ವಿದ್ಯುತ್ ತಂತಿ ತುಳಿದು ಎರಡು ಹಸು ಸಾವು
ಕೊಡಗು

ವಿದ್ಯುತ್ ತಂತಿ ತುಳಿದು ಎರಡು ಹಸು ಸಾವು

June 16, 2018

ಕುಶಾಲನಗರ: ಇಲ್ಲಿನ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂದಾನಿ ಪುರ ಫಾರಂನಲ್ಲಿ ವಿದ್ಯುತ್ ತಂತಿ ತುಳಿದು ಎರಡು ಹಸುಗಳು ಸ್ಥಳದಲ್ಲಿಯೆ ಮೃತಪಟ್ಟಿ ರುವ ಘಟನೆ ಇತ್ತೀಚೆಗೆ ನಡೆದಿದೆ.

ಸಮೀಪದ ಆರನೇ ಹೊಸಕೋಟೆ ಗ್ರಾಮದ ನಿವಾಸಿ ರೈತ ರೇವಣ್ಣ ಎಂಬುವ ವರಿಗೆ ಈ ಹಸುಗಳೇ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದು, ಈ ಹಸುಗಳ ಸಾವಿ ನಿಂದ ರೂ. 40 ಸಾವಿರಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ. ಅಂದಾನಿಪುರ ಫಾರಂಗೆ ಹಸುಗಳು ಹುಲ್ಲು ಮೇಯಲು ಹೋದ ಸಂದರ್ಭ ಈ ದುರ್ಘಟನೆ ನಡೆದಿದೆ. ವಿದ್ಯುತ್ ಕಂಬದಿಂದ ಕಳಚಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಸಂದರ್ಭ ವಿದ್ಯುತ್ ಶಾಕ್ ಹೊಡೆದು ಎರಡು ಹಸುಗಳು ಮೃತಪಟ್ಟಿವೆ. ಎರಡು ಹಸುಗಳನ್ನು ಕಳೆದು ಕೊಂಡು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತ ರೇವಣ್ಣನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್ ಆಗ್ರಹಿಸಿದ್ದಾರೆ.

Translate »