ಕ್ಯಾಟ್ ಫಿಶ್ ಸಾಗಿಸುತ್ತಿದ್ದ ಮೂವರ ಬಂಧನ
ಮೈಸೂರು

ಕ್ಯಾಟ್ ಫಿಶ್ ಸಾಗಿಸುತ್ತಿದ್ದ ಮೂವರ ಬಂಧನ

March 22, 2020

ಮಡಿಕೇರಿ, ಮಾ.21- ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲ ಕ್ಯಾಟ್‍ಫಿಶ್ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಮಧ್ಯಪ್ರದೇಶ ಮೂಲದ ಲಾರಿ ಚಾಲಕ ವಿ.ಕೆ.ನೇಮಿಚಂದ್(40), ಕ್ಲೀನರ್ ಸೋಮ್ ಲಾಲ್(28) ಹಾಗೂ ಚಿಕ್ಕಬಳ್ಳಾಪುರದ ಅಂಜಪ್ಪ(45) ಬಂಧಿತ ಆರೋಪಿಗಳು. ಇವರಿಂದ ಲಕ್ಷಾಂತರ ರೂ. ಮೌಲ್ಯದ ಕ್ಯಾಟ್‍ಫಿಶ್ ವಶಪಡಿಸಿಕೊಂಡು ಲಾರಿ ಸಹಿತ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.

ದೇಶದಲ್ಲಿ 2000 ಇಸವಿಯಲ್ಲೇ ಕ್ಯಾಟ್ ಫಿಶ್ ಬ್ಯಾನ್ ಮಾಡಲಾಗಿದ್ದರೂ, ಕ್ಯಾನ್ಸರ್‍ಗೆ ಔಷಧಿ ಇದೆಯೆಂಬ ಸುಳ್ಳು ಸುದ್ದಿ ಹಿನ್ನೆಲೆ ಯಲ್ಲಿ ಮಂಗಳೂರಿನ ಬಿ.ಸಿ.ರೋಡ್ ನಿಂದ ಕೊಡಗು ಮಾರ್ಗವಾಗಿ ಬೆಂಗ ಳೂರಿಗೆ 16 ಚಕ್ರದ ಲಾರಿಯೊಂದರಲ್ಲಿ 3 ಟನ್ ಕ್ಯಾಟ್ ಫಿಶ್‍ಗಳನ್ನು ಅಕ್ರಮವಾಗಿ ಸಾಗಾಣೆ ಮಾಡಲಾಗುತ್ತಿತ್ತು. ಈ ಸಂಬಂಧ ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ನಗರದ ಸುದರ್ಶನ ವೃತ್ತದ ಬಳಿ ಲಾರಿ ತಪಾಸಣೆ ಮಾಡಿದಾಗ ನಿಷೇಧಿತ ಕ್ಯಾಟ್‍ಫಿಷ್‍ಗಳಿರು ವುದು ಪತ್ತೆಯಾಗಿದೆ. ತಕ್ಷಣ ಲಾರಿ ಚಾಲಕ ನೇಮಿಚಂದ್, ಕ್ಲೀನರ್ ಸೋಮ್‍ಲಾಲ್ ಹಾಗೂ ಅಂಜಪ್ಪನನ್ನು ವಶಕ್ಕೆ ಪಡೆದ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಆರೋಪಿ ಗಳು ಹಾಗೂ ಲಾರಿ ಸಮೇತ ಕ್ಯಾಟ್‍ಫಿಶ್ ಗಳನ್ನು ಮಡಿಕೇರಿ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‍ಪಿ ಡಾ.ಸುಮನ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಪ್ರಭಾರ ಸಿಪಿಐ ಹೆಚ್.ಬಿ.ಚಂದ್ರಶೇಖರ್, ಸಿಬ್ಬಂದಿಗಳಾದ ಕೆ.ವೈ.ಹಮೀದ್, ಕೆ.ಎಸ್. ಅನಿಲ್ ಕುಮಾರ್, ವೆಂಕಟೇಶ್, ಯೋಗೇಶ್ ಕುಮಾರ್, ವಸಂತ, ನಿರಂಜನ್, ಶರತ್ ರೈ ಚಾಲಕ ಶಶಿ ಕುಮಾರ್ ಪಾಲ್ಗೊಂಡಿದ್ದರು.

Translate »