ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ
ಹಾಸನ

ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ

July 11, 2018

ಹಾಸನ: ಮಾನವ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ ಮೂಲ ಭೂತ ಆಶಯದಂತೆ ಅಧಿಕಾರಿಗಳ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಹೆಚ್.ವಾಘೇಲಾ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಇರುವ ಪ್ರಕರಣಗಳ ವಿಮರ್ಶೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗರಿಷ್ಠ ನೆರವನ್ನು ಒದಗಿಸುವ ಮನೋಭಾವ ಹೊಂದಿರಬೇಕು ಎಂದರು.

ಜನಸಾಮಾನ್ಯರು ಜೀವನದ ಸಮಸ್ಯೆ ಕುಂದು-ಕೊರತೆಗಳನ್ನು ಎದುರಿಸುತ್ತಿರು ತ್ತಾರೆ. ಅವನ್ನು ಬಗೆಹರಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅದರ ಅನುಷ್ಠಾನದ ಹೊಣೆಯನ್ನು ವಿವಿಧ ಇಲಾಖೆಗಳಿಗೆ ವಹಿಸಿದೆ. ಆ ಕಾರ್ಯ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಹಾಗಾದಲ್ಲಿ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ಮಾನವ ಹಕ್ಕುಗಳ ಆಯೋಗಕ್ಕೆ ಸರ್ಕಾರಿ ಇಲಾಖೆಗಳು ಸಹಕಾರ ಮತ್ತು ಸ್ಪಂದನೆ ನೀಡಿದರೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಸುಲಭ ಹಾಗೂ ತ್ವರಿತವಾಗಿ ಇತ್ಯರ್ಥ ಪಡಿಸಬಹುದು. ಕರ್ನಾಟಕ ತಮ್ಮ ನೆಚ್ಚಿನ ರಾಜ್ಯವಾಗಿದ್ದು, ಹಿಂದಿನ ಇಲ್ಲಿನ ಸೇವೆ ತಮಗೆ ಹೆಚ್ಚು ತೃಪ್ತಿ ತಂದಿದೆ ಹಾಗಾಗಿ ತಾವು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಸಮ್ಮತಿಸಿ ಅಧಿಕಾರ ವಹಿಸಿ ಕೊಂಡಿರುವುದಾಗಿ ಅವರು ಹಳೆ ನೆನಪು ಗಳನ್ನು ಮೆಲುಕು ಹಾಕಿದರು.

ಹಾಸನ ಜಿಲ್ಲೆ ಅತ್ಯಂತ ಸುಂದರ ಮತ್ತು ಪ್ರಸಿದ್ಧ ಸ್ಥಳ. ಇಲ್ಲಿ ಮಾನವ ಹಕ್ಕುಗಳ ಉಲ್ಲಂ ಘನೆ ಪ್ರಕರಣಗಳ ದೂರುಗಳು ಕೂಡ ಕಡಿಮೆ ಇವೆ. ಮುಂದಿನ ದಿನಗಳಲ್ಲಿ ಇಲ್ಲಿ ಒಂದು ದೂರು ಕೇಳಿ ಬರದಂತೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿ ದರಲ್ಲದೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಾರ್ಯ ಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ. ಆಯೋಗಕ್ಕೆ ಸಲ್ಲಿಸಬೇಕಾಗಿರುವ ವರದಿ ಗಳನ್ನು ನಿರ್ದಿಷ್ಟ ಅವಧಿಯೊಳಗೆ ಕಳುಹಿಸಿ ಕೊಡಲಾಗುವುದು ಎಂದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಪ್ರೋಬೆಷನರಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಕ ಉಪವಿಭಾ ಗಾಧಿಕಾರಿ ಡಾ.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Translate »