ಮೈಸೂರು-ಕೊಡಗು-ತಲಚೇರಿ ರೈಲ್ವೆ ಮಾರ್ಗಕ್ಕೆ ಅವಕಾಶ ನೀಡಲ್ಲ: ಸಂಸದ ಪ್ರತಾಪ್‍ಸಿಂಹ ಪುನರುಚ್ಛಾರ
ಕೊಡಗು

ಮೈಸೂರು-ಕೊಡಗು-ತಲಚೇರಿ ರೈಲ್ವೆ ಮಾರ್ಗಕ್ಕೆ ಅವಕಾಶ ನೀಡಲ್ಲ: ಸಂಸದ ಪ್ರತಾಪ್‍ಸಿಂಹ ಪುನರುಚ್ಛಾರ

June 16, 2018

ಮಡಿಕೇರಿ: ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳಂತಹ ಯೋಜನೆ ಕೊಡಗಿನ ಹಿತಾಸಕ್ತಿಗೆ ಪೂರಕವಾಗಿಯೇ ಇರುತ್ತದೆಯೇ ವಿನಾ ಕೊಡಗಿನ ಪರಿಸರಕ್ಕೆ ಖಂಡಿತಾ ಮಾರಕವಾಗಿರುವುದಿಲ್ಲ ಎಂದು ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದು, ಮೈಸೂರು-ಕೊಡಗು ತಲಚೇರಿ ರೈಲು ಮಾರ್ಗ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಮಡಿಕೇರಿಯಲ್ಲಿ ನಡೆದ ಬಿಜೆಪಿ ಶಾಸಕ ರಿಂದ ಪಕ್ಷದ ಕಾರ್ಯಕರ್ತರಿಗೆ ಅಭಿ ನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೆಲವರು ಫೇಸ್‍ಬುಕ್‍ನಲ್ಲಿ ತನ್ನನ್ನು ಅನವಶ್ಯಕವಾಗಿ ಟೀಕಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ಫೇಸ್ ಬುಕ್ ಮೂಲಕ ಕೊಡಗಿನ ಉದ್ದಾರದ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇಂತಹವರು ಮೊದಲು ತಮ್ಮೂರಿಗೆ ಬಂದು ತಮ್ಮ ತೋಟಗಳನ್ನು ವಲಸಿಗರ ಅತಿಕ್ರಮಣದಿಂದ ರಕ್ಷಿಸಲಿ. ಕೊಡಗಿನ ಸಂಪತ್ತನ್ನು ಕಳ್ಳ-ಕಾಕರಿಂದ ರಕ್ಷಿಸಲಿ ಎಂದು ಖಾರವಾಗಿ ನುಡಿದರು.

ಮೈಸೂರು – ಮಡಿಕೇರಿಗೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗ ಲಿದೆ. ಸೆಪ್ಟೆಂಬರ್ ನಲ್ಲಿ ಮೈಸೂರು – ಬೆಂಗಳೂರು ನಡುವಿನ 8 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು ಎರಡು ವರ್ಷದೊಳ ಗಾಗಿ ಈ ಕಾರ್ಯ ಮುಕ್ತಾಯವಾಗಲಿದೆ. ಈ ಯೋಜನೆಗಳೂ ಕೊಡಗಿನ ಅಭಿ ವೃದ್ದಿಗೆ ಪೂರಕವಾಗಿಯೇ ಇರುತ್ತದೆಯೇ ವಿನಾ ಖಂಡಿತಾ ಕೊಡಗಿನ ಪರಿಸರಕ್ಕೆ ಮಾರಕವಾಗುವುದಿಲ್ಲ. ಮೈಸೂರಿನಿಂದ ಕುಶಾಲನಗರಕ್ಕೆ ಉದ್ದೇಶಿತ ರೈಲು ಮಾರ್ಗದಿಂದಾಗಿ ಕೊಡಗಿನ ಒಂದೇ ಒಂದು ಮರವೂ ನಾಶವಾಗಲಾರದು ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಕೇರಳಕ್ಕೆ ಕೊಡಗಿನ ಮೂಲಕ ಮೈಸೂರಿ ನಿಂದ ರೈಲು ಮಾರ್ಗಕ್ಕೆ ತನ್ನ ತೀವ್ರ ವಿರೋಧವಿದೆ. ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಅನುಮತಿಯಿಲ್ಲದೇ ಕೊಂಕಣ ರೈಲ್ವೆ ನಿಗಮದ ಅಧಿಕಾರಿಗಳು ಕೊಡಗಿಗೆ ಸರ್ವೇ ಕಾರ್ಯಕ್ಕೆ ಕಾಲಿಡಲು ಸಾದ್ಯವೇ ಇಲ್ಲ. ಈ ಯೋಜನೆ ಹಿಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಸ್ತಾಪಗೊಂಡಿದ್ದೇ ವಿನಾ ಮೋದಿ ನೇತೃತ್ವದ ಸರ್ಕಾರಕ್ಕೆ ಪರಿಸರ ನಾಶಮಾಡಿ ಕೊಡಗಿನ ಮೂಲಕ ರೈಲು ಮಾರ್ಗದ ಉದ್ದೇಶ ಖಂಡಿತಾ ಇಲ್ಲ ಎಂದು ಪುನರುಚ್ಚರಿಸಿದರು.

Translate »