ಕಫ್ರ್ಯೂ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಮನವಿ
ಮೈಸೂರು

ಕಫ್ರ್ಯೂ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಮನವಿ

May 1, 2021

ಭೇರ್ಯ, ಏ, 30 (ಮಹೇಶ್)- ಕೋವೀಡ್ -19 ರೂಪಾಂತರ ಕೊರೊನಾ ವೈರಸ್ ಹರದಂತೆ ರಾಜ್ಯ ಸರ್ಕಾರ 14 ದಿನಗಳ ಕೊರೊನಾ ಕಫ್ರ್ಯೂ ಮಾರ್ಗಸೂಚಿ ಯನ್ನು ಸರ್ಕಾರ ಹೊರಡಿಸಿದೆ. ಅದರಂತೆ ಅಂಗಡಿ ಮುಂಗಟ್ಟುಗಳ ವರ್ತಕರು, ಹೊಟೇಲ್ ಮಾಲೀಕರು, ತರಕಾರಿ ವ್ಯಾಪಾರಿಗಳು ಕಟ್ಟು ನಿಟ್ಟಿನ ಆದೇಶವನ್ನು ಪಾಲಿಸುವಂತೆ ಭೇರ್ಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮನವಿ ಮಾಡಿದರು.
ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಕೋವಿಡ್ ಲಸಿಕೆ ಹಾಕುವ ಸಂಬಂಧ ಹಾಗೂ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.

ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಹಕಾರವನ್ನು ನೀಡಬೇಕು. ಸರ್ಕಾರ 14 ದಿನದ ಕಫ್ರ್ಯೂ ವಿಧಿಸಿದ್ದು, ದಿನದ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯವಸ್ತು ಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಖರೀದಿಸುವ ಸಮಯದಲ್ಲಿ ತಪ್ಪದೇ ಜಾಗೃತ ರಾಗಿ, ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಹಾಕದೇ ಮನೆಯಿಂದಾಚೆ ಬರಬೇಡಿ, ಕೋವಿಡ್ -19 ಎರಡನೇ ಅಲೆಯ ರೂಪಾಂತರ ಕೊರೊನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹೆಚ್ಚಾಗಿ ಹರಡುತ್ತಿದ್ದು, ಬಹಳ ಎಚ್ಚರಿಕೆಯಿಂದ ಜಾಗೃತರಾಗಿ ಅಗತ್ಯ ವಸ್ತುಗಳನ್ನು ಖರೀದಿಸಿ ಬೇಗ ಮನೆ ಸೇರಿ ಎಂದು ಗ್ರಾಮದ ಜನರಲ್ಲಿ ಮನವಿ ಮಾಡಿದ ಅವರು, ಅಂಗಡಿ ಮುಂಗಟ್ಟು ಗಳ ವರ್ತಕರು, ಹೊಟೇಲ್ ಮಾಲೀಕರು, ತರಕಾರಿ ವ್ಯಾಪಾರಿಗಳ ಸರ್ಕಾರದ ನಿಯ ಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲನೇ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದರು.

ಗ್ರಾಮ ಪಂಚಾಯಿತಿ ಸಿಬ್ಬಂದಿ ಪಂಚಾ ಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಅಂಗನ ವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಜಾಥಾವನ್ನು ನಡೆಸಿ ದ್ದಾರೆ. ರೂಪಾಂತರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಪ್ಪದೇ ಆರೋಗ್ಯ ಕೇಂದ್ರಕ್ಕೆ ಬಂದು ಕೋವಿಡ್ ಲಸಿಕೆ ಹಾಕಿಸಿ ಕೊಳ್ಳಿ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅಮಿತ್ ಮಾತನಾಡಿ, ನಮ್ಮ ಆಸ್ಪತ್ರೆ ವ್ಯಾಪ್ತಿ ಯಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟ 3347 ಜನರಿಗೆ ಲಸಿಕೆ ಹಾಕಿದ್ದೇವೆ. ಆಸ್ಪತ್ರೆಯ ಸಿಬ್ಬಂದಿ ಹೆಚ್ಚು ಹೆಚ್ಚು ಲಸಿಕೆ ಹಾಕಿಸಿ ಕೊಳ್ಳಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೇ 1 ರಿಂದ 18 ವರ್ಷದ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಳ್ಳಬಹುದು. ಎರಡನೇ ಅಲೆಯ ರೂಪಾಂತರ ಕೊರೊನಾ ವೈರಸ್ ಬಗ್ಗೆ ಬಹಳ ಎಚ್ಚರಿಕೆ ಹಾಗೂ ಮುಂಜಾಗ್ರತೆ ವಹಿಸಬೇಕು. ಪಂಚಾಯಿತಿ ಕಾರ್ಯಾಲಯ ದಲ್ಲಿ ಕೂಡ ಲಸಿಕೆ ಹಾಕುವ ವ್ಯವಸ್ಥೆ ಕೂಡ ಮಾಡಲಾಗುವುದು. ದೊಡ್ಡ ಜನಸಂಖ್ಯೆ ಇರುವ ಹಳ್ಳಿಯಲ್ಲಿ ಕೂಡ ಲಸಿಕೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಕೋವಿಡ್ ಲಸಿಕೆ ಹಾಕಿದ್ದೇವೆ ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋ ಗಾಲಯ ತಾಂತ್ರಿಕ ಅಧಿಕಾರಿ ಪ್ರಕಾಶ್, ಆರೋಗ್ಯ ಹಿರಿಯ ಸಹಾಯಕ ಪರಮೇಶ್, ಹಿರಿಯ ಆರೋಗ್ಯ ಸಹಾ ಯಕಿಯರಾದ ಹೇಮಲತ, ಮಂಜುಳ, ಅನಿತಾ, ರಾಧ, ಆಶಾ ಕಾರ್ಯಕರ್ತೆ ಯರಾದ ಚಂದ್ರಕಲಾ, ಲಕ್ಷ್ಮೀ, ಮಂಜುಳ, ಗ್ರಾ.ಪಂ. ಕಾರ್ಯದರ್ಶಿ ತುಕರಾಂ, ಸಿಬ್ಬಂದಿಗಳಾದ ಕುಮಾರ್, ಜಯಂತ್, ಗೌತಮ್, ಮಹದೇವ, ಜಬ್ಬರ್, ರಮೇಶ್, ಸ್ವಾಮಿ ಮತ್ತಿತರರು ಇದ್ದರು.

Translate »