ಸರ್ಕಾರಿ ಕಚೇರಿ ವಾಹನದ ವಿವರ ಸಲ್ಲಿಸಿ
ಮೈಸೂರು

ಸರ್ಕಾರಿ ಕಚೇರಿ ವಾಹನದ ವಿವರ ಸಲ್ಲಿಸಿ

March 13, 2019

ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ಚುನಾವಣಾ ಕಾರ್ಯಕ್ಕೆ ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಇಲಾಖಾ ಅಧಿಕಾರಿಗಳು ಸರ್ಕಾರಿ ವಾಹನಗಳು ದರುಸ್ತಿಯಲ್ಲಿದ್ದಲ್ಲಿ ಅದನ್ನು ದುರಸ್ತಿ ಪಡಿಸಿ ಸುಸ್ಥಿತಿಯಲ್ಲಿಟ್ಟು ಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಿಂದ ವಾಹನ ಕೋರಿಕೆ ಅಥವಾ ಆದೇಶಗಳು ಬಂದಲ್ಲಿ ವಿಳಂಬ ಮಾಡದೇ ಸಕಾಲದಲ್ಲಿ ವಾಹನಗಳನ್ನು ನಿರ್ದೇಶಿಸುವ ಅಧಿಕಾರಿಗಳ ಬಳಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲು ಜಿಲ್ಲಾ ಮಟ್ಟದ/ತಾಲೂಕು ಮಟ್ಟದ ಎಲ್ಲಾ ಕೇಂದ್ರ/ರಾಜ್ಯ ಸರ್ಕಾರ/ ಮಂಡಳಿ/ನಿಗಮ ಮತ್ತು ಸ್ವಾಯತ್ತತಾ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಮತ್ತು ಅಧೀನ ಕಚೇರಿಯಲ್ಲಿರುವ (ತಾಲೂಕು ವ್ಯಾಪ್ತಿ ಸೇರಿದಂತೆ) ವಾಹನ ನೋಂದಣಿ ಸಂಖ್ಯೆ/ವಾಹನದ ಮಾದರಿ (type of Vehicle)ಯೊಂದಿಗೆ ಮತ್ತು ಒಪ್ಪಂದದ ಮೇರೆಗೆ (Contract Basis) ಸರ್ಕಾರಿ ಕೆಲಸಕ್ಕೆ ಪಡೆದುಕೊಂಡಿರುವ ವಾಹನಗಳು (Motor Cab or Laxury Taxi) ಸರ್ಕಾರಿ ವಾಹನಗಳಾಗಿರುವು ದರಿಂದ ಸದರಿ ವಾಹನಗಳ ವಿವರಗಳು ಸೇರಿದಂತೆ ಹಾಗೂ ಬೆಂಗಳೂರು ಮತ್ತು ಇತರೆ ಜಿಲ್ಲೆಯ ವಾಹನಗಳು ಮೈಸೂರಿನ ವಿವಿಧ ಇಲಾಖೆಗಳಲ್ಲಿ ಬಳಸುತ್ತಿದ್ದು. ಅಂತಹ ವಾಹನಗಳ ವಿವರವೂ ಒಳಗೊಂಡಂತೆ ಕಚೇರಿ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್‍ವಿಳಾಸವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಇ-ಮೇಲ್ ವಿಳಾಸ [email protected] / FAX-2428383ಗೆ ಕಳುಹಿಸುವುದು.

ಚುನಾವಣಾ ಕೆಲಸ ಕಾರ್ಯಗಳಿಗೆ ಅಸಹಕಾರ ತೋರುವ, ಆದೇಶಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಆರ್.ಪಿ.ಆಕ್ಟ್ ಅನ್ವಯ ಕ್ರಮ ಜರುಗಿಸಲಾಗು ವುದು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪೂರ್ವ/ಪಶ್ಚಿಮ ಮೈಸೂರು ಮತ್ತು ಹುಣಸೂರು ಇವರು 2018ನೇ ಜನವರಿ ಮಾಹೆಯಿಂದ ಇಲ್ಲಿಯವರೆಗೂ ನೋಂದಣಿಯಾದ ಸರ್ಕಾರಿ ವಾಹನಗಳ ವಿವರವನ್ನು (ಮಂಡಳಿ, ನಿಗಮ ಸ್ವಾಂiÀiತ್ತತಾ ಸಂಸ್ಥೆಗಳೂ ಸೇರಿದಂತೆ) ಗಣಕೀಕರಿಸಿ hard and soft copy ಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »