ವೈದ್ಯಕೀಯ ವಸತಿ ನಿಲಯಕ್ಕೆ ಗುದ್ದಲಿಪೂಜೆ
ಹಾಸನ

ವೈದ್ಯಕೀಯ ವಸತಿ ನಿಲಯಕ್ಕೆ ಗುದ್ದಲಿಪೂಜೆ

July 3, 2018

ಹಾಸನ: ವೈದ್ಯಕೀಯ ವಿದ್ಯಾರ್ಥಿ ನಿಯರ ನೂತನ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಶಾಸಕ ಪ್ರೀತಮ್ ಜೆ.ಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ ದಲ್ಲಿ ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಹೆಚ್.ಡಿ. ರೇವಣ್ಣ, ಹಾಸನಾಂಬ ವೈದ್ಯಕೀಯ ವಿದ್ಯಾ ಲಯದಲ್ಲಿ 750 ವಿದ್ಯಾರ್ಥಿಗಳಿದ್ದು, ಅವರಲ್ಲಿ 300 ವಿದ್ಯಾರ್ಥಿನಿಯರಿಗೆ ಅವಕಾಶವಾ ಗುವಂತೆ ವಸತಿನಿಲಯ ನಿರ್ಮಾಣವಾಗ ಲಿದೆ. ಇದಲ್ಲದೆ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೂ ಪ್ರತ್ಯೇಕವಾಗಿ ವಿಶೇಷ ವಸತಿ ನಿಲಯ ನಿರ್ಮಾಣ ಮಾಡಲಾಗುವುದು. ಒಟ್ಟಾರೆ 135 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಉದ್ದೇಶಿಸ ಲಾಗಿದ್ದು, ಹಣಕಾಸು ಇಲಾಖೆಯು ಸಮ್ಮತಿ ಸೂಚಿಸಿದೆ. ಮೂರು ಹಂತಗಳಲ್ಲಿ ಹಣ ಬಿಡುಗಡೆಗೆ ಮನವಿ ಮಾಡಿ, ಈ ವರ್ಷ 50 ಕೋಟಿ ರೂ. ಒದಗಿಸಲು ಕೊರಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ನಗರಸಭಾ ಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ಆಯುಕ್ತ ಪರಮೇಶ್, ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಆಡಳಿತಾಧಿಕಾರಿ ಚಿದಾ ನಂದ್, ಶಸ್ತ್ರ ಚಿಕಿತ್ಸಕ ಡಾ.ಕೆ.ಶಂಕರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ರಾಜಕುಮಾರ್ ಇತರರಿದ್ದರು.

ಅರ್ಚಕರಿಗೇ ‘ಮಂಗಳಾರತಿ’ : ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ವಾಸ್ತು ಪ್ರಕಾರ ಪೂಜೆ ಮಾಡದ ಅರ್ಚಕರಿಗೆ ಮಂಗಳಾರತಿ ಮಾಡಿದರಲ್ಲದೆ, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡುವಾಗ ವಾಸ್ತು ಪ್ರಕಾರ ಪೂಜೆ ಮಾಡದಿದ್ದರಿಂದ ‘ಯಾವ ಕಡೆ ಪಾಯ ತೆಗಿಬೇಕು ಅಂತ ಗೊತ್ತಿಲ್ಲ. ಯಾರ್ರೀ ಈ ಅನಾನುಭವಿ ಅರ್ಚಕರನ್ನು ಕರೆಸಿದ್ದು..?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಚಿವರು ಗರಂ ಆಗುತ್ತಿದ್ದಂತೆ ತಬ್ಬಿಬ್ಬಾದ ಅಧಿಕಾರಿಗಳು, ಕೊನೆಗೆ ಗುದ್ದಲಿ ಪೂಜೆ ಮಾಡುವ ದಿಕ್ಕನ್ನು ಬದಲಿಸಿ ಕಾರ್ಯಕ್ರಮ ಮುಂದುವರೆಸಿದರು.

Translate »