ಮಂಡ್ಯ, ಮದ್ದೂರು, ಮಳವಳ್ಳಿಯಲ್ಲಿ ಸರಣಿ ಪ್ರತಿಭಟನೆ
ಮಂಡ್ಯ

ಮಂಡ್ಯ, ಮದ್ದೂರು, ಮಳವಳ್ಳಿಯಲ್ಲಿ ಸರಣಿ ಪ್ರತಿಭಟನೆ

February 28, 2020
  •  ಮಂಡ್ಯದಲ್ಲಿ ಸಚಿವ ಕೆ.ಸಿ.ನಾರಾಯಣಗೌಡರ ಪ್ರತಿಕೃತಿ ದಹನ, ಎಲ್‍ಆರ್‍ಎಸ್ ವಿರುದ್ಧ ಧರಣಿ
  • ಕೃಷಿಭೂಮಿ ಗುತ್ತಿಗೆ ಕಾಯಿದೆ ಜಾರಿ ವಿರೋಧಿಸಿ ಕೃಷಿಕೂಲಿಕಾರರ ಪ್ರತಿಭಟನೆ

ಮಂಡ್ಯ, ಫೆ.27(ನಾಗಯ್ಯ)- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಡ್ಯ, ಮದ್ದೂರು, ಮಳವಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ ವಿರುದ್ಧ ಕರವೇ ಕಾರ್ಯಕರ್ತರು, ಎಲ್‍ಆರ್‍ಎಸ್ ವಿರುದ್ಧ ಸರ್ವ ಬಣಜಿಗರ ಸಂಘದ ಕಾರ್ಯ ಕರ್ತರು, ಮತ್ತು ಮದ್ದೂರು, ಮಳವಳ್ಳಿ ಮಂಡ್ಯದಲ್ಲಿ ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಗುತ್ತಿಗೆ ನೀಡುವ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಶಾಸಕ ಕೆಸಿಎನ್ ಪ್ರತಿಕೃತಿ ದಹನ: ಕೆ.ಆರ್. ಪೇಟೆ ಶಾಸಕ, ಪೌರಾಡಳಿತ ಸಚಿವ ಕೆ.ಸಿ. ನಾರಾಯಣಗೌಡರು ಮಹಾರಾಷ್ಟ್ರ ಪರ ಜೈ ಕಾರ ಹಾಕಿರುವ ಕ್ರಮವನ್ನು ಖಂಡಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯ ಕರ್ತರು ನಗರದಲ್ಲಿಂದು ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ನಗರದ ಮಹಾವೀರ ಸರ್ಕಲ್‍ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಶಾಸಕ ಕೆ.ಸಿ.ನಾರಾಯಣ ಗೌಡರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು, ಶಾಸಕರ ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿ ಸಿದರು. ಸಂಘದ ಜಿಲ್ಲಾಧ್ಯಕ್ಷ ಶಂಕರೇ ಗೌಡ, ಬೆಳಗಾವಿಯ ಕನ್ನಡಿಗರ ರಕ್ಷಣೆಗಾಗಿ ಕನ್ನಡ ಪರ ಹೋರಾಟಗಾರರು ಹಿಂದಿ ನಿಂದಲೂ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ, ಆದರೆ ಸಚಿವರು ಕನ್ನಡಿ ಗರನ್ನೇ ಅವಹೇಳನ ಮಾಡುವಂತಹ ವರ್ತನೆಗಳನ್ನು ತೋರಿರುವುದು ಹೋರಾಟ ಗಾರರಿಗೆ ನೋವು ತಂದಿದೆ,ನೋವಿನ ಮೇಲೆಯೇ ಬರೆ ಎಳೆಯುವಂತಹ ಕೆಲಸ ಮಾಡಿದ್ದಾರೆ, ಉರಿಯುತ್ತಿರುವ ಬೆಂಕಿ ಯೊಳೆಗೆ ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋ ಪಿಸಿದರು. ಕರವೇ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಚಿದಂಬರ್, ಅಶೋಕ್ ಸೇರಿ ದಂತೆ ಹಲವರು ಪಾಲ್ಗೊಂಡಿದ್ದರು.

A series of protests in Mandya, Maddur, Malavalli-1

ಎಲ್‍ಆರ್‍ಎಸ್ ವಿರುದ್ಧ ಪ್ರತಿಭಟನೆ; ಬಲಿಜ ಸಮುದಾಯದ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಮೀಸಲಿರಿಸಿರುವ ಆನೇಕಲ್ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್‍ನ ದತ್ತಿ ಆಸ್ತಿಯನ್ನು ಕಬಳಿಸಿರುವ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ವಿರುದ್ಧ ಬಣಜಿಗ ಸಮುದಾಯದವರು ಪ್ರತಿಭಟನೆ ನಡೆಸಿದರು.

