Tag: Pratap Simha

‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ
ಮೈಸೂರು

‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ

June 24, 2018

ಮೈಸೂರು: ಮೈಸೂರಿನ ಜಲದರ್ಶಿನಿ ಬಳಿ ಅಪಘಾತ ವಲಯ ಎನಿಸಿದ್ದ ಹುಣಸೂರು ರಸ್ತೆ ತಿರುವನ್ನು ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಈಗ ಆರಂಭವಾಗಿದೆ. ತಿರುವನ್ನು ನೇರಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು 12 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಡಿ ಯೋಜನೆ ರೂಪಿಸಿದ್ದ ರಾದರೂ, ಕಡೆಗೆ ಕೇವಲ ರಸ್ತೆ ಅಗಲೀಕರಣ ಗೊಳಿಸಿ, ಡಾಂಬ ರೀಕರಣ ಮಾಡಿ ಸುಮ್ಮನಾಗಿದ್ದರು. ರಸ್ತೆ ನೇರಗೊಳಿಸಿಲ್ಲ, ಇಕ್ಕೆಲಗಳಲ್ಲಿ ಪಾದಚಾರಿ ರಸ್ತೆಗೆ ಜಾಗವನ್ನೂ ಬಿಟ್ಟಿಲ್ಲ. ಇದರಿಂದ ಇಲ್ಲಿರುವ ಮಹಾರಾಣಿ ಕಾಮರ್ಸ್ ಕಾಲೇಜು…

ಮೋದಿಯನ್ನೇ ಇನ್ನು ಮೂರು ಅವಧಿಗೆ ಪ್ರಧಾನಿ ಮಾಡಿದರೆ ಮಾತ್ರ ದೇಶಕ್ಕೆ ಉಳಿಗಾಲ
ಮೈಸೂರು

ಮೋದಿಯನ್ನೇ ಇನ್ನು ಮೂರು ಅವಧಿಗೆ ಪ್ರಧಾನಿ ಮಾಡಿದರೆ ಮಾತ್ರ ದೇಶಕ್ಕೆ ಉಳಿಗಾಲ

June 23, 2018

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಪ್ರತಿಪಾದನೆ ಮೈಸೂರು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಮೂರು ಅವಧಿಗೂ ಪ್ರಧಾನಿಯನ್ನಾಗಿ ಮಾಡಿದಾಗ ಮಾತ್ರ ದೇಶಕ್ಕೆ ಉಳಿಗಾಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ರುವ ತಮ್ಮ ನಿವಾಸದಲ್ಲಿ ಕೇಂದ್ರ ಸರ್ಕಾ ರದ ನಾಲ್ಕು ವರ್ಷಗಳ ಸಾಧನೆ ಕುರಿತಾದ ಕಿರುಹೊತ್ತಿಗೆಯನ್ನು ಸಂಸದ ಪ್ರತಾಪ ಸಿಂಹ ಅವರಿಂದ ಶುಕ್ರವಾರ ಸ್ವೀಕರಿಸಿದ ನಂತರ…

ಪ್ರಧಾನ ಮಂತ್ರಿ ಪರಿಹಾರ ನಿಧಿ ವಿತರಣೆ
ಮೈಸೂರು

ಪ್ರಧಾನ ಮಂತ್ರಿ ಪರಿಹಾರ ನಿಧಿ ವಿತರಣೆ

June 21, 2018

ಮೈಸೂರು: ಶ್ರವಣದೋಷದಿಂದ ಬಳಲುತ್ತಿದ್ದ ಮಹಿಳೆಗೆ ಶ್ರವಣ ಉಪಕರಣ ಖರೀದಿಸಲು ಪ್ರಧಾನಿಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ 23,100ರೂ.ಗಳನ್ನು ಸಂಸದ ಪ್ರತಾಪಸಿಂಹ ಹಸ್ತಾಂತರಿಸಿದರು. ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಶ್ರೀಮತಿ ತಾಯಮ್ಮ ಅವರು ಶ್ರವಣದೋಷದಿಂದ ಬಳಲುತ್ತಿದ್ದರು. ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅವರಿಗೆ ಶ್ರವಣ ಉಪಕರಣ ಖರೀಸುವಂತೆ ಸೂಚಿಸಿದ್ದರು. ಶ್ರವಣ ಉಪಕರಣ ಖರೀದಿಸಲು ಪರಿಹಾರವಾಗಿ ಸಂಸದರು ಶಿಫಾರಸು ಮಾಡಿದ್ದ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜುರಾಗಿತ್ತು.ಈ ಹಣದ ದಾಖಲೆಗಳನ್ನು ತಾಯಮ್ಮ ಅವರ ಮಗನಿಗೆ ಸಂಸದರು…

ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು :  ಸಂಸದ ಪ್ರತಾಪ್ ಸಿಂಹ
ಕೊಡಗು

ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು : ಸಂಸದ ಪ್ರತಾಪ್ ಸಿಂಹ

June 20, 2018

ಗೋಣಿಕೊಪ್ಪಲು:  ಕೊಡಗಿನ ಶಾಸಕರುಗಳು, ಸಂಸದರರು ಹಾಗೂ ಜನರ ವಿರೋಧದ ನಡುವೆ ದಕ್ಷಿಣ ಕೊಡಗು ಮೂಲಕ ಕೇರಳಕ್ಕೆ ಸಂಪ ರ್ಕಿಸಲು ಉದ್ದೇಶಿಸಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ದ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು. ಪರಿಮಳ ಮಂಗಳ ವಿಹಾರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಲಚೇರಿ ರೈಲ್ವೆ ಮಾರ್ಗಕ್ಕೆ ಕೊಡಗಿನಲ್ಲಿ ಕೇರಳದ ಕೆಆರ್‍ಡಿಸಿಎಲ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿಯಿಂದ ಅನುಮತಿ ಪಡೆದು ಸರ್ವೇ…

ಭವಿಷ್ಯ ನಿರ್ಧರಿಸುವ ಶಿಕ್ಷಣವನ್ನು ಸಂತೋಷದಿಂದ ಕಲಿಯಿರಿ: ವಿದ್ಯಾರ್ಥಿಗಳಿಗೆ ಸಂಸದ ಪ್ರತಾಪ್‍ಸಿಂಹ ಸಲಹೆ
ಮೈಸೂರು

ಭವಿಷ್ಯ ನಿರ್ಧರಿಸುವ ಶಿಕ್ಷಣವನ್ನು ಸಂತೋಷದಿಂದ ಕಲಿಯಿರಿ: ವಿದ್ಯಾರ್ಥಿಗಳಿಗೆ ಸಂಸದ ಪ್ರತಾಪ್‍ಸಿಂಹ ಸಲಹೆ

June 19, 2018

ಮೈಸೂರು: ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಆದರೆ ಎಲ್ಲಾ ಸಮಯದಲ್ಲೂ ಸಾಂಪ್ರದಾಯಿಕ ಶಿಕ್ಷಣ ಎನ್ನುವುದು ಸಿಗುವುದಿಲ್ಲವಾದ್ದರಿಂದ ನಿಮ್ಮ ಭವಿಷ್ಯ ನಿರ್ಧರಿಸುವ ಪದವಿ ಹಂತದ ವಿದ್ಯಾಭ್ಯಾಸವನ್ನು ಸಂತೋಷದಿಂದ ಕಲಿಯುವಂತೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿನಲ್ಲಿರುವಾಗ ಜೀವನದ ಜೊತೆ ಆಟವಾಡುತ್ತಾರೆ. ಆದರೆ ಕಾಲೇಜಿನ ಅಧ್ಯಯನದ ನಂತರ ಜೀವನ ಎನ್ನುವುದು ನಮ್ಮ ಜೊತೆ…

ಗಣ್ಯರಿಗೆ ಕೇಂದ್ರ ಸರ್ಕಾರದ 4 ವರ್ಷದ ಸಾಧನೆ ಸಾರುವ ಕಿರು ಪುಸ್ತಕ ಅರ್ಪಿಸಿ `ಸಂಪರ್ಕ ಸಮರ್ಥನ್’ಗೆ ಚಾಲನೆ
ಮೈಸೂರು

ಗಣ್ಯರಿಗೆ ಕೇಂದ್ರ ಸರ್ಕಾರದ 4 ವರ್ಷದ ಸಾಧನೆ ಸಾರುವ ಕಿರು ಪುಸ್ತಕ ಅರ್ಪಿಸಿ `ಸಂಪರ್ಕ ಸಮರ್ಥನ್’ಗೆ ಚಾಲನೆ

June 17, 2018

ಸುತ್ತೂರು ಶ್ರೀಗಳು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‍ಗೂ ಸಾಧನೆ ವಿವರಿಸಿದ ಸಂಸದ ಪ್ರತಾಪ್ ಸಿಂಹ ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‍ಡಿಎ ಸರ್ಕಾರದ 4 ವರ್ಷಗಳ ಸಾಧನೆಯ ಪಕ್ಷಿ ನೋಟ ಒಳಗೊಂಡ ಕಿರು ಪುಸ್ತಕ ವನ್ನು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಅರ್ಪಿ ಸುವ ಮೂಲಕ ಶನಿವಾರ ಮೈಸೂರು ಭಾಗದ ಬಿಜೆಪಿಯ ‘ಸಂಪರ್ಕ ಸಮರ್ಥನ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾ ರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವ ಈ…

ಕೇಂದ್ರದಿಂದ ಮೈಸೂರಿಗೆ 11 ಸಾವಿರ  ಕೋಟಿ ಅನುದಾನ: ಪ್ರತಾಪ್ ಸಿಂಹ
ಮೈಸೂರು

ಕೇಂದ್ರದಿಂದ ಮೈಸೂರಿಗೆ 11 ಸಾವಿರ  ಕೋಟಿ ಅನುದಾನ: ಪ್ರತಾಪ್ ಸಿಂಹ

June 17, 2018

ಮೈಸೂರು:  ಕಳೆದ 4 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರ ಮೈಸೂರಿನ ಅಭಿವೃದ್ಧಿಗಾಗಿ 11 ಸಾವಿರ ಕೋಟಿ ರೂ. ಅನುದಾನ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಬಿಜೆಪಿಯ `ಸಂಪರ್ಕ ಸಮರ್ಥನ್’ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮೈಸೂರು ಅರಮನೆ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ 48 ತಿಂಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಹೊಂದಿರುವ ಕಿರುಪುಸ್ತಕಗಳನ್ನು ಗಣ್ಯರಿಗೆ…

