ಆಹಾರ ಇಲಾಖೆ ಉಪನಿರ್ದೇಶಕ  ಡಾ.ಕಾ.ರಾಮೇಶ್ವರಪ್ಪ ಕರೆದಿದ್ದ ಸಭೆ ರದ್ದು: ಮೈಸೂರು ಡಿಸಿ ಕಚೇರಿಯಲ್ಲಿ ಹೈಡ್ರಾಮ
ಮೈಸೂರು

ಆಹಾರ ಇಲಾಖೆ ಉಪನಿರ್ದೇಶಕ  ಡಾ.ಕಾ.ರಾಮೇಶ್ವರಪ್ಪ ಕರೆದಿದ್ದ ಸಭೆ ರದ್ದು: ಮೈಸೂರು ಡಿಸಿ ಕಚೇರಿಯಲ್ಲಿ ಹೈಡ್ರಾಮ

July 22, 2018

ಮೈಸೂರು:  ನಂಜನಗೂಡು ಎಪಿಎಂಸಿ ಗೋದಾಮಿನಲ್ಲಿ ಪಡಿತರ ನಾಪತ್ತೆ ಪ್ರಕರಣ ಸಂಬಂಧ ಹೊರಡಿಸಿದ್ದ ಆಹಾರ ಮತ್ತು ನಾಗರಿಕ ಸರ ರಾಜು ಇಲಾಖೆ ಹಿರಿಯ ಉಪ ನಿರ್ದೇಶಕ ಡಾ. ಕಾ.ರಾಮೇ ಶ್ವರಪ್ಪ ಅಮಾನತು ಆದೇಶಕ್ಕೆ ಕೆಎಟಿ ತಡೆ ಯಾಜ್ಞೆ ನೀಡಿದೆ.

ಸರ್ಕಾರದ ಅಮಾನತು ಆದೇಶದ ವಿರುದ್ಧ ಡಾ. ರಾಮೇಶ್ವರಪ್ಪ ಕೆಎಟಿ ಮೊರೆ ಹೋಗಿ ಶುಕ್ರ ವಾರ ತಡೆಯಾಜ್ಞೆ ತಂದಿದ್ದರು. ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಡೆಯಾಜ್ಞೆ ವಿಷಯ ತಾರದೆ ಡಾ. ರಾಮೇಶ್ವರಪ್ಪ ಅವರು ತಮ್ಮ ಕಚೇರಿಗೆ ಆಗಮಿಸಿ ಅಧಿಕಾರಿಗಳ ಸಭೆ ಕರೆದಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ಸಭೆ ರದ್ದುಪಡಿಸಿದರು. ತಮಗೆ ಕೆಎಟಿ ಆದೇಶ ಪ್ರತಿ ತಲುಪಿಲ್ಲ ಹಾಗೂ ಕೆಲ ಪ್ರಕ್ರಿಯೆಗಳನ್ನು ನಡೆಸದೆ ಇಲಾಖೆ ವಿಷಯದಲ್ಲಿ ಸಭೆ ನಡೆಸಬಾರದೆಂದು ಡಿಸಿ ಆದೇಶಿಸಿದ್ದಾರೆ.

ಡಾ. ರಾಮೇಶ್ವರಪ್ಪ ಅಮಾನತುಗೊಂಡ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮಂಡ್ಯ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಕುಮುದ ಅವರನ್ನು ನಿಯೋಜಿಸಲಾಗಿತ್ತು.

Translate »