ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಅಭಿಪ್ರಾಯ
ಹಾಸನ: ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ರಕ್ಷಣೆಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡು ವುದು ಅತಿ ಮುಖ್ಯವಾಗಿದೆ. ಆ ಸಮಯ ದಲ್ಲಿ ನಮ್ಮ ಸಾಮಾನ್ಯ ತಿಳುವಳಿಕೆ, ತಾರ್ಕಿಕವಾಗಿ ಮತ್ತು ವಿಶ್ಲೇóಷಣಾತ್ಮಕವಾಗಿ ಆಲೋಚಿಸಿದಾಗ ಮುಂದೆ ಆಗುವ ಅವಘಡಗಳು ನಡೆಯದಂತೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ಮತ್ತು ಹೆಚ್.ಐ.ವಿ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ತಿಳಿಸಿದರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ( ಸ್ವಾಯತ್ತ) ಕಾಲೇ ಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ನಡೆದ ಪ್ರಥಮ ಚಿಕಿತ್ಸೆ ಉಪನ್ಯಾಸ ಕುರಿತು ಮಾತನಾಡಿದರು.
ಅಪಘಾತ ಹೊಂದಿದ ವ್ಯಕ್ತಿಯನ್ನು ಪ್ರಥಮ ಚಿಕಿತ್ಸೆಗೆ ಒಳಪಡಿಸುವುದು ಮುಖ್ಯ. ಅಲ್ಲದೆ, ಇಂತಹ ಸಂದರ್ಭದಲ್ಲಿ ಗಾಬರಿಗೊಳ್ಳುವುದು ಹೆಚ್ಚು. ಹಾಗಾಗಿ ನಿಧಾನವಾಗಿ ಯೋಚಿಸಿ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಿದರು.
ನೀರು ಹಾಗೂ ಆಹಾರದಿಂದ ಬರುವ ಕಾಯಿಲೆಗಳನ್ನು ನಿಯಂತ್ರಿಸುವ ಬಗ್ಗೆ, ಹೇಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಶೈಕ್ಷಣಿಕ ಡೀನ್ ಪ್ರೊ.ವೈ.ಪಿ. ಮಲ್ಲೇಗೌಡ ಮಾತನಾಡಿ, ಸಮಯವನ್ನು ವ್ಯರ್ಥಮಾಡದೆ ವಿದ್ಯಾರ್ಥಿ ಜೀವನವನ್ನು ಅಮೂಲ್ಯವಾಗಿಸಿಕೊಳ್ಳಿ ಹಾಗೂ ಸೋತು ಬಿದ್ದಾಗ ಎದ್ದು ನಿಂತು ಮುಂದೆ ಹೋಗುವ ಗುರಿಯನ್ನಿಟ್ಟುಕೊಳ್ಳಿ, ನಿಮ್ಮಲ್ಲಿರುವ ಮೌಲ್ಯವನ್ನು ಗುರುತಿಸಿಕೊಂಡು ಮುನ್ನುಗ್ಗಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ರೆಡ್‍ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ.ವೈ. ಡಿ.ರತ್ನ, ಅರ್ಥಶಾಸ್ತ್ರ ವಿಭಾಗದ ಪ್ರೊ. ಪದ್ಮ, ಪ್ರೊ.ಮಂಜುಳ, ಇತಿಹಾಸ ವಿಭಾ ಗದ ಪ್ರೊ.ಲಿಂಗರಾಜು ಉಪಸ್ಥಿತರಿದ್ದರು.