ಮುರುಘಾ ಮಠದ ಆಡಳಿತಾಧಿಕಾರಿ, ಅವರ ಪತ್ನಿ  ವಿರುದ್ಧ ಹಾಸ್ಟೆಲ್ ವಾರ್ಡನ್ ಕೇಸ್ ದಾಖಲು
News

ಮುರುಘಾ ಮಠದ ಆಡಳಿತಾಧಿಕಾರಿ, ಅವರ ಪತ್ನಿ ವಿರುದ್ಧ ಹಾಸ್ಟೆಲ್ ವಾರ್ಡನ್ ಕೇಸ್ ದಾಖಲು

August 28, 2022

ಚಿತ್ರದುರ್ಗ, ಆ.27-ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೈಸೂರಿನಲ್ಲಿ ಪ್ರಕರಣ ದಾಖ ಲಾಗುವ ಕೆಲ ಗಂಟೆಗಳ ಮುನ್ನ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಮಠದ ಆಡಳಿ ತಾಧಿಕಾರಿಯೂ ಆದ ಮಾಜಿ ಶಾಸಕ ಬಸವ ರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ವಿರುದ್ಧ ಲೈಂಗಿಕ ಕಿರುಕುಳ, ಅಪ್ರಾಪ್ತ ಬಾಲಕಿಯರ ಅಪಹರಣ ಹಾಗೂ ಮಠದ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ. ಮೈಸೂರಲ್ಲಿ ದಾಖಲಾಗಿರುವ ಪೋಕ್ಸೋ ಕಾಯ್ದೆಯ 2ನೇ ಆರೋಪಿಯಾಗಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಅವರು ಈ ದೂರು ದಾಖಲಿಸಿದ್ದು, ಕಳೆದ ಜುಲೈ 24ರಂದು ಇಬ್ಬರೂ ವಿದ್ಯಾರ್ಥಿನಿಯರು ವೈಯಕ್ತಿಕ ಕಾರಣ ನೀಡಿ ಗೇಟ್ ಪಾಸ್ ಪಡೆದು ವಸತಿ ನಿಲಯದಿಂದ ಹೊರಗೆ ಹೋಗಿದ್ದಾರೆ. ನಂತರ ಅವರು ಬೆಂಗಳೂರಿಗೆ ತೆರಳಿದ್ದು, ಅವರನ್ನು ಕಾಟನ್‍ಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡು, ವಿದ್ಯಾರ್ಥಿನಿಯರನ್ನು ಹಾಸ್ಟೆಲ್‍ಗೆ ಕರೆದೊಯ್ಯುವಂತೆ ಅಂದು ರಾತ್ರಿ 12.30ರ ವೇಳೆಯಲ್ಲಿ ಕರೆ ಮಾಡಿ ತಿಳಿಸಿದ್ದಾರೆ. ತಾವು ಮರು ದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಠಾಣೆಗೆ ಹೋದಾಗ ವಿದ್ಯಾರ್ಥಿನಿಯರನ್ನು ಮಠದ ಆಡಳಿತಾಧಿಕಾರಿ ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಬೆಳಗ್ಗೆ 5 ಗಂಟೆಗೆ ಕರೆದೊಯ್ದಿರುವುದಾಗಿ ಪೊಲೀಸರು ತಮಗೆ ತಿಳಿಸಿದರು ಎಂದು ದೂರಿನಲ್ಲಿ ರಶ್ಮಿ ತಿಳಿಸಿದ್ದಾರೆ.

ಜುಲೈ 25ರಂದು ಬಾಲಕಿಯರನ್ನು ಕರೆತಂದ ಬಸವರಾಜನ್ ಮತ್ತು ಸೌಭಾಗ್ಯ, ಅವರನ್ನು ಹಾಸ್ಟೆಲ್‍ಗೂ ಕರೆತರದೇ, ಪೋಷಕರ ವಶಕ್ಕೂ ನೀಡದೇ, ಜುಲೈ 27ರ ಮಧ್ಯಾಹ್ನದವರೆಗೆ ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ. ಅಲ್ಲದೇ ಮಠದ ಗೌರವಕ್ಕೆ ಧಕ್ಕೆ ತರಲು ತಮ್ಮ ಬೆಂಬಲಿಗರೊಂದಿಗೆ ಸೇರಿ ಒಳಸಂಚು ನಡೆಸಿ ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬದವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಬಸವರಾಜನ್ ಅವರು ಪದೇ ಪದೆ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಪೋಷಕರ ವಿಳಾಸವನ್ನು ಕೇಳುತ್ತಿದ್ದರು. ತಾವು ಅದನ್ನು ನೀಡಲು ನಿರಾಕರಿಸಿದ್ದಾಗಿ ದೂರಿನಲ್ಲಿ ತಿಳಿಸಿರುವ ರಶ್ಮಿ, ತಮ್ಮ ಜೊತೆ ಬಸವರಾಜನ್ ಅನುಚಿತವಾಗಿ ವರ್ತಿಸುತ್ತಿದ್ದರು, ಅಶ್ಲೀಲವಾಗಿ ಮಾತನಾಡುತ್ತಿದ್ದರು. ಜುಲೈ 27ರಂದು ವಿದ್ಯಾರ್ಥಿಗಳು ನಿಲಯದಲ್ಲಿ ಇಲ್ಲದಿರುವ ಸಮಯ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಬಸವರಾಜನ್ ತನ್ನ ಮೇಲೆ ಅತ್ಯಾ ಚಾರವೆಸಗಲು ಪ್ರಯತ್ನಿಸಿದರು ಎಂದು ದೂರಿನಲ್ಲಿ ತಿಳಿಸಿರುವ ರಶ್ಮಿ, ತನ್ನ ಇಚ್ಛೆಗೆ ಒಪ್ಪದಿದ್ದರೆ ಮಾಜಿ ಶಾಸಕನಾಗಿರುವ ತಾನು ತನ್ನ ಪ್ರಭಾವವನ್ನು ಬಳಸಿ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು. ಇಚ್ಛೆಗೆ ಸಹಕರಿಸಿದರೆ ಉತ್ತಮ ಹುದ್ದೆ ನೀಡುವು ದಾಗಿ ಆಮಿಷವೊಡ್ಡಿದ್ದರು ಎಂದು ರಶ್ಮಿ ಅವರು ಶುಕ್ರವಾರ ಸಂಜೆ 6 ಗಂಟೆಗೆ ನೀಡಿದ ದೂರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Translate »