ಕಾನೂನಿಗಿಂತ  ಯಾರೂ ದೊಡ್ಡವರಲ್ಲ
News

ಕಾನೂನಿಗಿಂತ ಯಾರೂ ದೊಡ್ಡವರಲ್ಲ

September 4, 2022

ಅಮೇರಿಕಾದಿಂದ `ಮೈಸೂರು ಮಿತ್ರ’ನಿಗೆ ಸಂದೇಶ ರವಾನಿಸಿರುವ ಮೈಸೂರು ಗ್ರಾಹಕರ ಪರಿ ಷತ್ ಸಂಸ್ಥಾಪಕ ಅಧ್ಯಕ್ಷ ಭಾಮಿ ವಿ.ಶೆಣೈ, ಬೆಂಗಳೂರಲ್ಲಿ ರಾಜ ಕಾಲುವೆಗಳ ಒತ್ತುವರಿ ತೆರವು ಗೊಳಿಸುವುದಾಗಿ ನಗರಾಭಿ ವೃದ್ಧಿ ಸಚಿವ ಭೈರತಿ ಬಸವ ರಾಜ್ ತಿಳಿಸಿರುವ ಸುದ್ದಿ ಓದಿ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಮೈಸೂರಲ್ಲೂ ಐತಿಹಾಸಿಕ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವುಗೊಳಿಸ ಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡರೆ ಒತ್ತುವರಿ ಮಾಡಿರುವವರಿಗೆ ಅಸ ಮಾಧಾನವಾಗಬಹುದು. ಆದರೆ ಮೈಸೂರಿನ ಜನರು ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಈ ಕಾರ್ಯಕ್ಕಾಗಿ ಅವರನ್ನು ಸದಾ ನೆನೆಯುತ್ತಾರೆ ಎಂದು ಅವರು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಸುಪ್ರೀಂಕೋರ್ಟ್ ಆದೇಶದಂತೆ ನೊಯಿಡಾದಲ್ಲಿ ಅವಳಿ ಟವರ್‍ಗಳನ್ನು ನೆಲಸಮಗೊಳಿಸಲಾಗಿದೆ. ಯಾರಾದರೂ ಈ ಕ್ರಮವನ್ನು ಕೈಗೊಂಡಿದ್ದರೆ? ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವೇ ಸೂಚಿಸಿರುವಾಗ ಮೈಸೂರಲ್ಲೂ ಜಿಲ್ಲಾಧಿಕಾರಿಗಳು ಒತ್ತುವರಿ ಯನ್ನು ಮುಲಾಜಿಲ್ಲದೆ ತೆರವುಗೊಳಿಸಬಹುದು ಎಂದು ಅವರು ಹೇಳಿದ್ದಾರೆ. ಕೇರಳ ರಾಜ್ಯದ ಕೊಚ್ಚಿಯ ಬೀಚ್‍ಗೆ ಹೊಂದಿಕೊಂಡಂತೆ ಕಾನೂನನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ಎರಡು ಐಷಾರಾಮಿ ಅಪಾರ್ಟ್‍ಮೆಂಟ್ ಅನ್ನು 2020ರ ಜನವರಿ 11ರಂದು ನೆಲಸಮಗೊಳಿಸಿರುವ ಉದಾಹರಣೆ ಕಣ್ಮುಂದೆ ಇರುವಾಗ ಮೈಸೂರು ಜಿಲ್ಲಾಧಿಕಾರಿಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ದಿವಾನ್ ಪೂರ್ಣಯ್ಯ ನಾಲೆಯ ಒತ್ತುವರಿ ತೆರವುಗೊಳಿಸಿ ಮೈಸೂರು ನಗರದ ಅಮೂಲ್ಯ ಕೆರೆಗಳ ಉಳಿಸುವಂತೆಯೂ ಭಾಮಿ ವಿ.ಶೆಣೈ ಸಲಹೆ ನೀಡಿದ್ದಾರೆ.

Translate »