ಸೆ. 18ರಂದು ಬೆಂಗಳೂರಲ್ಲಿದಕ್ಷಿಣ ಭಾರತ ಮುಖ್ಯಮಂತ್ರಿಗಳ ಸಭೆ
ಮೈಸೂರು

ಸೆ. 18ರಂದು ಬೆಂಗಳೂರಲ್ಲಿದಕ್ಷಿಣ ಭಾರತ ಮುಖ್ಯಮಂತ್ರಿಗಳ ಸಭೆ

September 15, 2018

ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಈ ತಿಂಗಳ 18ರಂದು ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ಹಾನಿಗೀಡಾದ ಕೊಡಗು ಜಿಲ್ಲೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ 10 ಕೋಟಿ ರೂ. ದೇಣಿಗೆ ನೀಡುತ್ತಿದೆ ಎಂದರು.

ಇದರಲ್ಲಿ 8 ಕೋಟಿ ರೂ.ಗಳನ್ನು ಸಂಸ್ಥೆ ಗುರುತಿಸಿರುವ ಫಲಾನುಭವಿಗಳಿಗೆ ತಲಾ 65,000 ರೂ. ನೀಡಲಿದೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸುರೇಂದ್ರ ಕುಮಾರ್ ನೀಡಿದ ಎರಡು ಕೋಟಿ ರೂ. ಚೆಕ್ಕನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದರು.

Translate »