ಮನೆಗಳ ಮೇಲೆ ಹಾಕಲಾದ ಬಿಜೆಪಿ ಬಾವುಟ ತೆರವು  ವೇಳೆ ಮಾತಿನ ಚಕಮಕಿ: ಕೆಲಕಾಲ ಗೊಂದಲ
ಮೈಸೂರು

ಮನೆಗಳ ಮೇಲೆ ಹಾಕಲಾದ ಬಿಜೆಪಿ ಬಾವುಟ ತೆರವು ವೇಳೆ ಮಾತಿನ ಚಕಮಕಿ: ಕೆಲಕಾಲ ಗೊಂದಲ

March 13, 2019

ಮೈಸೂರು: ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆ ಮೇಲೆ ಹಾರಿಸಿದ್ದ ಬಿಜೆಪಿ ಬಾವುಟ ತೆರವುಗೊಳಿ ಸುವ ಸಂಬಂಧ ಚುನಾವಣಾ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಇಂದು ಸಂಜೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯ ನಿವಾಸಿ, ಬಿಜೆಪಿ ಕಾರ್ಯಕರ್ತ ಪ್ರಭುಸ್ವಾಮಿ, ಚುನಾವಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ಗೊಂದಲಮಯ ವಾಯಿತು. ಚುನಾವಣಾ ಸಿಬ್ಬಂದಿ ಮತ್ತು ಅಭಯ ತಂಡದೊಂದಿಗೆ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ತ್ಯಾಗರಾಜ ರಸ್ತೆಯಲ್ಲಿ ಅಳವಡಿ ಸಿದ್ದ ಬಾವುಟ, ಫ್ಲೆಕ್ಸ್‍ಗಳನ್ನು ತೆರವುಗೊಳಿ ಸುವಾಗ, ಪ್ರಭುಸ್ವಾಮಿ ಅವರ ಮನೆಯ ಮೇಲೆ ಹಾರಿಸಿದ್ದ ಬಾವುಟ ತೆರವುಗೊಳಿ ಸುವಾಗ ಈ ಘಟನೆ ನಡೆಯಿತು.

ನಂತರ ಮಾತನಾಡಿದ ಪ್ರಭುಸ್ವಾಮಿ, ತಾವು ಇಷ್ಟ ಪಡುವ ಪಕ್ಷದ ಬಾವುಟ ಹಾರಿಸಿದರೆ ತಪ್ಪೇನು? ಒಂದು ವೇಳೆ ಕೇಂದ್ರ ಚುನಾವಣಾ ಆಯೋಗ ಖಾಸಗಿ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸ ಬಾರದು ಎಂಬ ನಿಯಮ ಜಾರಿಗೊಳಿಸಿ ದ್ದರೆ, ಮೊದಲು ನೋಟೀಸ್ ನೀಡಲಿ ನಂತರ ನಾವೇ ತೆರವುಗೊಳಿಸುವುದಾಗಿ ಚುನಾವಣಾ ಸಿಬ್ಬಂದಿ ಮತ್ತು ಅಭಯ ತಂಡದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ತಮ್ಮ ಮನೆ ಮೇಲೆ ಅಳವಡಿಸಿರುವ ಪಕ್ಷದ ಬಾವುಟವನ್ನು ನೋಟೀಸ್ ನೀಡದೇ ತೆರವುಗೊಳಿಸಲು ಚುನಾವಣಾ ಸಿಬ್ಬಂದಿ ಮುಂದಾದರೆ ಪ್ರತಿಭಟಿಸುತ್ತೇನೆ ಎಂದಾಗ ಕೆಲ ಕಾಲ ಚುನಾವಣಾ ಸಿಬ್ಬಂದಿ, ಅಭಯ ತಂಡದ ಸದಸ್ಯರು ತಬ್ಬಿಬ್ಬಾದರು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಕೆ.ಆರ್. ಠಾಣೆಯ ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ಹತೋಟಿಗೆ ತಂದರು.

ನಂತರ ಮೇಲಾಧಿಕಾರಿಗಳ ಸಂಪ ರ್ಕಿಸಿ, ಖಾಸಗಿ ಮನೆಗಳ ಮೇಲೆ ರಾಜ ಕೀಯ ಪಕ್ಷದ ಬಾವುಟ ಹಾರಿಸುವುದಕ್ಕೆ ಪಾಲಿಕೆಯಿಂದ ಅನುಮತಿ ಪಡೆಯ ಬೇಕೇ? ಅಥವಾ ಕಡ್ಡಾಯವಾಗಿ ನಿಷೇಧಿ ಸಲಾಗಿದೆಯೇ? ಎಂಬುದನ್ನು ಸ್ವಷ್ಟ ಪಡಿಸಿಕೊಂಡು, ಪ್ರಭುಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ ರಾದರೂ ಪ್ರಭುಸ್ವಾಮಿ ಇದಕ್ಕೊಪ್ಪದೇ ಮೊದಲು ನೋಟೀಸ್ ನೀಡಿ ನಂತರ ಬಾವುಟ ನಾನೇ ತೆರವುಗೊಳಿಸುತ್ತೇವೆ ಎಂದು ಪಟ್ಟು ಹಿಡಿದರು. ನಂತರ ಅಧಿ ಕಾರಿಗಳು ಪ್ರಭುಸ್ವಾಮಿ ಅವರ ಮನೆ ಯನ್ನು ಬಿಟ್ಟು ಬೇರೆ ಮನೆಗಳಲ್ಲಿ ಹಾರಿ ಸಿದ್ದ ಬಾವುಟ, ಫ್ಲೆಕ್ಸ್‍ಗಳನ್ನು ತೆರವುಗೊಳಿಸಿ, ಅಲ್ಲಿಂದ ಜಾಗ ಖಾಲಿ ಮಾಡಿದರು.

Translate »