ಮೇಲುಕೋಟೆ,ಮಾ.2-ವೈರಮುಡಿ ಜಾತ್ರಾ ಮಹೋತ್ಸವಕ್ಕೂ ಮುನ್ನಾ ಎನ್‍ಎಸ್‍ಎಸ್ ಶಿಭಿರಾರ್ಥಿ ಗಳು ಗ್ರಾ.ಪಂ ಸಹಕಾರದಲ್ಲಿ ಮೇಲುಕೋಟೆಯ ವಿವಿಧೆಡೆ ಪ್ರಥಮ ಹಂತದ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿದ್ದಾರೆ.
ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ನೇತೃತ್ವದಲ್ಲಿ ಮೇಲುಕೋಟೆಯಲ್ಲಿ ನಡೆದ ಮಂಡ್ಯ ಜಿಲ್ಲಾ ಮಟ್ಟದ ಅಂತರ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ 39 ರಾಷ್ಟ್ರೀಯ ಸೇವಾ ಯೋಜನೆಯ 180 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. 7 ದಿನಗಳ ಕಾಲ ನಡೆದ ಶಿಬಿರದ ವೇಳೆ 5 ತಂಡಗಳಾಗಿ ಶ್ರಮ ದಾನ ಮಾಡಿದ ವಿದ್ಯಾರ್ಥಿಗಳು, ಮೇಲುಕೋಟೆಯ ಕಲ್ಯಾಣಿ, ರಾಯಗೋಪುರ ಅಕ್ಕತಂಗಿಕೊಳ, ದಳ ವಾಯಿಕೆರೆ, ರಾಜಬೀದಿ, ಶತಮಾನದ ಶಾಲೆಯ ಆವರಣ, ಬೆಟ್ಟದಕೊಳ, ವಾಹನೋತ್ಸವ ಮಂಟಪ ಸೇರಿದಂತೆ ವಿವಿಧ ಕಡೆ ಚರಂಡಿಗಳನ್ನೂ ಸ್ವಚ್ಛಗೊಳಿಸಿದರು. ಗ್ರಾ.ಪಂ.ಅಧ್ಯಕ್ಷ ಅವ್ವಗಂಗಾಧರ್, ಪಿ.ಡಿಒ ತಮ್ಮೇಗೌಡ ಸದಸ್ಯ ಬಲರಾಮೇಗೌಡ ಹಾಗೂ ಸದಸ್ಯರು ಸ್ಥಾನಾ ಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ಅಹೋ ಬಿಲಮಠದ ಶಶಿಕುಮಾರ್ ಇತರರು ಶ್ರವiದಾನದ ವೇಳೆ ಹಾಜರಿದ್ದು ಅಗತ್ಯ ಸಹಕಾರ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿಬಿರಾಧಿಕಾರಿ ವೆಂಕಟೇಗೌಡ, ಮೇಲುಕೋಟೆಯ ಶ್ರಮದಾನ ಶಿಬಿರಕ್ಕೆ ಹಲವು ಮಂದಿ ಸಹಕಾರ ನೀಡಿದ್ದಾರೆ ದೇವಾಲಯದ ಆಡಳಿತಕ್ಕೆ ಒಳಪಟ್ಟ ಸ್ಮಾರಕಗಳು ಮತ್ತು ಮಂಟಪಗಳ ಬಳಿ ನಮ್ಮ ವಿದ್ಯಾರ್ಥಿಗಳು ಶ್ರಮದಾನ ಮಾಡುವ ವೇಳೆ ದೇಗುಲದ ಅಧಿಕಾರಿ ನಂಜೇಗೌಡ ಕನಿಷ್ಠ ಬಂದು ಮಾತನಾಡುವ ಸೌಜನ್ಯ ಸಹ ತೋರಲಿಲ್ಲ. ಅವರಿಂದ ನಿರೀಕ್ಷಿತ ಸಹಕಾರ ದೊರೆಯದಿರುವುದು ಬೇಸರದ ಸಂಗತಿಯಾಗಿದ್ದು, ಶಾಸಕರು ಭಾಗವಹಿಸಿದ್ದ ಕಾರ್ಯಕ್ರಮಕ್ಕೂ ಕಾರ್ಯನಿರ್ವಾಹಕ ಅಧಿಕಾರಿ ಬರಲಿಲ್ಲ ಎಂಬುದು ನಿರ್ಲಕ್ಷ್ಯತೆಯ ಪ್ರಮಾಣವನ್ನು ತೋರಿಸುತ್ತದೆ ಎಂದು ಅಸಮದಾನ ವ್ಯಕ್ತಪಡಿಸಿ ಎಲ್ಲಾ ಶಿಭಿರಾರ್ಥಿಗಳು ಮತ್ತು ಕುಟುಂಬದವರನ್ನು ವೈರಮುಡಿ ಉತ್ಸವಕ್ಕೆ ಆಹ್ವಾನಿಸಲಾಗಿದೆ ಎಂದರು.
ಜಾತ್ರಾ ಸ್ವಚ್ಛತೆ : ವೈರಮುಡಿ ಜಾತ್ರಾ ಮಹೋತ್ಸವ ಆರಂಭವಾಗುವ ಎರಡು ದಿನ ಮುಂಚಿತವಾಗಿ ಮಾರ್ಚ್ 25ರಿಂದಲೇ 2 ನೇ ಹಂತದ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮತ್ತು ಜಿ.ಪಂ ಸಿ.ಇ.ಒ ಯಾಲಕ್ಕೀಗೌಡರ ಆದೇಶದಂತೆ ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿಯ 50ಕ್ಕೂ ಹೆಚ್ಚು ಪೌರಕಾ ರ್ಮಿಕರು ಸ್ವಚ್ಚತಾ ಕಾರ್ಯನಡೆಸಲಿದ್ದಾರೆ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಸ್ವಚ್ಛತೆ ನಿರ್ವಹಣೆ, ಶುದ್ಧಕುಡಿಯುವ ನೀರಿನ ಪೂರೈಕೆಗೆ ಸಮರ್ಪಕ ವ್ಯವಸ್ಥೆಮಾಡಿಕೊಳ್ಳ ಲಾಗಿದೆ. ಸ್ವಚ್ಚತೆ ಕಾಪಾಡುವ ನಿಯಮಗಳಿರುವ ಪೋಸ್ಟರ್ ಸಿದ್ಧಪಡಿಸಿ ಎಲ್ಲಾ ವಸತಿಗೃಹ, ಛತ್ರಗಳ ಮುಂಭಾಗ ಪ್ರಕಟಿಸಲಾಗುತ್ತದೆ ಭಕ್ತರು ಮತ್ತು ನಾಗರೀಕರು ಸಹಕಾರ ನೀಡಬೇಕು ಎಂದು ಗ್ರಾ.ಪಂ ಅಧ್ಯಕ್ಷ ಅವ್ವ ಗಂಗಾಧರ್ ಪಿ.ಡಿ.ಒ ತಮ್ಮೇಗೌಡ ಮಾಹಿತಿ ನೀಡಿದ್ದಾರೆ.