ಗೋಣಿಕೊಪ್ಪದಲ್ಲಿ ಸೆಸ್ಕ್ ವಿರುದ್ಧ ರೈತರ ಪ್ರತಿಭಟನೆ
ಕೊಡಗು

ಗೋಣಿಕೊಪ್ಪದಲ್ಲಿ ಸೆಸ್ಕ್ ವಿರುದ್ಧ ರೈತರ ಪ್ರತಿಭಟನೆ

February 28, 2020

ಗೋಣಿಕೊಪ್ಪಲು, ಫೆ.27- ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ನಿಲುಗಡೆ ಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗೋಣಿಕೊಪ್ಪ ಚೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಮುಂಜಾನೆಯಿಂದಲೇ ದ.ಕೊಡಗಿನ ಬಾಳೆಲೆ, ಶ್ರೀಮಂಗಲ, ಹುದಿಕೇರಿ, ಹಾಗೂ ಪೊನ್ನಂಪೇಟೆ ಹೋಬಳಿಯ ವಿವಿಧ ಗ್ರಾಮಗಳಿಂದ ತಂಡೋಪತಂಡವಾಗಿ ಆಗಮಿಸಿದ ರೈತರು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ಇಲಾಖಾ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣದಿಂದಲೇ ಸಮರ್ಪಕ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಚೆಸ್ಕಾ ಕಚೇರಿ ಮುಂದೆ ಧಿಕ್ಕಾರದ ಘೋಷಣೆ ಕೂಗಿದರು. ಈ ಸಂದರ್ಭ ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕೆಲ ಕಾಲ ರೈತರು ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪ್ರತಿಭಟನಾ ಸ್ಥಳಕ್ಕೆ ಚೆಸ್ಕಾಂನ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಪ್ರತಿ ಭಟನಾಕಾರರು ಆಗ್ರಹಿಸಿದರು. ಚೆಸ್ಕಾಂನ ಚೀಫ್ ಇಂಜಿನಿಯರ್ ಜಿ.ಎಲ್.ಚಂದ್ರ ಶೇಖರ್, ಕೊಡಗು ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಹದೇವ್‍ಸ್ವಾಮಿ, ಕೆಪಿಟಿ ಸಿಎಲ್‍ನ ಮುಖ್ಯ ಅಧಿಕಾರಿ ಮಾದೇಶ್, ಮಡಿಕೇರಿಯ ಚೆಸ್ಕಾಂ ಹಿರಿಯ ಅಧಿಕಾರಿ ಇ.ಇ. ಸೋಮಶೇಖರ್, ಗೋಣಿಕೊಪ್ಪ ಚೆಸ್ಕಾಂನ ಎಇಇ ಅಂಕಯ್ಯ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿ ದ್ದಂತೆಯೇ ರೈತ ಮುಖಂಡರು ಘೋಷಣೆ ಗಳನ್ನು ಕೂಗುತ್ತಾ ಆಕ್ರೋಶ ಹೊರಹಾಕಿ ದರು. ಎಇಇ ಅಂಕಯ್ಯ ಅವರನ್ನು ವಿದ್ಯುತ್ ಸಮಸ್ಯೆಯ ಬಗ್ಗೆ ವಿವರ ನೀಡಿ ಎಂದು ಒತ್ತಾಯಿಸುತ್ತಿರುವಾಗಲೇ ಇವರ ಮಾತಿಗೆ ಮನ್ನಣೆ ನೀಡದೆ ಇವರನ್ನು ತಕ್ಷಣವೇ ವರ್ಗಾಯಿಸುವಂತೆ ರೈತ ಮುಖಂಡರು ಆಗ್ರಹಿಸಿದರು.

