ಜನಸಂಪರ್ಕ ಸಭೆ ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ಹಾಸನ

ಜನಸಂಪರ್ಕ ಸಭೆ ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

July 3, 2018

ಹಾಸನ: ತಾಲೂಕು ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾಲೂಕು ಕಚೇರಿಗಳಿಗೆ ಭೇಟಿ-ಪರಿಶೀಲನೆ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸುವ ಪ್ರಕ್ರಿಯೆ ಆರಂಭಿಸಿದ್ದು, ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ತಾಲೂಕು ಕಚೇರಿಗೆ ಇಂದು ಬೆಳಿಗ್ಗೆ 10.30ಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿ, ಸುಮಾರು ಮೂರೂವರೇ ಗಂಟೆ ಕಾಲ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದು ಕೊಂಡರು. ನಂತರ ಜನರಿಂದ 150ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ, ಅಹವಾಲು ಆಲಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಿ ಸರಿ ಇದ್ದ ಅರ್ಜಿಗಳ ಬಗ್ಗೆ ಕ್ರಮ ವಹಿಸಲು ಸ್ಥಳದಲ್ಲೇ ಸೂಚಿಸಿದರು.

ನೂರಾರು ಮಂದಿ ತಮ್ಮ ಕುಂದು ಕೊರತೆ ಅರ್ಜಿ ಸಲ್ಲಿಸಿ ಶೀಘ್ರವಾಗಿ ಇತ್ಯರ್ಥ ಪಡಿಸಿ ಕೊಡುವಂತೆ ಜಿಲ್ಲಾಧಿಕಾರಿಗಳ ಬಳಿ ಕೋರಿಕೆ ಸಲ್ಲಿಸಿದರು. ಹಲವರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಪಡಿಸಿ ಕೊಡುವಂತೆ, ಹಕ್ಕು ಪತ್ರ ಒದಗಿಸುವಂತೆ ಮನವಿ ಸಲ್ಲಿಸಿದರು. ಇಂದು ಬಂದ ಮನವಿ ಗಳಲ್ಲಿ ಬಹುತೇಕ ಭೂಮಿಗೆ ಸಂಬಂಧಿಸಿ ದ್ದಾಗಿದ್ದು ವಿಶೇಷವಾಗಿತ್ತು.

ವಸತಿ ಶಾಲೆ, ಹಾಸ್ಟೆಲ್ ಸೀಟು ಹಂಚಿಕೆ, ಸರ್ಕಾರಿ ಸಬ್ಸಿಡಿ ಸಾಲ, ಕಾಲೇಜು ಅವಧಿಗೆ ಬಸ್ ಸೌಲಭ್ಯ, ವಿಧವಾ ವೇತನ ಮಂಜೂ ರಾತಿ, ಗ್ರಾಮದ ರಸ್ತೆ ದುರಸ್ತಿ, ಗ್ರಾಮ ಠಾಣಾ ಜಾಗ ಹದ್ದುಬಸ್ತು ವಿವಾದ, ಬೆಳೆ ವಿಮೆ, ಅಕ್ರಮ ಮದ್ಯ ಮಾರಾಟ ತಡೆ, ದರಖಾಸ್ತು ಜಮೀನು ದುರಸ್ತಿ ಸೇರಿದಂತೆ ಹತ್ತಾರು ಬಗೆಯ ಅಹವಾಲುಗಳು ಜಿಲ್ಲಾಧಿ ಕಾರಿಯವರ ಮುಂದೆ ಬಂದವು.

ಎಲ್ಲಾ ಅರ್ಜಿಗಳಿಗೂ ಸ್ವೀಕೃತಿ ಮಾಡಿ, ತೆಗೆದುಕೊಂಡ ಕ್ರಮದ ಬಗ್ಗೆ ತಮಗೆ ವರದಿ ಸಲ್ಲಿಸುವಂತೆ ಅಧಿಕಾರಿ ಸಿಬ್ಬಂದಿ ಗಳಿಗೆ ತಾಕೀತು ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಿಗದಿತ ಸಮಯ ಕ್ಕಿಂತಲೂ ಹೆಚ್ಚಿನ ಅವಧಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಇರುವ ಅಧಿಕಾರಿ ಗಳಿಗೆ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸದಂತೆ ಸೂಚಿಸಿದರು.

ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ನ್ಯಾಯ ಸಮ್ಮತ ವಾಗಿದ್ದ ಪ್ರಕರಣಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥ ಪಡಿಸಬೇಕು. ಸರ್ಕಾರಿ ಇಲಾಖೆ ಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇದ್ದು, ಜನ ಪರ ಸೇವೆ ಸಲ್ಲಿಸಲು ಮನಸ್ಸಿ ಲ್ಲದ, ನಿರ್ಲಕ್ಷ್ಯ ತೋರುವ ಅಧಿಕಾರಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳೆ ವಿಮೆ ಕುರಿತು ಚರ್ಚಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅವರು, ವಿಮಾ ಕಂಪನಿ ಪ್ರತಿನಿಧಿಗಳನ್ನು ಕರೆದು ಸಭೆ ನಡೆಸಿ ರೈತರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯ ನಿರ್ವ ಹಿಸಲು ಸೂಚಿಸುವುದಾಗಿ ತಿಳಿಸಿದರು.

ಸಭೆಯ ಅಂತ್ಯದಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜು, ಸಾರ್ವಜನಿಕರಿಂದ ಸ್ವೀಕೃತ ವಾದ ಅರ್ಜಿಗಳನ್ನು ಇಲಾಖಾವಾರು ತುರ್ತು ಹಾಗೂ ಅತೀ ತುರ್ತು ಪ್ರಕರಣ ಗಳೆಂದು ವಿಭಾಗಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ. ಮುಂದಿನ 7 ದಿನ ದೊಳಗಾಗಿ ತೆಗೆದುಕೊಂಡ ಕ್ರಮದ ಬಗ್ಗೆ ಮನವಿದಾರರಿಗೆ ಹಿಂಬರಹ ನೀಡಲಾ ಗುವುದು ಎಂದರು. ಪ್ರತಿ 2-3 ತಿಂಗಳಿ ಗೊಮ್ಮೆ ಎಲ್ಲಾ ತಾಲೂಕುಗಳಲ್ಲಿ ಜಿಲ್ಲಾಧಿಕಾರಿ ಯವರು ಇಂತಹ ಸಭೆ ನಡೆಸದಿದ್ದರೆ ಸಾರ್ವಜನಿಕರು ತಹಶೀಲ್ದಾರರನ್ನು ಭೇಟಿ ಮಾಡಿ ಸಭೆಯಲ್ಲಿ ನೀಡಿದ ಅರ್ಜಿಗಳ ಬಗ್ಗೆ ಕೈಗೊಂಡ ಕ್ರಮಗಳ ವಿವರ ಪಡೆಯ ಬಹುದು. ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರು ಕಂದಾಯ ಪರಿವೀಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ತಹಶೀಲ್ದಾರ್ ಶಿವಶಂಕರಪ್ಪ ತಾಪಂ ಇಓ ದೇವರಾಜೇಗೌಡ ಹಾಗೂ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಅರ್ಜಿ ಸ್ವೀಕಾರ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಲಾಗಿತ್ತು. ಎಲ್ಲವನ್ನು ಗಣಕೀಕರಣಗೊಳಿಸಿ ಸ್ವೀಕೃತಿ ನೀಡುವ ಪ್ರಕ್ರಿಯೆ ಪ್ರಶಂಸೆಗೆ ಪಾತ್ರವಾಯಿತು.

Translate »