ಚಾಮುಂಡಿಬೆಟ್ಟದಲ್ಲಿ ಹಿಮ್ಮುಖವಾಗಿ ಲಾರಿ ಚಲಿಸಿ ಕಾರ್ಮಿಕ ಸಾವು
ಮೈಸೂರು

ಚಾಮುಂಡಿಬೆಟ್ಟದಲ್ಲಿ ಹಿಮ್ಮುಖವಾಗಿ ಲಾರಿ ಚಲಿಸಿ ಕಾರ್ಮಿಕ ಸಾವು

June 10, 2018

ಮೈಸೂರು: ಇಳಿಜಾರಿನಲ್ಲಿ ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಹರಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಪ್ರಕಾಶ್ ಸರಕಾರ್(34) ಮೃತ ವ್ಯಕ್ತಿ.

ಚಾಮುಂಡಿಬೆಟ್ಟದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ ಕೆಬಿಆರ್ ಇನ್ ಫ್ರಾಟೆಕ್ಟ್ ಕಂಪನಿಗೆ ಸೇರಿದ (ಕೆಎ01 ಎಹೆಚ್4104) ಲಾರಿ ಚಾಲಕ ನಾಗೇಂದ್ರ, ಸಿಮೆಂಟ್ ಮಿಕ್ಸರ್ ತುಂಬಿದ ಲಾರಿ ಯನ್ನು ತಂದು ನಿಲ್ಲಿಸಿದ್ದಾರೆ. ಇಳಿಜಾರು ಮುಖವಾಗಿ ನಿಲ್ಲಿಸಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಹಿಮ್ಮುಖವಾಗಿ ಚಲಿಸಿ ಶೆಡ್‍ನೊಳಗೆ ನುಗ್ಗಿದ ಪರಿಣಾಮ ಶೆಡ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕ ಪ್ರಕಾಶ್ ಸರಕಾರ್ ಮೇಲೆ ಅದು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »