Tag: Rohini Sindhuri

ನಿಯಮಾನುಸಾರ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
ಹಾಸನ

ನಿಯಮಾನುಸಾರ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ

July 14, 2018

ಅರಕಲಗೂಡು: ಪಟ್ಟಣದಲ್ಲಿಂದು ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಸುಮಾರು 4 ಗಂಟೆಗಳಿಗೂ ಅಧಿಕ ಕಾಲ 200ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಸರ್ವೇ, ಪೋಡಿ ದುರಸ್ತಿ, ಭೂ ಮಂಜೂರಾತಿ, ತಿದ್ದುಪಡಿ ಸೇರಿದಂತೆ ಹಲವರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಸಲ್ಲಿಸಿದ ವೈಯಕ್ತಕ ಮನವಿಗಳನ್ನು ಆಲಿಸಿದರು. ಆಶ್ರಯ ಮನೆ ಹಂಚಿಕೆ, ಸರ್ಕಾರಿ ಜಮೀನು ಒತ್ತುವರಿ ತೆರವು,…

ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ
ಹಾಸನ

ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ

July 13, 2018

ಹಾಸನ: ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ಸಹಕಾರ ನೀಡಿದ ಆರೋಪದಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ವ್ಯವಸ್ಥಾಪಕ ಜಗದೀಶ್ ಅವರನ್ನು ಅಮಾನತುಗೊಳಿಸಿರುವ ಡಿಸಿ ರೋಹಿಣಿ ಸಿಂಧೂರಿ, ಹಿರಿಯ ಭೂ ವಿಜ್ಞಾನಿ ಪದ್ಮಜಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ, ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಜ. 29ರಂದು ಸರ್ಕಾರಿ ಜಮೀನು ಸರ್ವೆ…

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ
ಹಾಸನ

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ

July 12, 2018

ಹೊಳೆನರಸೀಪುರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದು ಹೊಳೆನರಸೀಪುರದಲ್ಲಿ ಸಾರ್ವಜನಿಕರಿಂದ 190ಕ್ಕೂ ಅಧಿಕ ಕುಂದು-ಕೊರತೆಗಳ ಅರ್ಜಿ ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಭೂಮಿಗೆ ಸಂಬಂಧಿಸಿದಂತೆ, ಹೆಚ್ಚು ಮನವಿಗಳನ್ನು ಸ್ವೀಕರಿಸಿದ ಅವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಎಲ್ಲಾ ತಾಲೂಕುಗಳಂತೆ ಹೊಳೆನರಸೀಪುರದಲ್ಲಿ ಭೂಮಿಗೆ ಸಂಬಂಧಿ ಸಿದ ಮನವಿಗಳೇ ಹೆಚ್ಚಾಗಿ ಬಂದವು ಪೋಡಿ, ಸರ್ವೆ, ಹದ್ದುಬಸ್ತು, ಜಮೀನು ಮಂಜೂರಾತಿ, ಅಕ್ರಮ ಸಕ್ರಮ, ಕೆರೆ ಜಾಗ, ದಾಖಲಾತಿ ಸರಿಪಡಿಸುವುದು ಹೀಗೆ ಹತ್ತಾರು ಮನವಿಗಳು ಬಂದವು. ಹೇಮಾವತಿ ಯೋಜನಾ…

ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ
ಹಾಸನ

ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ

July 11, 2018

ಹಾಸನ: ಮಾನವ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ ಮೂಲ ಭೂತ ಆಶಯದಂತೆ ಅಧಿಕಾರಿಗಳ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಹೆಚ್.ವಾಘೇಲಾ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಇರುವ ಪ್ರಕರಣಗಳ ವಿಮರ್ಶೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗರಿಷ್ಠ ನೆರವನ್ನು ಒದಗಿಸುವ ಮನೋಭಾವ ಹೊಂದಿರಬೇಕು ಎಂದರು. ಜನಸಾಮಾನ್ಯರು ಜೀವನದ ಸಮಸ್ಯೆ ಕುಂದು-ಕೊರತೆಗಳನ್ನು ಎದುರಿಸುತ್ತಿರು ತ್ತಾರೆ. ಅವನ್ನು ಬಗೆಹರಿಸಲು…

ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ
ಹಾಸನ

ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ

July 10, 2018

ಚನ್ನರಾಯಪಟ್ಟಣ: ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರಿಂದು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ, ಕೂಡಲೇ ಬಗೆಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸುಮಾರು ನಾಲ್ಕುಗಂಟೆಗಳ ಕಾಲ ಅತ್ಯಂತ ತಾಳ್ಮೆಯಿಂದ ಎಲ್ಲರ ಕುಂದುಕೊರತೆ ಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸಿದರು. ಸುಮಾರು 310ಕ್ಕೂ ಅಧಿಕ ಅರ್ಜಿಗಳು ಸ್ವೀಕಾರವಾದವು. ನೂರಾರು ವೈಯಕ್ತಿಕ ಹಾಗೂ ಹತ್ತಾರು ಸಾರ್ವ ಜನಿಕ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ಪಟ್ಟಣದ ಜನತೆ ಅರ್ಜಿ ಸಲ್ಲಿಸಿದರು. ಜಮೀನು ಮಂಜೂರಾತಿ…