ಸರ್ವ ಬಣಜಿಗರ ಸಂಘದ ನೇತೃತ್ವ ದಲ್ಲಿಂದು ಬೆಳಿಗ್ಗೆ ನಗರದ ಶ್ರೀ ಯೋಗಿ ನಾರಾಯಣ ಸಮುದಾಯ ಭವನದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘದ ಆಸ್ತಿಯನ್ನು ಬಾಡಿಗೆ ಪಡೆದು ಹಲವು ವರ್ಷದಿಂದ ಬಾಡಿಗೆ ಹಣ ನೀಡದೆ ಕೋಟ್ಯಾಂತರ ರೂ. ಬಾಡಿಗೆ ಬಾಕಿ ಉಳಿಸಿಕೊಂಡು ದತ್ತಿಆಸ್ತಿಯ ಜಾಗವನ್ನೂ ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದ್ದು, ಇದನ್ನು ಪ್ರಶ್ನಿಸಿ, ಕಾನೂನು ಕ್ರಮ ಕೈಗೊಳ್ಳಲು ಮುಂದಾದ ಬಲಿಜ ಸಂಘದ ಮುಖಂಡರನ್ನು ಅವಮಾನಿಸಿ, ಸುಳ್ಳು ದೂರು ದಾಖಲಿಸಿ ಬಲಿಜಸಮುದಾಯದ ಆತ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಿವರಾಮೇ ಗೌಡರ ವಿರುದ್ಧ ಕಿಡಿಕಾರಿದರು.

ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ಬಾಬು, ಎಂ.ವಿ. ನಾರಾಯಣಸ್ವಾಮಿ, ಕೆ.ನಾಗಾ ನಂದ, ಎಂ.ಕೆ. ಜಗದೀಶ್, ಎಂ.ಎಸ್. ಪ್ರಶಾಂತ್, ಎಚ್.ಪಿ.ಮೋಹನ್, ಕೆ.ಎನ್. ಮೋಹನ್‍ಕುಮಾರ್, ನಾಗಶ್ರೀ, ಭಾಗ್ಯ ಲಕ್ಷ್ಮಿ, ಗಾಯಿತ್ರಿ, ಸುಮ, ಗೋಪಾಲ್, ನಾಗೇಶ್ ಇತರರಿದ್ದರು.

ಕೃಷಿ ಗುತ್ತಿಗೆ ವಿರುದ್ಧ ಪ್ರತಿಭಟನೆ; ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿ ಗಳಿಗೆ ಗುತ್ತಿಗೆ ನೀಡುವ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತಸಂಘದ ಕಾರ್ಯಕರ್ತರು ಮಂಡ್ಯ, ಮದ್ದೂರು ಮತ್ತು ಮಳವಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಕೃಷಿಭೂಮಿ ಗುತ್ತಿಗೆ ಕಾಯ್ದೆ 2016ರ ಪ್ರತಿಗಳನ್ನು ಸುಟ್ಟುಹಾಕಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಿಸಿದರು. ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಗುತ್ತಿಗೆ ನೀಡುವ ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯಿದೆ2016 ರನ್ನು ರಾಜ್ಯ ಸರ್ಕಾರ ಜಾರಿ ಮಾಡಿ ರೈತರನ್ನು ಗುಲಾಮಗಿರಿಗೆ ನೂಕಲು ಹೊರಟಿದೆ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂ.ಪುಟ್ಟಮಾದು,ಕೃಷ್ಣೇಗೌಡ,ಮದ್ದೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಣ್ಣ,ಟಿ.ಯಶ ವಂತ, ಮುಖಂಡರಾದ ಮಾದೇಗೌಡ, ಕೆಸಿ.ಗಿರೀಶ್ ಅಡಗನಹಳ್ಳಿ,ಲಲಿತಮ್ಮ, ಸುನೀತಾ,ಮಳವಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಕಾಶ್, ಶಿವು, ಸ್ವಾಮಿ ಮಣಿಗೆರೆ, ರಾಮಸ್ವಾಮಿ, ಜವರೇಗೌಡ, ಮಹದೇವಸ್ವಾಮಿ, ಅಂಕರಾಜು ಇತರರಿದ್ದರು. ಮಳವಳ್ಳಿಯಲ್ಲಿನ ಪ್ರತಿಭಟನೆ ಯಲ್ಲಿ ಎನ್.ಎಲ್ ಭರತ್ ರಾಜ್, ಲಿಂಗ ರಾಜಮೂರ್ತಿ, ಮಹದೇವು, ಆನಂದ್, ರವಿ, ಶಾಂತರಾಜ್, ಗುರುಸ್ವಾಮಿ, ಬಸವ ರಾಜ್, ನಾಗರಾಜ್, ಮಹದೇವು, ಕರಿಯಪ್ಪ, ರಾಜೇಶ್, ನಾಗಮಣಿ ಇತರರಿದ್ದರು.

Translate »