀಲರಾಗಿ ಅಗತ್ಯ ಪರಿಣತಿ ಪಡೆದುಕೊಳ್ಳ ಬೇಕು. ಎಲ್ಲಾ ಪದವೀಧರರು ಉದ್ಯೋಗ ಅಪೇಕ್ಷಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗದು. ಪದವೀಧರರಾಗಿ ಹೊರಹೊಮ್ಮುವವರಲ್ಲಿ ಶೇ.10ರಷ್ಟು ಮಂದಿಯಾದರೂ ಉದ್ಯೋಗದಾತರಾಗ ಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಮಾರುಕಟ್ಟೆ ವಲಯ ಇಂದು ಆನ್ ಲೈನ್ ಶಾಪಿಂಗ್, ಡಿಜಿಟಲ್ ಶಾಪಿಂಗ್ ಸೇರಿದಂತೆ ಅನೇಕ ಆಯಾಮಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಪದವೀಧರರು ಮಾಹಿತಿ ತಂತ್ರ ಜ್ಞಾನದ ಜ್ಞಾನ ಸಂಪಾದಿಸುವುದು ಅಗತ್ಯ. ಈ ಎಲ್ಲದಕ್ಕೆ ಎರಡು ದಿನಗಳ ಸ್ಪರ್ಧೆ ಪೂರಕವಾಗಿದ್ದು, ಬಹುಮಾನಕ್ಕಾಗಿ ತಲೆ ಕೆಡಿಸಿಕೊಳ್ಳದೇ ಉತ್ತಮ ಪ್ರದರ್ಶನ ನೀಡಲು ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಸ್ಪರ್ಧೆಗಳು: ಮೈಸೂರು ಮತ್ತು ಕೊಡಗು ಜಿಲ್ಲೆಗಳಿಂದ 8ಕ್ಕೂ ಹೆಚ್ಚು ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಗಳು ಪಾಲ್ಗೊಂಡಿದ್ದು, ಹಣಕಾಸು ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಮಾರುಕಟ್ಟೆ ಕೌಶಲ್ಯ, ವ್ಯವಸ್ಥಾಪನಾ ತಂತ್ರಗಳಿಗೆ ಸಂಬಂಧಿಸಿ ದಂತೆ ಹಲವು ಸ್ಪರ್ಧೆಗಳು ನಡೆಯಲಿವೆ. ಸಮಗ್ರ ಪ್ರಶಸ್ತಿಗೆ ಭಾಜನವಾಗುವ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನಕ್ಕೆ 5 ಸಾವಿರ ರೂ. ಬಹುಮಾನ ದೊರೆಯಲಿದೆ.

ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಕಾರ್ಯದರ್ಶಿ ಕವೀಶ್ ವಿ.ಗೌಡ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್. ಶ್ರೀಕಂಠಸ್ವಾಮಿ, ವಿದ್ಯಾವಿಕಾಸ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸ್‍ನ ಶೈಕ್ಷಣಿಕ ನಿರ್ದೇಶಕ ಡಾ.ಮೈಕಲ್ ನೋರಾನ್ಹಾ, ಕಾಲೇಜಿನ ಪ್ರಾಂಶುಪಾಲರಾದ ಡಾ.ಮುಜೇದಾ ಭಾನು, ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ (ಪದವಿ) ಮುಖ್ಯಸ್ಥ ಆಸ್ಕರ್ ಅಭಿಷೇಕ್, ಸ್ನಾತಕೋತ್ತರ ವಾಣಿಜ್ಯ ವಿಭಾ ಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಜೆ. ಪ್ರಿಯಾ ಮತ್ತಿತರರು ಹಾಜರಿದ್ದರು.

Translate »