ಗೃಹಿಣಿ ನಾಪತ್ತೆ
ಮೈಸೂರು

ಗೃಹಿಣಿ ನಾಪತ್ತೆ

May 25, 2020

ತಿ.ನರಸೀಪುರ, ಮೇ 24 (ಎಸ್‍ಕೆ) -ಲಾಕ್‍ಡೌನ್‍ಗೆ ಸಿಲುಕಿ ತವರು ಮನೆ ಯಲ್ಲಿ ಉಳಿದು ಕೊಂಡಿದ್ದ ಗೃಹಿಣಿ ನಾಪತ್ತೆಯಾಗಿದ್ದಾರೆ.

ಚಾಮರಾಜನಗರದ ಯಳಂದೂರು ತಾಲೂಕಿನ ಯರಿ ಯೂರು ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಯಶೋಧಮ್ಮ (38) ನಾಪತ್ತೆಯಾಗಿ ದ್ದಾರೆ. ಯುಗಾದಿ ಹಬ್ಬಕ್ಕೆಂದು ತವರು ಮನೆ ಇಂದಿರಾ ಕಾಲೋನಿಗೆ ಆಗಮಿ ಸಿದ್ದ ಅವರು ಲಾಕ್‍ಡೌನ್‍ನಿಂದಾಗಿ ಇಲ್ಲಿಯೇ ಉಳಿದಿದ್ದರು. ಅನಾರೋಗ್ಯ ದಿಂದ ಬಳಲುತ್ತಿದ್ದ ಗೃಹಿಣಿ ಕಳೆದ ಮೇ 10ರಂದು ಮನೆಯಿಂದ ಹೊರ ಹೋದವರು ಇದುವರೆವಿಗೂ ಪತ್ತೆ ಯಾಗಿಲ್ಲ. ನಾಪತ್ತೆಯಾಗಿರುವ ಗೃಹಿಣಿ ಬಗ್ಗೆ ಸುಳಿವು ಸಿಕ್ಕವರು ತಿ.ನರಸೀಪುರ ಪಟ್ಟಣ ಠಾಣೆ ದೂ. 08227-261227 ಅಥವಾ ಮೊ. 897032 1749 ಮಾಹಿತಿ ಕೋರಲಾಗಿದೆ.

Translate »