ಗಣ್ಯರಿಗೆ ಕೇಂದ್ರ ಸರ್ಕಾರದ 4 ವರ್ಷದ ಸಾಧನೆ ಸಾರುವ ಕಿರು ಪುಸ್ತಕ ಅರ್ಪಿಸಿ `ಸಂಪರ್ಕ ಸಮರ್ಥನ್’ಗೆ ಚಾಲನೆ
ಮೈಸೂರು

ಗಣ್ಯರಿಗೆ ಕೇಂದ್ರ ಸರ್ಕಾರದ 4 ವರ್ಷದ ಸಾಧನೆ ಸಾರುವ ಕಿರು ಪುಸ್ತಕ ಅರ್ಪಿಸಿ `ಸಂಪರ್ಕ ಸಮರ್ಥನ್’ಗೆ ಚಾಲನೆ

June 17, 2018

ಸುತ್ತೂರು ಶ್ರೀಗಳು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‍ಗೂ ಸಾಧನೆ ವಿವರಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‍ಡಿಎ ಸರ್ಕಾರದ 4 ವರ್ಷಗಳ ಸಾಧನೆಯ ಪಕ್ಷಿ ನೋಟ ಒಳಗೊಂಡ ಕಿರು ಪುಸ್ತಕ ವನ್ನು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಅರ್ಪಿ ಸುವ ಮೂಲಕ ಶನಿವಾರ ಮೈಸೂರು ಭಾಗದ ಬಿಜೆಪಿಯ ‘ಸಂಪರ್ಕ ಸಮರ್ಥನ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ನರೇಂದ್ರ ಮೋದಿ ನೇತೃತ್ವದ ಸರ್ಕಾ ರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವ ಈ ‘ಸಂಪರ್ಕ ಸಮರ್ಥನ್’ ಅಭಿಯಾನಕ್ಕೆ ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಿದ್ದರು. ಆ ಬಳಿಕ ದೇಶದಾದ್ಯಂತ ಬಿಜೆಪಿ ನಾಯಕರು ಗಣ್ಯರನ್ನು ಭೇಟಿ ಮಾಡಿ ಕೇಂದ್ರ ಸರ್ಕಾ ರದ ಸಾಧನೆಯನ್ನು ಬಿಂಬಿಸುವ ಕಿರು ಪುಸ್ತಕ ನೀಡುವ ಮೂಲಕ `ಸಂಪರ್ಕ ಸಮರ್ಥನ್’ ಅಭಿಯಾನ ಮುಂದುವರೆಸಿದ್ದಾರೆ.

ಗಣ್ಯ ವ್ಯಕ್ತಿಗಳಿಗೆ ಈ ಕಿರುಪುಸ್ತಕ ನೀಡು ವುದರೊಂದಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ, ಅವರ ಬೆಂಬಲ ಕೋರು ವುದು. ಆ ಮೂಲಕ ಮುಂಬರುವ ಲೋಕ ಸಭಾ ಚುನಾವಣೆಗೆ ಬಿಜೆಪಿಗೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದ ಅಭಿಯಾನ ಇದಾಗಿದೆ. ಅದರಂತೆ ಇಂದು ಬೆಳಿಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್‍ಸಿಂಹ, ಶ್ರೀಗಳನ್ನು ಹೂ ಮತ್ತು ಶಾಲಿನೊಂದಿಗೆ ಗೌರವಿಸಿ, ಆಶೀರ್ವಾದ ಪಡೆದರು. ಬಳಿಕ ಸಾಧನೆಯ ಕಿರುಪುಸ್ತಕ ವನ್ನು ಸ್ವಾಮೀಜಿಯವರಿಗೆ ಸಮರ್ಪಿಸಿ ದರು. ಇಂಗ್ಲಿಷ್ ಅವತರಣಿಕೆಯ ಕಿರು ಪುಸ್ತಕದೊಂದಿಗೆ ಕನ್ನಡದಲ್ಲಿ ಸಂಕ್ಷಿಪ್ತವಾಗಿ ವಿವರಿಸಿರುವ ಕರಪತ್ರ
ಹಾಗೂ ತಮ್ಮ ಸಾಧನೆಯ ಕರಪತ್ರವನ್ನು ಸ್ವಾಮೀಜಿಯವರಿಗೆ ಅರ್ಪಿಸಿದರು. ಇದೇ ವೇಳೆ ಸ್ವಾಮೀಜಿಯವರಿಗೆ ಪ್ರತಾಪ್ ಸಿಂಹ ಕಿರುಪುಸ್ತಕದ ಮಾಹಿತಿಯನ್ನು ವಿವರಿಸಿದರು.

`ಆಯುಷ್ಮಾನ್ ಭಾರತ್’ ಆಗಸ್ಟ್‍ನಲ್ಲಿ ಜಾರಿ: ಸುಮಾರು 10 ಕೋಟಿ ಬಡ ಕುಟುಂಬ ಗಳಿಗೆ ಆರೋಗ್ಯ ಸೇವೆ ಒದಗಿಸುವ `ಆಯುಷ್ಮಾನ್ ಭಾರತ್’ ವಿಮಾ ಯೋಜನೆ ಆಗಸ್ಟ್‍ನಲ್ಲಿ ಜಾರಿಗೊಳ್ಳಲಿದೆ. ಇದರಿಂದ ವರ್ಷಕ್ಕೆ ಒಂದು ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ವೈದ್ಯಕೀಯ ಸೇವೆ ಲಭ್ಯವಾಗಲಿದೆ ಎಂದು ಶ್ರೀಗಳಿಗೆ ಸಂಸದರು ವಿವರಿಸಿದರು.

ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. 12.5 ಕೋಟಿಗೂ ಹೆಚ್ಚು ಮಣ್ಣು ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಹೆಚ್ಚು ಫಸಲನ್ನು ಖಾತ್ರಿಪಡಿಸುವ ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಬಡವರಿಗಾಗಿ ಸುಮಾರು 1 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಸುಮಾರು 1.69 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಎಲ್ಲಾ ವರ್ಗಗಳ ಪ್ರಗತಿಗೆ ಅಗತ್ಯ ಕಾರ್ಯಕ್ರಮಗಳನ್ನು ನೀಡಲಾಗಿದೆ.

ಮೋದಿ ಕೊಟ್ಟಿದ್ದು ಸಿಂಹ ತಂದಿದ್ದು!: `4 ವರ್ಷಗಳಲ್ಲಿ ಮೋದಿ ಮೈಸೂರಿಗೆ ಕೊಟ್ಟಿದ್ದೇನು? ಪ್ರತಾಪ್ ಸಿಂಹ ತಂದಿದ್ದೇನು?’ ಕರಪತ್ರವನ್ನು ಸ್ವಾಮೀಜಿಯವರಿಗೆ ನೀಡಿದ ಸಂಸದ ಪ್ರತಾಪ್ ಸಿಂಹ, ಇದರಲ್ಲಿ ಕಳೆದ 4 ವರ್ಷಗಳಲ್ಲಿ ಕೇಂದ್ರದ ಅನುದಾನದಲ್ಲಿ ಕಾರ್ಯಗತಗೊಳಿಸಿದ ಯೋಜನೆಗಳ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.

ಸೆಟಲೈಟ್ ರೈಲ್ವೆ ಟರ್ಮಿನಲ್ ನಿರ್ಮಾಣ: ನಾಗನಹಳ್ಳಿಯ 347 ಎಕರೆ ಪ್ರದೇಶದಲ್ಲಿ 789 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲೇ ಅತ್ಯಂತ ದೊಡ್ಡ ಸೆಟಲೈಟ್ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರು-ಬೆಂಗಳೂರು ಜೋಡಿ ರೈಲು ಹಳಿ ಮಾರ್ಗ ಪೂರ್ಣಗೊಳಿಸಿ, ಇದಕ್ಕೆ ಮೋದಿಯವರೇ ಚಾಲನೆ ಸಹ ನೀಡಿದ್ದಾರೆ. ಮೈಸೂರಿನಿಂದ ಉತ್ತರ ಭಾರತಕ್ಕೆ ನೇರ ಸಂಪರ್ಕ ಕಲ್ಪಿಸಲು `ಹಮ್ ಸಫರ್’ ರೈಲಿಗೆ ಮೋದಿಯವರೇ ಚಾಲನೆ ನೀಡಿದ್ದಾರೆ. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ `ಬ್ರೈಲ್ ಎನೇಬಲ್ಡ್’ ವ್ಯವಸ್ಥೆಗೊಳಿಸಿದ್ದು, ಇದನ್ನು ಅಳವಡಿಸಿದ ದೇಶದ ಮೊದಲ ರೈಲ್ವೆ ನಿಲ್ದಾಣ ಎಂಬ ಖ್ಯಾತಿಯೂ ಸಂದಿದೆ ಎಂದು ವಿವರಿಸಿದರು. ಕೇಂದ್ರದ ಅನುದಾನದಲ್ಲಿ ರಿಂಗ್ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ವಿಭಜಕದಲ್ಲಿ 6 ಸಾವಿರ ಬೇವು, ಹೆಬ್ಬೇವು ಗಿಡಗಳನ್ನು ನೆಡಲಾಗಿದೆ. ಕೇಂದ್ರ ರಸ್ತೆ ನಿಧಿಯಿಂದ ಮೈಸೂರಿಗೆ 202 ಕೋಟಿ ರೂ. ಹಾಗೂ ಕೊಡಗಿಗೆ 34 ಕೋಟಿ ಮಂಜೂರು ಮಾಡಿಸಲಾಗಿದೆ. `ಹೌಸಿಂಗ್ ಫಾರ್ ಆಲ್’ ಯೋಜನೆಯಡಿ ತಲಾ 1.5 ಲಕ್ಷ ರೂ.ಗಳಲ್ಲಿ ಮೈಸೂರಿನ ಕೆಆರ್ ಕ್ಷೇತ್ರದಲ್ಲಿ 3543, ಚಾಮರಾಜದಲ್ಲಿ 655, ಎನ್‍ಆರ್‍ನಲ್ಲಿ 1525 ಹಾಗೂ ಹುಣಸೂರಿನಲ್ಲಿ 500 ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಮೈಸೂರಿನಲ್ಲಿ 33 ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಪ್ರಮೋದಾದೇವಿ ಒಡೆಯರ್ ಭೇಟಿ: ಸುತ್ತೂರು ಮಠದಿಂದ ಮೈಸೂರು ಅರಮನೆಗೆ ತೆರಳಿದ ಸಂಸದ ಪ್ರತಾಪ್ ಸಿಂಹ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಕೇಂದ್ರದ ಸಾಧನೆಯ ಕಿರುಪುಸ್ತಕ ನೀಡಿ, ಕೇಂದ್ರ ಹಾಗೂ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಬಿಜೆಪಿ ಮುಖಂಡರಾದ ಮಲ್ಲಪ್ಪಗೌಡ, ಮೈ.ವಿ.ರವಿಶಂಕರ್ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Translate »