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ
ಹಾಸನ

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ

July 8, 2018

ಆಲೂರು: ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸಾರ್ವ ಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ 190ಕ್ಕೂ ಹೆಚ್ಚು ದೂರು ಸಲ್ಲಿಕೆಯಾದವು. ಬೆಳಿಗ್ಗೆಯಿಂದಲೇ ನೂರಾರು ಮಂದಿ ಹಾಜರಾಗಿ ಜಿಲ್ಲಾಧಿಕಾರಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ರೈತರ ಜಮೀನಿನ ಸರ್ವೇ ಕಾರ್ಯ, ಜಮೀನು ಮಂಜೂರಾತಿ, ಯೋಜನಾ ನಿರಾಶ್ರಿತರಿಗೆ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ರೀತಿಯ 190ಕ್ಕೂ ಅಧಿಕ ಅರ್ಜಿ ಗಳು ಸಲ್ಲಿಕೆಯಾದವು. ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಕೆಎಸ್‍ಆರ್‍ಟಿಸಿ…

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ
ಹಾಸನ

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ

July 7, 2018

ಬೇಲೂರು: ತಾಲೂಕು ಪ್ರವಾಸ ಮುಂದುವರೆಸಿರುವ ಡಿಸಿ ರೋಹಿಣಿ ಸಿಂಧೂರಿ ಪಟ್ಟಣದಲ್ಲಿಂದು ವಿವಿಧ ಇಲಾಖೆ ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಸಿದರು. ಸುರಿಯುವ ಮಳೆ ಯಲ್ಲೂ ನೂರಾರು ಮಂದಿ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡರು. ಬೇಲೂರು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಿಂದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಸುಮಾರು ನಾಲ್ಕೂವರೆ ಗಂಟೆ ಕಾಲ ಸಾರ್ವಜನಿಕರಿಂದ 345ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಯಿತು. ಬೆಳಿಗ್ಗೆಯಿಂದಲೇ ತುಂತುರು ರೀತಿ ಆರಂಭ ವಾದ ಮಳೆ ಸಭೆಗೆ ಅಡ್ಡಿ ಪಡಿಸಿತು….

ಭತ್ತದ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ
ಹಾಸನ

ಭತ್ತದ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ

July 6, 2018

ಹಾಸನ: ‘ರಾಜ್ಯ ಸರ್ಕಾರದ ಸೂಚನೆಯಂತೆ ಕೂಡಲೇ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಅಗತ್ಯವಿರುವ ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳು ಕ್ರಮಕೈಗೊಳ್ಳ ಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಭತ್ತ ಖರೀದಿ ಕೇಂದ್ರ ತೆರೆಯುವ ಕುರಿ ತಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹೊಳೆನರಸೀಪುರದಲ್ಲಿ ಈ ಬಾರಿ ಹೆಚ್ಚಾಗಿ ಹಿಂಗಾರು ಋತುವಿನಲ್ಲಿ (ಬೇಸಿಗೆ ಬೆಳೆ) ಭತ್ತ…

ಸಕಲೇಶಪುರದಲ್ಲಿ ಡಿಸಿಗೆ ಅಹವಾಲುಗಳ ಸುರಿಮಳೆ
ಹಾಸನ

ಸಕಲೇಶಪುರದಲ್ಲಿ ಡಿಸಿಗೆ ಅಹವಾಲುಗಳ ಸುರಿಮಳೆ

July 5, 2018

ಸಕಲೇಶಪುರ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ದೂರುಗಳ ಮಳೆಯೇ ಸುರಿಯಿತು.ಪಟ್ಟಣ ಪುರಭವನ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ತಾಲೂಕಿನ ಜನತೆ ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು. ಸಭೆಯಲ್ಲಿ ನೂರಾರು ರೈತರು ವೈಯಕ್ತಿಕ ಹಾಗೂ ಗ್ರಾಮದ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಎಲ್ಲಾ ಅರ್ಜಿಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಸಭೆಯಲ್ಲಿ ಭೂಮಿ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚಿನ ದೂರು…

ಜನಸಂಪರ್ಕ ಸಭೆ ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ಹಾಸನ

ಜನಸಂಪರ್ಕ ಸಭೆ ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

July 3, 2018

ಹಾಸನ: ತಾಲೂಕು ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾಲೂಕು ಕಚೇರಿಗಳಿಗೆ ಭೇಟಿ-ಪರಿಶೀಲನೆ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸುವ ಪ್ರಕ್ರಿಯೆ ಆರಂಭಿಸಿದ್ದು, ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ತಾಲೂಕು ಕಚೇರಿಗೆ ಇಂದು ಬೆಳಿಗ್ಗೆ 10.30ಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿ, ಸುಮಾರು ಮೂರೂವರೇ ಗಂಟೆ ಕಾಲ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದು ಕೊಂಡರು. ನಂತರ ಜನರಿಂದ 150ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ, ಅಹವಾಲು ಆಲಿಸಿದರು….

1 2 3 4
Translate »