ಬೇಲೂರು ಎಸ್‍ಬಿಐ ಶಾಖೆಯಲ್ಲಿ ತಾಂತ್ರಿಕ ದೋಷ: 4 ದಿನದಿಂದ ವ್ಯವಹಾರ ಸ್ಥಗಿತ: ಗ್ರಾಹಕರ ಪರದಾಟ
ಹಾಸನ

ಬೇಲೂರು ಎಸ್‍ಬಿಐ ಶಾಖೆಯಲ್ಲಿ ತಾಂತ್ರಿಕ ದೋಷ: 4 ದಿನದಿಂದ ವ್ಯವಹಾರ ಸ್ಥಗಿತ: ಗ್ರಾಹಕರ ಪರದಾಟ

February 20, 2019

ಬೇಲೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಇಂಟರ್‍ನೆಟ್ ಸರ್ವರ್ ದೋಷ ದಿಂದಾಗಿ ಕಳೆದ 4 ದಿನದಿಂದ ವ್ಯವಹಾರ ಇಲ್ಲದೆ ಸ್ಥಗಿತಗೊಂಡಿದ್ದು ಗ್ರಾಹಕರು ಪರದಾಡುತ್ತಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಂಪರ್ಕ ಹೊಂದಿರುವ ಬ್ಯಾಂಕಿನಲ್ಲಿ ಸರ್ಕಾರಿ ವ್ಯವಹಾರ ಸೇರಿದಂತೆ ಎಲ್ಲಾ ರೀತಿಯ ಗ್ರಾಹಕರ ವ್ಯವಹಾರವೂ ಸಹ ಆನ್‍ಲೈನ್ ಮೂಲಕ ನಡೆಯಬೇಕಿದ್ದು, ಇದೀಗ ನೆಟ್‍ವರ್ಕ್ ಸರ್ವರ್ ದೋಷ ಇರುವುದರಿಂದ ವ್ಯವಹಾರವೆಲ್ಲವೂ ಪೂರ್ಣ ಸ್ಥಗಿತಗೊಂಡಿದೆ.

ವಿವಿಧ ಇಲಾಖೆ, ಕಚೇರಿಯಿಂದ ಸರ್ಕಾರಕ್ಕೆ ಪಾವತಿಸ ಬೇಕಾದ ನಗದು ವ್ಯವಹಾರಗಳಿಗೂ ಸಹ ಅಡ್ಡಿಯಾಗಿದೆ. ಡಿಮ್ಯಾಂಡ್ ಡ್ರಾಫ್ಟ್ ಪಡೆಯಲು, ನಗದು ಪಡೆಯಲು ಹಾಗೂ ಕಟ್ಟಲು ತೊಂದರೆಯಾಗಿದೆ. ಆಧಾರ್ ಕಾರ್ಡ್ ಮಾಡಿಸುವ ಗ್ರಾಹಕರು ಸಹ ಪ್ರತಿನಿತ್ಯ ಬೆಳಿಗ್ಗೆಯೆ ಬ್ಯಾಂಕಿನ ಮುಂದೆ ಜಮಾಯಿಸಿ ಪ್ರಾಬ್ಲಂ ಎಂದು ತಿಳಿದ ಕೂಡಲೇ ವಾಪಸ್ ಹೋಗುವುದು ನಡೆಯುತ್ತಿದೆ. ಬ್ಯಾಂಕ್ ಬಾಗಿಲಿಗೆ ತಾಂತ್ರಿಕ ದೋಷ ವ್ಯವಹಾರ ಸ್ಥಗಿತಗೊಳಿಸಲಾಗಿದೆ ಎಂದು ಫಲಕ ಹಾಕಲಾಗಿದೆ. ಸದ್ಯ ಎಟಿಎಂ ವರ್ಕ್ ಆಗುತ್ತಿದ್ದು ಅದು ಯಾವಾಗ ಸ್ಥಗಿತಗೊಳ್ಳುವುದೋ ಗೊತ್ತಿಲ್ಲ.

ಗ್ರಾಹಕರ ಹೇಳಿಕೆ: ಈ ಸಂಬಂಧ ಸುದ್ದಿಗಾರರೊಂದಿಗೆ ಮಾತ ನಾಡಿದ ಮಾಳೆಗೆರೆ ಗ್ರಾಮದ ತಮ್ಮಣ್ಣಗೌಡ, ನಾವು ಎರಡು ದಿನ ದಿಂದ ಜನತಾ ಮನೆಯ ಹಣ ಪಡೆಯಲು ಬ್ಯಾಂಕಿಗೆ ಬರುತ್ತಿ ದ್ದೇನೆ. ಬ್ಯಾಂಕಿನವರು ನೆಟ್‍ವರ್ಕ್ ಸರಿಯಿಲ್ಲ. ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ. ನಾಳೆ ಬಂದರೆ ನಾಳಿದ್ದು ಅಂತಾರೆ. ಈ ರೀತಿಯಾದರೆ ನಾವೇನು ಮಾಡುವುದು? ಎಂದು ಪ್ರಶ್ನಿಸುತ್ತಾರೆ.

ರಣಘಟ್ಟದ ಲಕ್ಷ್ಮಿ ಹಾಗೂ ಈರಮ್ಮ ಅವರು ಮಾತನಾಡಿ, ನಾವು ಹಣ ಪಡೆಯಲು ಬ್ಯಾಂಕಿಗೆ ಬರುತ್ತಿದ್ದೇವೆ. ನಾಳೆ ಬನ್ನಿ ಸರಿಯಾಗುತ್ತೆ ಎನ್ನುತ್ತಾರೆ. ಇಂದು ಬಂದರೆ ನಾಳೆ ಎನ್ನುತ್ತಿ ದ್ದಾರೆ. ಈ ರೀತಿಯಾದರೆ ಅರ್ಜೆಂಟ್ ಹಣ ಬೇಕಾದ ನಾವು ಏನು ಮಾಡುವುದು ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾಂಕಿನ ವ್ಯವ ಸ್ಥಾಪಕರು, ಆರಂಭದಲ್ಲಿ ಸುದ್ದಿಗಾರರಿಗೆ ಸುದ್ದಿಮಾಡದಂತೆ ಮನವಿ ಮಾಡಿದರಾದರೂ ನಂತರ ಮಾಹಿತಿ ನೀಡಿ, ಬಿಎಸ್‍ಎನ್ ಎಲ್ ನೌಕರರು ಮುಷ್ಕರ ನಿರತರಾಗಿದ್ದಾರೆ. ಆ ಕಾರಣ ಸರ್ವರ್ ತೊಂದರೆಯಾಗಿದೆ. ಈ ಶಾಖೆಯಲ್ಲಿನ ಗ್ರಾಹಕರ ವ್ಯವಹಾರಕ್ಕೆ ತೊಂದರೆ ಆಗದಂತೆ ಪಟ್ಟಣದಲ್ಲೇ ಇರುವ ಮತ್ತೆರಡು ಶಾಖೆಗಳಿಗೆ ಕಳುಹಿಸಿಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಬಿಎಸ್‍ಎನ್‍ಎಲ್ ನೌಕರರ ಮುಷ್ಕರದ ಬಿಸಿ ಈ ಒಂದು ಶಾಖೆಯ ನೆಟ್‍ವರ್ಕ್‍ಗೆ ತಟ್ಟಿದೆಯೆ? ಎಂಬುದು ಪ್ರಶ್ನೆಯಾಗಿದೆ.

Translate »