ಮೈಸೂರು: ಕಟ್ಟಡಗಳ ನಕ್ಷೆ ಅನು ಮೋದನೆ [Building Plan Approval] ಪ್ರಕ್ರಿಯೆಗೆ ಆನ್‍ಲೈನ್ ಪದ್ಧತಿ ಜಾರಿಗೆ ತನ್ನಿ ಎಂದು ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾನುವಾರ ಮಧ್ಯಾಹ್ನವಷ್ಟೇ ಅಧಿಕಾರ ವಹಿಸಿಕೊಂಡಿದ್ದ ಅವರು, ಇಂದು ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಪ್ರಥಮ ಸಭೆ ನಡೆಸಿದರು. ಮೊದಲು ಎಲ್ಲಾ ಅಧಿಕಾರಿ ಗಳನ್ನು ಪರಿಚಯ ಮಾಡಿಕೊಂಡ ಅವರು, ಮೈಸೂರು ಮಹಾನಗರ ಪಾಲಿಕೆ ಕಾರ್ಯ ವ್ಯಾಪ್ತಿ, ಯಾವ ಯಾವ ವಿಭಾಗಗಳಿವೆ, ಎಷ್ಟು…
ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗಾಗಿ ಫೆ.23ರಂದು ಬೃಹತ್ ಉದ್ಯೋಗ ಮೇಳ
February 19, 2019ಮೈಸೂರು: ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗಾ ವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಂಜನಗೂಡು ತಾಲೂಕಿನ ತಾಂಡವಪುರದ ಅಗ್ನಿ ನೇತ್ರಾಂ ಬಿಕ ದೇವಾಲಯ ಆವರಣದಲ್ಲಿ ಫೆ.23 ರಂದು ಬೆಳಿಗ್ಗೆ 9ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರ ಫೌಂಡೇಶನ್ ಗ್ರಾಮೀ ಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಉದ್ಯೋಗ ಮೇಳ ನಡೆಸ ಲಾಗುತ್ತಿದೆ. ಫೆ.23ರಂದು ಬೆಳಿಗ್ಗೆ…
ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕುರಿತು ಅಭಿಯಂತರರಿಗೆ ಕಾರ್ಯಾಗಾರ
February 19, 2019`ಮೈಸೂರು,: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಅಂಗಸಂಸ್ಥೆಯಾದ ವಿವೇಕಾನಂದ ಇನ್‍ಸ್ಟಿಟ್ಯೂಟ್ ಫಾರ್ ಲೀಡರ್‍ಶಿಪ್ ಡೆವಲಪ್ ಮೆಂಟ್‍ನ (ವಿ-ಲೀಡ್) ವ್ಯವಸ್ಥಾಪನಾ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಅಭಿಯಂತರರಿಗಾಗಿ (ಇಂಜಿನಿಯರ್ಸ್) `ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರ ಸೋಮವಾರ ಚಾಲನೆ ಪಡೆಯಿತು. ಮಾ.2ರವರೆಗೆ ಮೈಸೂರಿನ ವಿ-ಲೀಡ್ ಆವರಣದಲ್ಲಿ ಕಾರ್ಯಾಗಾರ ನಡೆಯಲಿದ್ದು, ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ್ಞಾನ ಹೆಚ್ಚಿಸುವುದು ಮತ್ತು ಈ ಸಂಬಂಧ ರಾಜ್ಯ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಭಿಯಂತರರನ್ನು ಸಮರ್ಥಗೊಳಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ. ಜಲ ಸಂಪನ್ಮೂಲ…
ವೇಶ್ಯಾವಾಟಿಕೆ: ಮೂವರ ಬಂಧನ ನಾಲ್ವರು ಮಹಿಳೆಯರ ರಕ್ಷಣೆ
February 19, 2019ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ಧರ್ಮಪ್ಪ ಅವರ ಮಗ ರಘುನಂದ (35), ನಿಲುವಾಗಿಲು ಗ್ರಾಮದ ಸದಾಶಿವ ಅವರ ಮಗ ಪ್ರಶಾಂತ್ (30) ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ವಾಸು ಅವರ ಮಗ ಪ್ರದೀಪ್ (29) ಬಂಧಿತರು. ಅವರಿಂದ 8 ಮೊಬೈಲ್ ಫೋನುಗಳು ಹಾಗೂ 10,500 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಘುನಂದನ…
ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
February 18, 2019ಮೈಸೂರು: ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೆಎಸ್ ಆರ್‍ಪಿ ಸಿಬ್ಬಂದಿ, ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ, ಯೋಗ ಫೆಡರೇಷನ್ ಆಫ್ ಮೈಸೂರು, ಮಿಲಿಟರಿ ವೆಟರನ್ಸ್ ವೆಲ್‍ಫೆರ್ ಅಸೋಸಿಯೇಷನ್ ಮತ್ತಿತರ ಸಂಸ್ಥೆ ಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೈಸೂರಿನ ಕೋಟೆ ಆಂಜನೇಯ ದೇವ ಸ್ಥಾನದ ಬಳಿ ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ರಾದ ಯೋಧರಿಗೆ ನಮನ ಸಲ್ಲಿಸಿದರು. ಭಯೋತ್ಪಾದಕರ ದಾಳಿಗೆ ಕುಮ್ಮಕ್ಕು ನೀಡು ತ್ತಿರುವ…
ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ನೆರವು