ಮೈಸೂರು-ಕೊಡಗು-ತಲಚೇರಿ ರೈಲ್ವೆ ಮಾರ್ಗಕ್ಕೆ ಅವಕಾಶ ನೀಡಲ್ಲ: ಸಂಸದ ಪ್ರತಾಪ್‍ಸಿಂಹ ಪುನರುಚ್ಛಾರ
ಕೊಡಗು

ಮೈಸೂರು-ಕೊಡಗು-ತಲಚೇರಿ ರೈಲ್ವೆ ಮಾರ್ಗಕ್ಕೆ ಅವಕಾಶ ನೀಡಲ್ಲ: ಸಂಸದ ಪ್ರತಾಪ್‍ಸಿಂಹ ಪುನರುಚ್ಛಾರ

June 16, 2018

ಮಡಿಕೇರಿ: ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳಂತಹ ಯೋಜನೆ ಕೊಡಗಿನ ಹಿತಾಸಕ್ತಿಗೆ ಪೂರಕವಾಗಿಯೇ ಇರುತ್ತದೆಯೇ ವಿನಾ ಕೊಡಗಿನ ಪರಿಸರಕ್ಕೆ ಖಂಡಿತಾ ಮಾರಕವಾಗಿರುವುದಿಲ್ಲ ಎಂದು ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದು, ಮೈಸೂರು-ಕೊಡಗು ತಲಚೇರಿ ರೈಲು ಮಾರ್ಗ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಬಿಜೆಪಿ ಶಾಸಕ ರಿಂದ ಪಕ್ಷದ ಕಾರ್ಯಕರ್ತರಿಗೆ ಅಭಿ ನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೆಲವರು ಫೇಸ್‍ಬುಕ್‍ನಲ್ಲಿ ತನ್ನನ್ನು ಅನವಶ್ಯಕವಾಗಿ ಟೀಕಿಸುತ್ತಿದ್ದಾರೆ. ಬೆಂಗಳೂರಿನಲ್ಲಿ…

ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ
ಕೊಡಗು, ಮೈಸೂರು

ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ

June 15, 2018

ಮೈಸೂರು:  ಪರಿಸರವಾದಿಗಳು, ಗ್ರೀನ್ ಗ್ರೂಪ್ಸ್ ಮತ್ತು ಜನಪ್ರತಿನಿಧಿಗಳು ಒತ್ತಡಕ್ಕೆ ಮಣಿದ ಭಾರತೀಯ ರೈಲು ಮಂಡಳಿಯು ಮೈಸೂರು-ಮಡಿಕೇರಿ ರೈಲು ಮಾರ್ಗವನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ.ಮಡಿಕೇರಿ ಭಾಗದ ದಟ್ಟ ಅರಣ್ಯ ಪ್ರದೇಶದ ಮರಗಳು ನಾಶವಾಗುವುದನ್ನು ಮನಗಂಡು ರೈಲು ಮಾರ್ಗ ಯೋಜನೆಯನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ಮುಂದಾಗಿರುವ ರೈಲ್ವೇ ಇಲಾಖೆಯು, ನೈಸರ್ಗಿಕ ಸಂಪತ್ತು ಉಳಿಸುವ ನಿರ್ಧಾರ ಕೈಗೊಂಡಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಕುಶಾಲನಗರ ಈಗಾಗಲೇ ಅಭಿವೃದ್ಧಿಯಾಗಿದೆ. ಇನ್ನೂ ವಿಸ್ತಾರವಾಗಿ ಮಡಿಕೇರಿಯಂತೆಯೇ ಬೆಳೆಯುವ ಎಲ್ಲಾ…

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ
ಮೈಸೂರು

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ

June 15, 2018

ಮೈಸೂರು:  ಕೊಲೆ, ಸುಲಿಗೆ, ಕಳ್ಳತನ, ದೌರ್ಜನ್ಯ, ಗಲಾಟೆ, ಗದ್ದಲ ಹೀಗೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಮೊದಲು ದೂಷಣೆಗೆ ಗುರಿಯಾಗುವುದು ಪೊಲೀಸರು. ತಮ್ಮದಲ್ಲದ ತಪ್ಪಿಗೂ ಆರೋಪ ಹೊರಬೇಕಾದ ಪರಿಧಿಯಲ್ಲಿ ಪೊಲೀಸರಿದ್ದಾರೆ. ಇಂತಹ ಸ್ಥಿತಿಯಲ್ಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವ ಪೊಲೀಸರನ್ನು ಅಭಿನಂದಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲಾಯಿತು. ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡ್‍ನ್‍ನ ಸಮಾವೇಶ ಸಭಾಂಗಣದಲ್ಲಿ ಇಂದು ಸಂಜೆ ನಡೆದ…

1 2 3
Translate »