ರಾಜ್ಯವೆಲ್ಲಾ ಸುತ್ತಿದರು ಕ್ಷೇತ್ರದ ಜನರ ಸೇವೆ ಮಾಡಲು ಮರೆಯಲ್ಲ
ಮೈಸೂರು

ರಾಜ್ಯವೆಲ್ಲಾ ಸುತ್ತಿದರು ಕ್ಷೇತ್ರದ ಜನರ ಸೇವೆ ಮಾಡಲು ಮರೆಯಲ್ಲ

July 22, 2018

ಮೈಸೂರು:  ನಮ್ಮಲ್ಲಿ ಒಡಕಿಲ್ಲ, ಒಂದೇ ಮನಸ್ಸಿನಿಂದ ಜನರ ಸೇವೆಯನ್ನು ಮಾಡುತ್ತಿದ್ದೇವೆ. ನಾನು ಕರ್ನಾ ಟಕವನ್ನೆಲ್ಲಾ ಸುತ್ತಿದರೂ ಕ್ಷೇತ್ರದ ಜನರ ಸೇವೆಗೆ ಆದ್ಯತೆ ನೀಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ವಿಜಯನಗರ 3ನೇಹಂತದಲ್ಲಿರುವ ಸಂಗಮ ವೃತ್ತದಲ್ಲಿ ವಿಜಯಗರ ಒಕ್ಕಲಿಗರ ವೇದಿಕೆ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ, ಗಣ್ಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಮೂರನೇ ಹಂತದ ಸಮಸ್ಯೆಗಳು ಗೊತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ವಿಜಯನಗರ 4ನೇ ಹಂತಕ್ಕೆ ಪೈಪ್ ಲೈನ್‍ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡುತ್ತೇನೆ ಎಂದರು.
ಬಹಳ ಹೋರಾಟದಿಂದ ಕೂಡಿದ ಚುನಾವಣೆಯಲ್ಲಿ ಸುಮಾರು 1.71 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಸದಾ ನಿಮ್ಮ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ಚುನಾವಣೆಯಿಂದ ಸುಸ್ತಾಗಿರುವ ನಾನು ಸುದಾರಿಸಿಕೊಂಡು ನಿಮ್ಮ ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದೇನೆ ಎಂದರು.

ಮಾಜಿ ಶಾಸಕ ವಾಸು ಮಾತನಾಡಿ, ವಿಶ್ವವೇ ಬೆಂಗಳೂರಿನತ್ತ ನೋಡುವಂತಾ ಗಿದೆ. ನ್ಯೂಯಾರ್ಕ್ ನಗರವನ್ನು ಬಿಟ್ಟರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಂಗಳೂರು ಮುಂದಿದೆ. ದೇಶದಲ್ಲಿಯೇ ಉನ್ನತ ಶಿಕ್ಷಣಕ್ಕೆ ಕರ್ನಾಟಕ ಪ್ರಥಮವಾಗಿದ್ದು, ದೇಶದ ನಾನಾ ಮೂಲೆಗಳಿಂದ ಹಾಗೂ ವಿದೇಶಗಳಿಂದ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರನ್ನು ಬಯಸಿ ಬರುತ್ತಾರೆ. ಇದೆಲ್ಲವೂ ಕೆಂಪೇಗೌಡರು ನೀಡಿದ ಕೊಡುಗೆಯಿಂದ ಸಾಧ್ಯವಾಯಿತು ಎಂದು ಹೇಳಿದರು.

ಕೃಷ್ಣರಾಜ ಒಡೆಯರ್ ತಮ್ಮಲ್ಲಿದ್ದ ಚಿನ್ನಾ ಭರಣಗಳನ್ನು ಮಾರಿ ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಿ ದ್ದಾರೆ. ಆದರೆ ಅದರ ನೀರನ್ನು ಒಬ್ಬರೇ ಕುಡಿಯುವುದಿಲ್ಲ. ತಮಿಳುನಾಡಿನ ಎಲ್ಲಾ ಜನರು ಕುಡಿಯುತ್ತಾರೆ. ಈ ವಿಚಾರದಲ್ಲಿ ಬಾಗಮಂಡಲ, ಕೊಡಗು ಮತ್ತು ತಲ ಕಾವೇರಿ ಜನರಿಗೆ ರಾಯಲ್ಟಿ ಕೊಡಲೇ ಬೇಕು. ಅವರೇನಾದರೂ ಅಣೆಕಟ್ಟು ಕಟ್ಟಿದ್ದರೆ ನಮಗೆ ಇಷ್ಟು ನೀರು ಎಲ್ಲಿ ದೊರೆಯುತ್ತಿತ್ತು. ಆದ್ದ ರಿಂದ ಕಾವೇರಿ ಜಲಾನಯನ ಪ್ರದೇಶದ ಅಭಿವೃದ್ಧಿ ಹೆಚ್ಚಾಗಬೇಕು. ಹಾಗೆಯೇ ಕಾವೇರಿ ನೀರು ಎಲ್ಲೆಲ್ಲಿ ಕಲುಷಿತವಾಗುತ್ತಿಯೋ ಅಲ್ಲಿ ಅದನ್ನು ಶುದ್ಧಿಕರಿಸಿದರೆ ಮಾತ್ರ ಮೈಸೂರು ಭಾಗದ ಜನರಿಗೆ ಒಳ್ಳೆಯದಾಗಲಿದೆ.

ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದು, ಪ್ರವಾ ಸೋದ್ಯಮ ಸಚಿವರು ಹೆಚ್ಚಿನ ಗಮನ ಹರಿಸಿ ನಗರದ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ವಾಸು ಹೇಳಿದರು.

ನಂತರ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇ ಗೌಡ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಮರಿತ್ತಿಬ್ಬೇಗೌಡ ಅವರನ್ನು ಸನ್ಮಾನಿಸಲಾಯಿತು.

ಹಾಗೆಯೇ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ವೇದಿಕೆಯಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಅರ್ಪಿತ ಪ್ರತಾಪ್ ಸಿಂಹ, ವಿಜಯ ನಗರ ಒಕ್ಕಲಿಗರ ವೇದಿಕೆ ಗೌರವ ಅಧ್ಯಕ್ಷ ಡಾ.ಎಸ್.ಮರೀಗೌಡ, ಅಧ್ಯಕ್ಷ ಕೆ.ಕಾಳಿಂಗು, ಉಪಾಧ್ಯಕ್ಷ ಸಿ.ಡಿ. ಗೋವಿಂದೇಗೌಡ, ಕಾರ್ಯದರ್ಶಿ ನಾಗೇ ಗೌಡ, ಸಹ ಕಾರ್ಯದರ್ಶಿ ಟಿ.ಕೃಷ್ಣ, ಖಜಾಂಚಿ ಲಕ್ಷ್ಮೇಗೌಡ, ಮಂಜು ಸೇರಿ ದಂತೆ ಇನ್ನಿತರು ಉಪಸ್ಥಿತರಿದ್ದರು.

Translate »