ಗೋಧ್ರಾ ನರಮೇಧಕ್ಕೀಗ 18 ವರ್ಷ
ಮೈಸೂರು

ಗೋಧ್ರಾ ನರಮೇಧಕ್ಕೀಗ 18 ವರ್ಷ

February 28, 2020

ಗೋಧ್ರಾ(ಗುಜರಾತ್), ಫೆ.27- ಸರಿಯಾಗಿ 18 ವರ್ಷಗಳ ಹಿಂದೆ ಇದೇ ದಿನ (ಫೆ.27) ಆ ಘನಘೋರ ದುರಂತ ಸಂಭವಿಸಿ, ಇಡೀ ವಿಶ್ವವೇ ಆಘಾತಗೊಳ್ಳುವಂತೆ ಮಾಡಿತ್ತು. ಗೋಧ್ರಾ ದಲ್ಲಿನ ನರಹಂತಕ ಪಾತಕಿ ಗಳು ಬೆಳಿಗ್ಗೆ 7.43ರ ವೇಳೆಗೆ ಹಚ್ಚಿದ ಬೆಂಕಿಗೆ `ಸಬರಮತಿ ಎಕ್ಸ್ ಪ್ರೆಸ್’ ರೈಲಿನ ಕೆಲವು ಬೋಗಿ ಗಳು ಧಗಧÀಗನೆ ಹೊತ್ತಿ ಉರಿದಿದ್ದವು. ಬೋಗಿಗಳ ಒಳಗಿದ್ದ 59 ಹಿಂದೂ ಯಾತ್ರಾರ್ಥಿಗಳು, ಕರ ಸೇವಕರು ಕ್ಷಣಮಾತ್ರ ದಲ್ಲಿ ಜೀವಂತ ದಹನವಾಗಿದ್ದರು. 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹಿಂದೂ ಯಾತ್ರಾರ್ಥಿಗಳ ಮಾರಣ ಹೋಮವನ್ನು ಕಂಡು ಇಡೀ ಗುಜರಾತ್ ಕುದಿಯಲಾರಂಭಿಸಿತು. ಗೋಧ್ರಾ ಹತ್ಯಾಕಾಂಡದ ಬೆನ್ನಿಗೆ ಇಡೀ ರಾಜ್ಯ ಹೊತ್ತಿ ಉರಿಯಿತು. ವಾರಗಟ್ಟಲೆ ನಡೆದ ಹಿಂಸಾಚಾರದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡರು. ಕೋಟ್ಯಾಂತರ ಮೌಲ್ಯದ ಆಸ್ತಿ ಹಾನಿಗೊಳಗಾಯಿತು.

ಮರುಕಳಿಸಿದ ಇತಿಹಾಸ: ದೆಹಲಿಯಲ್ಲಿ ಸದ್ಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧಿಗಳ ನಡುವೆ ನಡೆದ ಘರ್ಷಣೆ, ಹಿಂಸಾಚಾರದಿಂದಾಗಿ 35 ಮಂದಿ ಜೀವ ಕಳೆದುಕೊಂಡಿದ್ದಾರೆ. ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಪಾತಕಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಅರೆ ಸೇನಾ ಪಡೆ ತುಕಡಿಗಳು ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿದು, ದಂಗೆಕೋರರ ಮೇಲೆ ಕಂಡಲ್ಲಿ ಗುಂಡಿಕ್ಕಿ ಆದೇಶ ಹೊರಬಿದ್ದ ಬಳಿಕವಷ್ಟೇ ಹಿಂಸಾಚಾರ ಅಂತ್ಯ ಕಂಡಿದೆ. ದೇಶ ಇತಿಹಾಸದಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಬದಲಾಗಿ ಇತಿಹಾಸ ಮರುಕಳಿಸಿದಂತೆಯೇ ಗೋಚರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Translate »