ಮಹಿಳೆ ಆತ್ಮಹತ್ಯೆ; ಆಘಾತದಿಂದ ಪತಿ ಅಸ್ವಸ್ಥ
ಮಂಡ್ಯ

ಮಹಿಳೆ ಆತ್ಮಹತ್ಯೆ; ಆಘಾತದಿಂದ ಪತಿ ಅಸ್ವಸ್ಥ

February 28, 2020

ಮದ್ದೂರು, ಫೆ.27- ಅನಾರೋಗ್ಯದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ತಿಳಿದ ಪತಿ ಅಸ್ವಸ್ಥಗೊಂಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದಿನಿ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಈ ವಿಷಯ ತಿಳಿದು ಪತಿ ಮಲ್ಲಿಕಾರ್ಜುನ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂದಿನಿ ಅವರಿಗೆ ಆಗಿಂದಾಗ್ಗೆ ಆರೋಗ್ಯ ಸಮಸ್ಯೆ ಕಂಡು ಬರುತ್ತಿತ್ತು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾ ರೆಂದು ತಿಳಿದು ಬಂದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »