ಜಾತಿಗಣತಿ ವರದಿ ಅಂಗೀಕರಿಸಬೇಕು
ಮೈಸೂರು

ಜಾತಿಗಣತಿ ವರದಿ ಅಂಗೀಕರಿಸಬೇಕು

January 30, 2022

ಮೈಸೂರು, ಜ.29(ಎಸ್‍ಪಿಎನ್)-ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ನೇತೃತ್ವ ದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ನಡೆಸಿರುವ ಜಾತಿಗಣತಿ ವರದಿಯನ್ನು ಮೂಲೆಗುಂಪು ಮಾಡದೇ ರಾಜ್ಯ ಸರ್ಕಾರ ಆ ವರದಿಯನ್ನು ಅಂಗೀ ಕರಿಸಬೇಕು ಎಂದು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ.ರಾಜಪ್ಪ ದಳವಾಯಿ ಒತ್ತಾಯಿಸಿದರು.

ವಿಶ್ವಮೈತ್ರಿ ಬುದ್ಧವಿಹಾರ ವತಿಯಿಂದ ಅಶೋಕ ವೃತ್ತದಲ್ಲಿರುವ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಆಯೋಜಿ ಸಿದ್ದ 73ನೇ ಸಂವಿಧಾನ ದಿನಾಚರಣೆ ಹಾಗೂ ಸಾಧಕ ರಿಗೆ ಅಭಿನಂದಿಸುವ ಸಮಾರಂಭದಲ್ಲಿ `ಸಂವಿಧಾನ ಆಶಯ ಗಳ ಪ್ರಸ್ತುತತೆ’ ಕುರಿತು ಅವರು ಮಾತನಾಡಿದರು. ಕಳೆದ 5 ವರ್ಷಗಳ ಹಿಂದೆ ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿ ವರದಿ ವೈಜ್ಞಾನಿಕವಾಗಿದ್ದು, ಇದನ್ನು ಮೂಲೆಗೆ ಸೇರಲು ಬಿಡಬಾರದು. ಈ ಜಾತಿಗಣತಿ ವರದಿಯನ್ನು ಅನುಷ್ಠಾನಗೊಳಿಸಲು ಎಲ್ಲ ವರ್ಗದ ಜನರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಗಳು ಹೆಚ್ಚಾಗುತ್ತಿದೆ. ಹಾಗಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಬರುವ ಎಲ್ಲಾ ಸಂದೇಶಗಳನ್ನು ಹಿಂದು-ಮುಂದು ನೋಡದೇ ಬೇರೆಯವರೆಗೆ ಕಳುಹಿಸಬಾರದು. ಅದರ ಸತ್ಯಾನುಸತ್ಯತೆಯನ್ನು ಪರಿಶೀಲಿಸಿ ಬೇರೆಯವರೆಗೆ ಕಳುಹಿ ಸುವ ಪ್ರಯತ್ನ ಮಾಡಬೇಕು. ಇಂತಹ ಸುದ್ದಿಗಳಿಂದ ಮುಂದಿನ ದಿನಗಳಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗಿದ್ದ ಅಪಾರ ಜ್ಞಾನ ಸಂಪತ್ತು ಬೇರೆ ಯಾರಿಗೂ ಇಲ್ಲ. ಅವರು ಸುಮಾರು 13-14 ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು. ಇಂಗ್ಲಿಷ್, ಸಂಸ್ಕøತ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಅಧ್ಯ ಯನ ನಡೆಸಿದ್ದರು. ಹಾಗಾಗಿ ಅವರನ್ನು ಸಂವಿಧಾನ ಕರಡು ರಚನೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಎಂದರು.

ಸಂವಿಧಾನ ಒಂದು ಬೃಹತ್ ಗ್ರಂಥ. ಅದರಲ್ಲಿರುವ ಅಂಶಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದ ರಲ್ಲದೆ, ಇತ್ತೀಚೆಗೆ ಕೆಲವರು ಸಂವಿಧಾನದ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ, ಅದರಲ್ಲಿರುವ ಆಶಯಗಳ ಕುರಿತು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಂತಹ ಧೋರಣೆಗಳಿಂದ ಸಂವಿಧಾನದ ಆಶಯಕ್ಕೆ ಧಕ್ಕೆ ಯಾಗುತ್ತವೆ ಎಂದು ತಿಳಿಸಿದರು.

