ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆಶಿ ಸಾರ್ವಜನಿಕರ ಭೇಟಿ ಸದ್ಯಕ್ಕೆ ಸ್ಥಗಿತ
ಮೈಸೂರು

ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆಶಿ ಸಾರ್ವಜನಿಕರ ಭೇಟಿ ಸದ್ಯಕ್ಕೆ ಸ್ಥಗಿತ

March 22, 2020

ಬೆಂಗಳೂರು, ಮಾ.21(ಕೆಎಂಶಿ)- ಕೊರೊನಾ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆ ಯಲ್ಲಿ, ಬಂದು ಹೋಗುವವರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಭೇಟಿಯನ್ನು ಇಂದಿನಿಂದ ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ತಿಳುವಳಿಕೆ ಪ್ರಕಾರ ಕೊರೊನಾ ಕಾಯಿಲೆಯು ದೈಹಿಕ ಸ್ಪರ್ಶ ಹಾಗೂ ಪರಸ್ಪರ ಉಸಿರಾಟದ ಸೋಂಕಿನಿಂದ ಅತೀ ವೇಗವಾಗಿ ಹರಡುತ್ತಿದೆ. ಕೇಂದ್ರ ಹಾಗೂ ರಾಜ್ಯದ ಆಡಳಿತಾರೂಢ ಸರ್ಕಾರಗಳು ಈ ಕುರಿತು ಕೆಲವು ಸೂಚನೆಗಳನ್ನು ನೀಡಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ತಮ್ಮ ಸದಾಶಿವನಗರ ನಿವಾಸದಲ್ಲಾಗಲಿ ಅಥವಾ ಕೆಪಿಸಿಸಿ ಕಚೇರಿಯಲ್ಲಾಗಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಭೇಟಿ ಮುಂದೂಡಿರು ವುದಾಗಿ ಡಿ.ಕೆ.ಶಿವಕುಮಾರ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಭೇಟಿ ಕಾರ್ಯಕ್ರಮ ಮುಂದುವರಿಯುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಾವು ತೆಗೆದುಕೊಂಡಿರುವ ಈ ಕ್ರಮವನ್ನು ಯಾರೂ ತಪ್ಪಾಗಿ ಭಾವಿಸಬಾರದು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.

Translate »