ವಾರ್ಷಿಕವಾಗಿ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ರೈತ ತಾನು ಅವ ಲಂಭಿಸಿರುವ ಕಾಫಿ ಬೆಳೆಗೆ ನೀರನ್ನು ಹಾಯಿಸಲು ಮಾತ್ರ ವಿದ್ಯುತ್ ಕೇಳುತ್ತಾನೆ. ಈ ವಿದ್ಯುತ್‍ನಿಂದ ರೈತರ ಬದುಕು ನಿಂತಿದೆ. ವಿದ್ಯುತ್ ನೀಡಬೇಕಾದ ಇಲಾಖೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಬಗ್ಗೆ ಮನುಸೋಮಯ್ಯ ಅಧಿಕಾರಿಗಳ ಗಮನ ಸೆಳೆದರು. ದ.ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ನಿರಂತರ ತೊಂದರೆ ಎದು ರಿಸುತ್ತಿರುವ ಬಗ್ಗೆ ರೈತ ಮುಖಂಡರಾದ ಪುಚ್ಚಿಮಾಡ ಅಶೋಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಚೆಸ್ಕಾಂ ಇಲಾಖೆಗೆ ಸಂಪೂರ್ಣ ಅರಿವಿ ದ್ದರೂ ದ.ಕೊಡಗಿನಲ್ಲಿ ಉದ್ದೇಶ ಪೂರ್ವಕ ವಾಗಿ ರೈತರಿಗೆ ತೊಂದರೆ ನೀಡಲು ಬಾಳೆಲೆ ಹೋಬಳಿಯಲ್ಲಿ ವಿದ್ಯುತ್ ಕೇಬಲ್ ಕೆಲಸ ಕೈಗೆತ್ತಿಕೊಂಡಿದ್ದು ಸರಿಯಲ್ಲ. ಪೊನ್ನಂ ಪೇಟೆ, ಹುದಿಕೇರಿ, ಶ್ರೀಮಂಗಲ ಹೋಬಳಿಯ ವ್ಯಾಪ್ತಿಯಲ್ಲಿ ಕೇವಲ ಎರಡು ಗಂಟೆ ಮಾತ್ರ ವಿದ್ಯುತ್ ನೀಡಲಾಗು ತ್ತಿದೆ. ಇದರಿಂದ ರೈತನಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ರಾತ್ರಿ ಪೂರ್ತಿ ವಿದ್ಯುತ್ ಇಲ್ಲದೆ ತೊಂದರೆ ಎದುರಾಗಿದೆ. ಇದಕ್ಕೆ ಇಲ್ಲಿಯ ಅಧಿಕಾರಿಗಳೇ ನೇರ ಹೊಣೆ ಎಂದು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಆರೋಪಿಸಿದರು.

ರೈತ ಮುಖಂಡರಾದ ನಲ್ಲೂರಿನ ಸುಜಯ್ ಬೋಪಯ್ಯ, ಹುದಿಕೇರಿಯ ಚಕ್ಕೇರ ವಾಸು ಕುಟ್ಟಪ್ಪ, ಬಿರುನಾಣಿಯ ಕರ್ತಮಾಡ ಸುಜು ಪೊನ್ನಪ್ಪ, ಕಿರು ಗೂರಿನ ಚೆಪ್ಪುಡೀರ ಕುಟ್ಟಪ್ಪ, ತಿತಿಮತಿಯ ಚೆಪ್ಪುಡೀರ ಕಾರ್ಯಪ್ಪ, ಟಿ.ಶೆಟ್ಟಿಗೇರಿಯ ಅಪ್ಪಚಂಗಡ ಮೋಟಯ್ಯ, ಶ್ರೀಮಂಗಲದ ಅಜ್ಜಮಾಡ ಚಂಗಪ್ಪ, ನಲ್ಲೂರಿನ ಪುಚ್ಚಿ ಮಾಡ ಲಾಲಾ ಪೂಣಚ್ಚ ಸೇರಿದಂತೆ ಅನೇಕ ಭಾಗದ ರೈತ ಮುಖಂಡರು ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯ ದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಚಿ ಇಟ್ಟಿರ ಸಭಿತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಸಂಚಾಲಕ ಚಂಗು ಲಂಡ ಸೂರಜ್, ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ತಾಲೂಕು ಸಂಚಾಲಕ ಬಾಚಮಾಡ ಭವಿ ಕುಮಾರ್, ಮಾಯಮುಡಿಯ ಪುಚ್ಚಿ ಮಾಡ ರಾಯ್ ಮಾದಪ್ಪ, ಮಲ್ಚೀರ ಅಶೋಕ್, ಮಲ್ಚೀರ ಗಿರೀಶ್, ತೀತರ ಮಾಡ ರಾಜ, ಮರಿಸ್ವಾಮಿ, ಜಗದೀಶ್, ಬೋಡಂಗಡ ಅಶೋಕ್, ಅಳಮೇ ಯಂಗಡ ಬೋಸ್, ಸುರೇಶ್ ಸುಬ್ಬಯ್ಯ, ಕಾಡ್ಯಮಾಡ ಉದಯ್, ಚಕ್ಕೇರ ಸೂರ್ಯ ಮುಂತಾದವರು ಹಾಜರಿದ್ದರು.

ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ, ವಿರಾಜಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಖ್ಯಾತೆಗೌಡ ಮುಂದಾಳತ್ವದಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

Translate »