ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನ
ಚಾಮರಾಜನಗರ

ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನ

March 3, 2020

ಚಾಮರಾಜನಗರ,ಮಾ.2- ಬಿಸಿಲಿ ನಿಂದ ಬಸವಳಿದಿದ್ದ ಜನತೆಗೆ ಸೋಮ ವಾರ ಮಳೆರಾಯ ತಂಪೆರೆದಿದ್ದಾನೆ.
ಚಾ.ನಗರ, ಗುಂಡ್ಲುಪೇಟೆ, ಹನೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು ಅರ್ಧ ತಾಸಿಗೂ ಹೆಚ್ಚು ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ಜನತೆ ಹರ್ಷಗೊಂಡಿದ್ದಾರೆ.

ಚಾಮರಾಜನಗರ: ಪಟ್ಟಣದಲ್ಲಿ ಇಂದು ಮಧ್ಯಾಹ್ನ ಸುಮಾರು 2.45ಕ್ಕೆ ಆರಂಭ ವಾದ ಮಳೆ 3.20ರವರೆಗೂ ಸಾಧಾರಣ ವಾಗಿ ಸುರಿಯಿತು. ನಗರದಲ್ಲಿ ಕೆಲವು ವಾರ್ಡ್‍ಗಳಲ್ಲಿ ನಗರಸಭೆಯಿಂದ ರಸ್ತೆ, ಚರಂಡಿ ಕಾಮಗಾರಿ ನಡೆಯುತ್ತಿದ್ದು, ವರುಣನ ಆಗಮನದಿಂದ ಕಾಮಗಾರಿಗೆ ಕೆಲಕಾಲ ತಡೆಯೊಡ್ಡಿತ್ತು. ಅಲ್ಲದೇ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಓಡಾಡಲು ಪರದಾಡುವಂತಾಯಿತು.

The first rainfall of the year in the Chamarajanagar district-1

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ವಿವಿಧಡೆ ಮಳೆಯಾಗಿದೆ.
ಸೋಮವಾರ ಮಧ್ಯಾಹ್ನದಿಂದಲೇ ಪೂರ್ವ ಮುಂಗಾರು ಮಳೆ ಹಿನ್ನೆಲೆಯಲ್ಲಿ ಮೋಡಕವಿದ ವಾತಾವರಣವಿತ್ತು. ಸುಮಾರು 4 ಗಂಟೆ ವೇಳೆಗೆ ಪಟ್ಟಣದ ಸೇರಿದಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮೇಲುಕಾಮನಹಳ್ಳಿ, ಗೋಪಾಲಸ್ವಾಮಿಬೆಟ್ಟ, ಹಂಗಳ, ಶಿವಪುರ, ಶಿಂಡನಪುರ, ಬೇಗೂರು, ಕಗ್ಗಳ ಹಾಗೂ ತೆರಕಣಾಂಬಿ ಗ್ರಾಮಗಳಲ್ಲಿ 20 ನಿಮಿಷಗಳ ಕಾಲ ಸಾಧಾರಣ ಮಳೆ ಬಿದ್ದಿದೆ.

Translate »