ಮೈಸೂರು, ಫೆ.27- ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಮೈಸೂರು ಇವರ ಸಹಯೋಗ ದಲ್ಲಿ ಈ ವರ್ಷವೂ ಫೆ.28ರಂದು ಕರ್ನಾಟಕ ಕಲಾಮಂದಿರದಲ್ಲಿ `ಧರೆಗೆ ದೊಡ್ಡವರು’ ಎಂಬ ಅಹೋರಾತ್ರಿ ಕಾರ್ಯ ಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 4 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಂಡಾಯ ಹಾಗೂ ಕಲಾತಂಡದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಾರ್ಯಕ್ರಮವನ್ನು ನಡೆಸಲಾಗುವುದು.
ಅಂದು ಸಂಜೆ 6 ಗಂಟೆಗೆ ಧೂಪ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಜೆ 7 ಗಂಟೆಗೆ ಮೈಸೂರು ಗುರುರಾಜ್ ಅವರಿಂದ ಮಂಟೇ ಸ್ವಾಮಿ ಕುರಿತ ಧರೆಗೆ ದೊಡ್ಡವರ ಸಾಲು ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಮಳವಳ್ಳಿ ಮಹದೇವಸ್ವಾಮಿ ಅವರಿಂದ ಮಹದೇಶ್ವರ ಕುರಿತ ಮಹದೇಶ್ವರ ಹುಟ್ಟಿ ಬೆಳೆದ ಸಾಲು ಕಾರ್ಯಕ್ರಮ, ರಾತ್ರಿ 9 ಗಂಟೆಗೆ ದೊಡ್ಡಗವಿಬಸಪ್ಪ ಅವರಿಂದ ಮಂಟೇಸ್ವಾಮಿ ಕುರಿತ ಗಾರುಡಿಗರ ಸಾಲು ಮಂಟೇಸ್ವಾಮಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಗಾರುಡಿಗರು ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಕೈಲಾಸಮೂರ್ತಿ ಅವರಿಂದ ಮಹದೇಶ್ವರ ಕುರಿತ ಸುತ್ತೂರು ಮಠದ ಸಾಲು ಕಾರ್ಯಕ್ರಮ, ರಾತ್ರಿ 11 ಗಂಟೆಗೆ ಕೊಳತ್ತೂರು ನಾಗೇಶ್ ಅವರಿಂದ ಮಂಟೇಸ್ವಾಮಿ ಕುರಿತ ಸಾಲು ಬೆಟ್ಟದ ಶರಣ ಚನ್ನಪ್ಪಾಜಿ ಮತ್ತು ಆದಿ ಹೊನ್ನನಾಯ್ಕನ ಹಳ್ಳಿ ಮಾದಮ್ಮನ ಸಾಲು ಕಾರ್ಯಕ್ರಮ, ಮಧ್ಯರಾತ್ರಿ 12 ಗಂಟೆಗೆ ನಂಜನಗೂಡು ಮಾದಶೆಟ್ಟಿ ಅವರಿಂದ ಮಹದೇಶ್ವರ ಕುರಿತ ಶ್ರವಣ ಸಂಹಾರ ಸಾಲು ಕಾರ್ಯಕ್ರಮ, ಮಧ್ಯರಾತ್ರಿ 1 ಗಂಟೆಗೆ ಪೂರಿಗಾಲಿ ಮಾದೇವ ಅವರಿಂದ ಮಂಟೇಸ್ವಾಮಿ ಕುರಿತ ಮತ್ತಿತಾಳೇಶ್ವರ ಮತ್ತು ಮಳವಳ್ಳಿ ಮಾರಟ್ಟಿ ಸಾಲು ಕಾರ್ಯ ಕ್ರಮ, ಮಧ್ಯರಾತ್ರಿ 2 ಗಂಟೆಗೆ ಹೆಚ್.ಡಿ.ಕೋಟೆಯ ಚಿನ್ನಮಾದು ಅವರಿಂದ ಮಹದೇಶ್ವರ ಕುರಿತ ಶಂಕಮ್ಮನ ಸಾಲು ಕಾರ್ಯಕ್ರಮ, ಮಧ್ಯರಾತ್ರಿ 3 ಗಂಟೆಗೆ ನಾಗೇಂದ್ರ ಮಳವಳ್ಳಿ ಅವರಿಂದ ಮಂಟೇಸ್ವಾಮಿ ಕುರಿತ ಕುಂದೂರು ಬೆಟ್ಟದಿಂದ ಬೊಪ್ಪಣಪುರದಲ್ಲಿ ಮಡಿವಾಳ ಮಾಚಯ್ಯನ ಸಾಲು ಕಾರ್ಯಕ್ರಮ, ಮುಂಜಾನೆ 4 ಗಂಟೆಗೆ ಕೆ.ಕೆ.ಪುರ ಕುಮಾರ ಅವರಿಂದ ಮಂಟೇಸ್ವಾಮಿ ಕುರಿತ ಕೆಂಪಚಾರಿ, ಸಿದ್ದಪ್ಪಾಜಿ ಸಾಲು ಕಾರ್ಯಕ್ರಮ, ಮುಂಜಾನೆ 5 ಗಂಟೆಗೆ ಮೈಸೂರು ಗುರುರಾಜ್ ಅವರಿಂದ ಮಂಟೇಸ್ವಾಮಿ ಕುರಿತ ಉಪಸಂಹಾರ ಕಾರ್ಯ ಕ್ರಮ ಹಾಗೂ ಬೆಳಿಗ್ಗೆ 5.30ಕ್ಕೆ ಮಳವಳ್ಳಿ ಮಹದೇವಸ್ವಾಮಿ ಅವರಿಂದ ಮಹದೇಶ್ವರ ಕುರಿತ ಉಪಸಂಹಾರ ಕಾರ್ಯಕ್ರಮ ಆಯೋಜಿಸಲಾಗಿದೆ.