ಸರಸ್ವತಿಪುರಂ 6ನೇ ಮುಖ್ಯರಸ್ತೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಮೈಸೂರು

ಸರಸ್ವತಿಪುರಂ 6ನೇ ಮುಖ್ಯರಸ್ತೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

August 7, 2020

ಮೈಸೂರು, ಆ.6(ಎಂಕೆ)- ನಗರದ ಸರಸ್ವತಿಪುರಂನ 6ನೇ ಮುಖ್ಯರಸ್ತೆಯಲ್ಲಿ ನಿವಾಸಿಗಳ ಮನೆಯ ಮುಂದೆ ಹಾಕ ಲಾಗಿದ್ದ ಮಣ್ಣಿನ ರಾಶಿಯನ್ನು ತೆಗೆದು ಪಾದಚಾರಿಗಳು ತಿರುಗಾಡಲು ಅನುವು ಮಾಡಿಕೊಡಲಾಗಿದೆ.

ಈ ರಸ್ತೆಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ಹಿನ್ನೆಲೆ ಇಡೀ ರಸ್ತೆಯನ್ನು ಅಗೆದು ತಿರುಗಾಡಲು ಸಾಧ್ಯವಾಗದಂತೆ ಮನೆಗಳ ಮುಂದೆಯೇ ಮಣ್ಣು ಹಾಕಲಾಗಿತ್ತು.

ಈ ಬಗ್ಗೆ ‘ಮೈಸೂರು ಮಿತ್ರ’ ಪತ್ರಿಕೆ ಯಲ್ಲಿ ಆಗಸ್ಟ್ 4ರಂದು ‘ಯುಜಿಡಿ ಸಮಸ್ಯೆ ನಿವಾರಿಸುವುದಾಗಿ ಹೇಳಿ ಇಡೀ ರಸ್ತೆ ಅಗೆದು ನಿವಾಸಿಗಳಿಗೆ ‘ದಿಗ್ಬಂಧನ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

ಬಳಿಕ ಎಚ್ಚೆತ್ತ ಸ್ಥಳೀಯ ನಗರ ಪಾಲಿಕೆ ಸದಸ್ಯ ಶಿವಕುಮಾರ್, 6ನೇ ಮುಖ್ಯ ರಸ್ತೆಯ ಮನೆಗಳ ಮುಂದೆ ಹಾಕಲಾಗಿದ್ದ ಮಣ್ಣು ತೆಗೆಸಿ ಪಾದಚಾರಿಗಳು ತಿರು ಗಾಡಲು ಅನುಕೂಲವಾಗುವಂತೆ ಕ್ರಮ ಕೈಗೊಂಡಿದ್ದಾರೆ.

Translate »