ಇಂದು ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಮೈಸೂರು

ಇಂದು ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

October 2, 2020

ಮೈಸೂರು,ಅ.1(ಆರ್‍ಕೆ)-ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ನಾಳೆ (ಅ.2) ಮೈಸೂರಿಗೆ ಆಗಮಿಸುವರು. ಶುಕ್ರ ವಾರ ಬೆಳಿಗ್ಗೆ 8 ಗಂಟೆಗೆ ಗಾಂಧಿಚೌಕದಲ್ಲಿ ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಬೆಳಿಗ್ಗೆ 9.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಸಂಬಂಧ ವಿಭಾ ಗೀಯ ಮಟ್ಟದ ಆರ್ಥಿಕ ಸ್ಪಂದನ ಕಾರ್ಯ ಕ್ರಮದಲ್ಲಿ ಸಚಿವರು ಪಾಲ್ಗೊಳ್ಳುವರು.

ಮಧ್ಯಾಹ್ನ 12 ಗಂಟೆಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆ ಯನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಅವರು, ಮಧ್ಯಾಹ್ನ 2.30 ಗಂಟೆಗೆ ಕೆ.ಆರ್. ಆಸ್ಪತ್ರೆಯಲ್ಲಿ ಆರಂಭಿಸಿ ರುವ ಪ್ಲಾಸ್ಮಾ ಕೇಂದ್ರ ಉದ್ಘಾಟಿಸುವರು.

ಮಧ್ಯಾಹ್ನ 3 ಗಂಟೆಗೆ ಹೂಟಗಳ್ಳಿಯ ಸರಸ್ವತಿ ಕನ್ವೆನ್ಷನ್ ಹಾಲ್‍ನಲ್ಲಿ ಶಿಕ್ಷಕರ ದಿನಾ ಚರಣೆ, ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಇಂಡಿಯನ್ ಟಿವಿ ವತಿಯಿಂದ ಸಂಜೆ 4.30 ಗಂಟೆಗೆ ಆಯೋಜಿಸಿರುವ ಎಸ್.ಪಿ.ಬಾಲಸುಬ್ರ ಹ್ಮಣ್ಯಂ ಅವರಿಗೆ `ಗಾನನಮನ’ ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ನಂತರ ಸಚಿವರು ಸಂಜೆ 5.30 ಗಂಟೆಗೆ ಮೈಸೂರಿನಿಂದ ಮಡಿಕೇರಿಗೆ ತೆರಳುವರು.

Translate »