February 18, 2019ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೋಷಿಸಿದೆ. ತಮ್ಮ ಸಂಸ್ಥೆಯ ವತಿಯಿಂದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡು ವುದಾಗಿ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ. “ನಮಗಾಗಿ, ದೇಶಕ್ಕಾಗಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಈ ಕುರಿತು ಪತ್ರಿಕೆಯಲ್ಲಿ ಓದಿದ ಕೂಡಲೇ ಹಣ ನೀಡಬೇಕೆಂದುಕೊಂಡೆ. ಆದರೆ ಹಣಕ್ಕಿಂತ ಯೋಧರ ಜೀವ ಮುಖ್ಯ. ಅದಕ್ಕಾಗಿ ನೋವಿದೆ. ಯೋಧರ ಕುಟುಂಬಕ್ಕೆ ನಮ್ಮ ಸಂಸ್ಥೆಯಿಂದ ಆರ್ಥಿಕ ನೆರವು…
ಕಾಶ್ಮೀರಿ ಪ್ರತ್ಯೇಕತಾವಾದಿಗಳ ಭದ್ರತೆ ಹಿಂಪಡೆದ ಕೇಂದ್ರ ಸರ್ಕಾರ
February 18, 2019ಜಮ್ಮು-ಕಾಶ್ಮೀರ: ಪಾಕಿಸ್ತಾನ ಹಾಗೂ ಐಎಸ್‍ಐ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ಮಿರ್ವೈಜ್ ಉಮರ್ ಫಾರುಖ್ ಸೇರಿದಂತೆ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಇಂದು ಹಿಂಪಡೆದಿದೆ. ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‍ಐ ಪರವಾಗಿ ಕೆಲಸ ಮಾಡುತ್ತಿರುವ ಪ್ರತ್ಯೇಕತಾ ವಾದಿಗಳಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ಯೋಚನೆ ಮಾಡುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದರು. ಪಾಕಿಸ್ತಾನ…
31 ವರ್ಷದಿಂದ ಕಾರು ತೊಳೆದೇ ಜೀವನ ರೂಪಿಸಿಕೊಂಡ ದೇವರಾಜು
February 18, 2019ಮೈಸೂರು: ಕಾಯಕವೇ ಕೈಲಾಸ ಎಂಬ ನೀತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಮೈಸೂರಿನ ಅಶೋಕಪುರಂ ನಿವಾಸಿಯೊಬ್ಬರು ಕಳೆದ 31 ವರ್ಷಗಳಿಂದ ಮೈಸೂರಿನ ದೇವರಾಜ ಅರಸ್ ರಸ್ತೆ ಬದಿಯಲ್ಲಿ ನಿಲ್ಲುವ ಕಾರುಗಳನ್ನು ತೊಳೆಯುವ ಕಾಯಕ ವನ್ನು ರೂಢಿಸಿಕೊಂಡು ಸಂತೃಪ್ತ ಜೀವನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಅಶೋಕಪುರಂ ನಿವಾಸಿ ದೇವರಾಜು ಎಂಬುವರೇ ಕಾರು ತೊಳೆಯುವ ಕಾಯಕ ವನ್ನೇ ಅವಲಂಬಿಸಿ, ಗ್ರಾಹಕರ ನಂಬಿಕೆ ಗಳಿಸಿ ಸೇವೆ ನೀಡುತ್ತಿರುವವರು. ರಸ್ತೆ ಗಿಳಿಯುತ್ತಿರುವ ಹೊಸ ಹೊಸ ವಾಹನ ಗಳ ಸಂಖ್ಯೆಗೆ ಅನುಗುಣವಾಗಿ ಸರ್ವಿಸ್ ಸ್ಟೇಷನ್‍ಗಳ…
ಸಿದ್ಧಗಂಗಾ ಶ್ರೀಗಳ ನಾಮಫಲಕ ಅನಾವರಣ
February 18, 2019ಮೈಸೂರು: ಮೈಸೂರಿನ ಕುವೆಂಪುನಗರದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಮೈಸೂರು ಮಹಾನಗರ ಪಾಲಿಕೆ ಅನುದಾನದಲ್ಲಿ ನಿರ್ಮಿಸಿರುವ ಸಿದ್ಧಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಾಮಫಲಕವನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಭಾನುವಾರ ಅನಾವರಣಗೊಳಿಸಿದರು. ಇಲ್ಲಿನ ಜಗದಾಂಬ ಪೆಟ್ರೋಲ್ ಬಂಕ್ ಆವರಣದಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಭಕ್ತ ವೃಂದದ ಹಮ್ಮಿಕೊಂಡಿದ್ದ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಾಮಫಲಕವನ್ನೂ ಅನಾವರಣಗೊಳಿಸಲಾಯಿತು. ಮಹಾನಗರ ಪಾಲಿಕೆಯ 98 ಸಾವಿರ ರೂ. ಅನುದಾನದಲ್ಲಿ ಶಿವಕುಮಾರ ಸ್ವಾಮೀಜಿಯವರ ನಾಮಫಲಕ ವನ್ನು ಇಲ್ಲಿ ನಿರ್ಮಿಸಲಾಗಿದೆ. ಕನಕಪುರ…
ಮೈಸೂರಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
February 18, 2019ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬ್ ಸಿಡಿಸಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನ ಉಗ್ರರ ಕೃತ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಮೈಸೂರಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಧರಣಿ ನಡೆ ಸಿದ ಕಾರ್ಯಕರ್ತರು, ಭಯೋತ್ಪಾದಕರ ಕೃತ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದರಲ್ಲದೆ, ದೇಶದ್ರೋಹಿಗಳನ್ನು ಸದೆಬಡಿಯ ಬೇಕು, ಇಡೀ ದೇಶವೇ ಪಾಕ್ ಉಗ್ರರ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂದರು. ದೇಶದೊಳಗೆ 350 ಕೆಜಿ ಬಾಂಬ್ ನೊಂದಿಗೆ ನುಸುಳಿ ಸೇನಾಪಡೆಯ ವಾಹನ…