ಆಧುನಿಕ ಬೃಹತ್ ಗ್ರಂಥ: ಈ ನೆಲದ ರಾಮಾಯಣ, ಮಹಾಭಾರತ ಮಹಾಕಾವ್ಯಗಳ ನಂತರ ಬೃಹತ್ ಗ್ರಂಥ ಎಂದು ಪರಿಭಾವಿಸುವುದಾದರೆ, ಅದು ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನ. ಸಂವಿಧಾನದ ಹಿಂದಿನ ಚಿಂಥನ-ಮಂಥನ ಎಂತಹದು ಎಂಬುದನ್ನು ತಿಳಿದು ಕೊಳ್ಳಲು ಬೃಹತ್ ಗಾತ್ರದ 10 ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಆ ಪುಸ್ತಕಗಳು ಬಿಡುಗಡೆಗೊಂಡ ನಂತರ ಎಲ್ಲರೂ ಅಧ್ಯಯನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಅಂಬೇಡ್ಕರ್ ಅವರು, ಸಂವಿಧಾನ ರಚನೆ ವೇಳೆ ನಾಲ್ಕು ಅಂಶಗಳ ಕುರಿತು ಬೆಳಕು ಚೆಲ್ಲುತ್ತಾರೆ. ಈ ದೇಶದ ಸಣ್ಣ ಮತ್ತು ಬೃಹತ್ ಕೈಗಾರಿಕೆ, ದೇವಾಲಯ, ಶಿಕ್ಷಣ, ಭೂಮಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ನಂತರ ಅದು ಬೇರೆ ಬೇರೆ ಸಂದರ್ಭದಲ್ಲಿ ಜಾರಿಗೆ ಬಂದವು. ಅಲ್ಲದೆ, ಕರ್ನಾ ಟಕದಲ್ಲಿ ಅಂದಾಜು 1,593 ಜಾತಿಗಳಿವೆ. ಅದರಲ್ಲಿ ಕೆಲವೊಂದು ಜಾತಿಯವರು ಒಂದು ಬಾರಿ ಹೇಳಿದರೆ, ಅದು ಶಾಶ್ವತ ಶಾಸನವಾಗುತ್ತದೆ ಎಂದರು.

ಆದರೆ, ಕೆಳ ವರ್ಗದವರು ಸರ್ಕಾರದ ಸವಲತ್ತು ಪಡೆಯಲು ಪ್ರತಿನಿತ್ಯ ತಮ್ಮ ಪ್ರತಿಭೆಯನ್ನು ತೋರಿಸ ಬೇಕಾಗಿರುವ ಅನಿವಾರ್ಯತೆ ಇದೆ. ಅಲ್ಲದೆ, ಈ ದೇಶದಲ್ಲಿ ಮಹಾತ್ಮ ಗಾಂಧೀಜಿಯವರದ್ದು ಜನಪರ ಹೋರಾಟ, ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು, ಸಮಾ ನತೆ- ಭ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟಗಳನ್ನು ಕಾಣಬಹುದಾಗಿದೆ ಎಂದು ಕೆಲವು ಘಟನೆಗಳ ಮೂಲಕ ತಿಳಿಸಿದರು. ಈ ವೇಳೆ ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಉಮೇಶ್ ಅವರನ್ನು ಅಭಿನಂದಿಸಲಾಯಿತು. ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಪಲ್ಲವಿಬೇಗಂ, ಶಾರದಮ್ಮ ಈಶ್ವರ್, ಭುವನೇ ಶ್ವರಿ ಪ್ರಭುಮೂರ್ತಿ, ಪಿ.ಟಿ.ಕೃಷ್ಣಪ್ಪ, ಜೆ.ರವಿ ಇದ್ದರು.

Translate »