ಇಂದ್ರಾಣಿ ಮುಖರ್ಜಿ ಜೈಲು ಕೊಠಡಿ ಪಕ್ಕದಲ್ಲೇ ರಿಯಾ ಚಕ್ರವರ್ತಿ ಜೈಲುವಾಸ ಫ್ಯಾನ್ ಇಲ್ಲ, ಬೆಡ್ ಇಲ್ಲ, ಹಾಸಿಗೆ ಇಲ್ಲ
ಮೈಸೂರು

ಇಂದ್ರಾಣಿ ಮುಖರ್ಜಿ ಜೈಲು ಕೊಠಡಿ ಪಕ್ಕದಲ್ಲೇ ರಿಯಾ ಚಕ್ರವರ್ತಿ ಜೈಲುವಾಸ ಫ್ಯಾನ್ ಇಲ್ಲ, ಬೆಡ್ ಇಲ್ಲ, ಹಾಸಿಗೆ ಇಲ್ಲ

September 13, 2020

ಮುಂಬೈ,ಸೆ.12- ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕ ರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಗೆಳತಿ ರಿಯಾ ಚಕ್ರವರ್ತಿ ಜೈಲಿನಲ್ಲಿ ಫ್ಯಾನ್ ಮತ್ತು ಬೆಡ್ ರಹಿತ ರಾತ್ರಿ ಕಳೆದಿದ್ದಾರೆ. ಅದೂ ಕೂಡ ಇಂದ್ರಾಣಿ ಮುಖರ್ಜಿ ಇರುವ ಕೊಠಡಿ ಪಕ್ಕದ ಕೊಠಡಿಯಲ್ಲಿ ರಿಯಾರನ್ನು ಇರಿಸಲಾಗಿದೆÉ. ರಿಯಾ ಚಕ್ರವರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ವಜಾಗೊಳಿಸಿದ್ದು, ಹೀಗಾಗಿ ರಿಯಾಗೆ ಜೈಲೇ ಗತಿಯಾದಂತಾಗಿದೆ. ಹೈಫೈ ಜೀವನ ನಡೆಸುತ್ತಿದ್ದ ರಿಯಾ ಸದ್ಯ ಜೈಲುವಾಸಿಯಾಗಿದ್ದು, ಮೂಲ ಸೌಕರ್ಯ ಗಳಿಲ್ಲದ ಕತ್ತಲೆ ಕೋಣೆಯಲ್ಲಿ ದಿನ ಕಳೆಯುತ್ತಿದ್ದಾರೆ. ಭದ್ರತಾ ಕಾರಣಗಳಿಂದ ರಿಯಾ ಪ್ರತ್ಯೇಕ ಕೋಣೆಯಲ್ಲಿಡಲಾಗಿದೆ. ರಿಯಾ ಇರುವ ಬೈಕುಲ್ಲಾ ಜೈಲಿನಲ್ಲಿ ರಿಯಾರನ್ನು ಇರಿಸ ಲಾಗಿದ್ದು, ರಿಯಾ ಇರುವ ಜೈಲು ಕೊಠಡಿಯಲ್ಲಿ ಫ್ಯಾನ್ ಇಲ್ಲ, ಬೆಡ್ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಜೈಲಿನಲ್ಲಿ ರಿಯಾಗೆ ಮಲಗಲು ಚಾಪೆ ನೀಡಲಾಗಿದ್ದು, ಹಾಸಿಗೆ ಮತ್ತು ದಿಂಬು ನೀಡಿಲ್ಲ. ಈ ಕೊಠಡಿಯಲ್ಲಿ ಫ್ಯಾನ್ ಕೂಡ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದ್ರಾಣಿ ಮುಖರ್ಜಿ ಕೊಠಡಿ ಪಕ್ಕದಲ್ಲೇ ರಿಯಾ ವಾಸ: ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ ಇರುವ ಕೊಠಡಿ ಪಕ್ಕದಲ್ಲೇ ರಿಯಾರನ್ನು ಇರಿಸಲಾಗಿದೆ. ಇನ್ನು ಆತಂಕಕಾರಿ ವಿಚಾರವೆಂದರೆ ಸುಶಾಂತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಯಾ ಮೇಲೆ ಸಹ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಟಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೂರು ಶಿಫ್ಟ್ ನಲ್ಲಿ ಇಬ್ಬರು ಕಾನ್‍ಸ್ಟೇಬಲ್‍ಗಳು ನಟಿಗೆ ರಕ್ಷಣೆ ನೀಡುತ್ತಿದ್ದಾರೆ. ಇನ್ನು ಸೆಪ್ಟೆಂಬರ್ 22ರವರೆಗೆ ರಿಯಾಗೆ ನ್ಯಾಯಾಂಗ ಬಂಧನವಿದ್ದು, ರಿಯಾ ಬಾಂಬೆ ಹೈಕೋರ್ಟಿಗೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ.

 

 

Translate »