ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಬಂಧನ
ಮಂಡ್ಯ

ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಬಂಧನ

February 28, 2020

ಮದ್ದೂರು, ಫೆ.27- ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಹೊಡೆದಾಟ ನಡೆಸಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಬಂಧನ ವಾರೆಂಟ್‍ಗೊಳ ಗಾಗಿದ್ದ ಆರೋಪಿ ಠಾಣೆಯಿಂದಲೇ ಪರಾರಿ ಯಾಗಿ ಮತ್ತೆ ಪೊಲೀಸರಿಂದ ಬಂಧನ ಕ್ಕೊಳಗಾದ ಘಟನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ತಾಲೂಕಿನ ಮಾಲಗಾರನಹಳ್ಳಿಯ ಚಿಕ್ಕಮರಿ ಠಾಣೆಯಿಂದ ಪರಾರಿಯಾದ ಆರೋಪಿ, 2016 ರಲ್ಲಿ ಮಾಲಗಾರನಹಳ್ಳಿ ಯಲ್ಲಿ ನಡೆದಿದ್ದ ಜಮೀನು ವಿವಾದದ ಹೊಡೆದಾಟ ಪ್ರಕರಣದಲ್ಲಿ ಭಾಗಿ ಯಾಗಿದ್ದ ಈತನನ್ನು ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಮದ್ದೂರು ಜೆಎಂಎಫ್‍ಸಿ 3 ನೇ ಅಪರ ಸಿವಿಲ್ ನ್ಯಾಯಾಲಯದ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಮಂಗಳವಾರ ಬೆಳಿಗ್ಗೆ ಚಿಕ್ಕಮರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿ ಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಆದಿತ್ಯ ಆರ್.ಕಲಾಲ್ ಚಿಕ್ಕಮರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು. ಈತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮದ್ದೂರು ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡಿ ದ್ದರು, ಈ ವೇಳೆ ಚಿಕ್ಕಮರಿ ಠಾಣೆಯಿಂದ ಪರಾರಿಯಾಗಿದ್ದ. ನಂತರ ಪೊಲೀಸರು ಆರೋಪಿ ಚಿಕ್ಕಮರಿ ಚಿಕ್ಕರಸಿನಕೆರೆ ಗ್ರಾಮದ ಭೈರವೇಶ್ವರ ದೇವಸ್ಥಾನದ ಬಳಿ ಬಂಧಿಸಿದರು.ಎಎಎಸ್ಪಿ ಶೋಭಾರಾಣಿ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿ ಗಳನ್ನು ವಿಚಾರಣೆ ನಡೆಸಿದರು.

Translate »