ಬಿಜೆಪಿ ವೈಫಲ್ಯ ಮುಚ್ಚಿಕೊಳ್ಳಲು ‘ಸರ್ಜಿಕಲ್ ಸ್ಟ್ರೈಕ್’ ಬಿಂಬಿಸಲಾಗುತ್ತಿದೆ
ಮೈಸೂರು

ಬಿಜೆಪಿ ವೈಫಲ್ಯ ಮುಚ್ಚಿಕೊಳ್ಳಲು ‘ಸರ್ಜಿಕಲ್ ಸ್ಟ್ರೈಕ್’ ಬಿಂಬಿಸಲಾಗುತ್ತಿದೆ

March 13, 2019

ಮೈಸೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯ ಗಳನ್ನು ಮುಚ್ಚಿಕೊಳ್ಳಲು ಸರ್ಜಿಕಲ್ ಸ್ಟ್ರೈಕ್ ಮತ್ತು ರೈತರ ಖಾತೆಗೆ 6 ಸಾವಿರ ಹಾಕುವು ದಾಗಿ ಹೇಳಿಕೊಳ್ಳುತ್ತಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಟೀಕಿಸಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮೈಸೂರು ಜಿಲ್ಲಾ ಪದವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಘಟಕ ಉದ್ಘಾಟನೆ, ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಕುರಿತು ನಮ್ಮ ಅಪಸ್ವರವಿಲ್ಲ. ಆದರೆ, ಉಗ್ರರು ದೇಶದ ಒಳಗೆ ನುಗ್ಗದಂತೆ ತಡೆಯುವ ಶಕ್ತಿ ಮೋದಿ ಅವರಿಗೆ ಇರಲಿಲ್ಲವೆ? ಎಂದು ಪ್ರಶ್ನಿಸಿದರು.

ಕಳೆದ ಐದು ವರ್ಷಗಳಿಂದ ರೈತರ ಕುರಿತು ಏನನ್ನೂ ಮಾಡದ ಮೋದಿ ಸರ್ಕಾರ, ಕೊನೆ ಗಳಿಗೆಯಲ್ಲಿ ಚುನಾವಣೆ ಕಾರಣಕ್ಕೆ ರೈತರ ಖಾತೆಗೆ ಮೂರು ಕಂತು ಗಳಲ್ಲಿ 6,000 ಹಾಕಲು ಹೊರಟಿದೆ. ಇದು ರೈತರ ಕುರಿತ ನಿಜವಾದ ಕಾಳಜಿ ಯಲ್ಲ. ಪ್ರಣಾಳಿಕೆಯಲ್ಲಿ ಹೇಳಿದ ಮಾತು ಗಳನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ಸೋತಿದೆ. ಅದರ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸು ವುದಾಗಿ ಮೋದಿ ಭರವಸೆ ನೀಡಿದ್ದರು. ಆ ಮಾತಿನ ಪ್ರಕಾರ ಕಳೆದ ಐದು ವರ್ಷ ದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗ ಬೇಕಿತ್ತು. ಆದರೆ, ಅಧಿಕೃತ ಅಂಕಿ-ಅಂಶ ಗಳ ಪ್ರಕಾರ ಕೇವಲ 37 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ತಿಳಿಸಿದರು.

ಈ ದೇಶದ ಬಹುದೊಡ್ಡ ಚುನಾವಣೆ ಕೋಮುವಾದಿ ಹಾಗೂ ಜಾತ್ಯಾತೀತ ಶಕ್ತಿಗಳ ನಡುವೆ ನಡೆಯುತ್ತಿದೆ. ಸಂವಿ ಧಾನ ವಿರೋಧಿಗಳನ್ನು ಸೋಲಿಸುವ ಶಕ್ತಿ ಪದವೀಧರರು ಹಾಗೂ ಶಿಕ್ಷಕರಿಗಿದೆ. ಯುಪಿಎ ಸರ್ಕಾರದ ಸಾಧನೆ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಜನ ರಿಗೆ ತಿಳಿಸುವ ಮೂಲಕ ಕಾಂಗ್ರೆಸ್ ಜಯ ಗಳಿಸುವಂತೆ ಮಾಡಬೇಕು ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 10 ವರ್ಷಗಳಿಂದ ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಪೈಕಿ ಮೊದಲ 5 ವರ್ಷ ಯುಪಿಎ ಸರ್ಕಾರ ದಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು, ಅಪಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಆರ್ಥಿಕ ವ್ಯವಸ್ಥೆ ಅತ್ಯುತ್ತಮವಾಗಿತ್ತು. ಹಲವಾರು ಸುಧಾರಣೆ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬಡವರು ಮತ್ತು ರೈತರಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಗತಿಪರ ಚಿಂತಕರ ಕಗ್ಗೊಲೆ ಮಾಡಿದೆ. ಡಾ.ಎಂ.ಎಂ. ಕಲ್ಬುರ್ಗಿ, ಗೋವಿಂದ ಪನ್ಸಾರೆ, ಗೌರಿ ಲಂಕೇಶ್ ಸೇರಿದಂತೆ ಅನೇಕರ ಹತ್ಯೆಯಾ ಗಿದೆ. ಸಂವಿಧಾನವನ್ನು ಕಡೆಗಣಿಸಲಾಗು ತ್ತಿದೆ. ಪದವೀಧರರು ಮತ್ತು ಶಿP್ಷÀಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.

ಇದೇ ವೇಳೆ ಮೈಸೂರು ಜಿಲ್ಲಾ ಪದ ವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷೆಯಾಗಿ ಡಾ.ಸಾರ ಹಖ್ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮ ದಲ್ಲಿ ಶಾಸಕರಾದ ಅನಿಲ್‍ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಶಿವನಂಜಪ್ಪ, ಮಲ್ಲಿಕಾ ರವಿಕುಮಾರ್ ಉಪಸ್ಥಿತರಿದ್ದರು.

Translate »