ಮಾಸ್ಕ್ ಧರಿಸವರಿಗೆ ದಂಡ ವಿಧಿಸಿದ ಪುರಸಭಾಧಿಕಾರಿಗಳು
ಮೈಸೂರು ಗ್ರಾಮಾಂತರ

ಮಾಸ್ಕ್ ಧರಿಸವರಿಗೆ ದಂಡ ವಿಧಿಸಿದ ಪುರಸಭಾಧಿಕಾರಿಗಳು

May 7, 2020

ತಿ. ನರಸೀಪುರ, ಮೇ 6-ಪುರಸಭಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸಿದೇ ಓಡಾಡುತ್ತಿರುವ ಜನರಿಗೆ ಪುರಸಭಾಧಿಕಾರಿಗಳು 100 ರೂಪಾಯಿ ದಂಡ ವಿಧಿಸಿದರು.

ಸೋಮವಾರದಿಂದ ಪಟ್ಟಣದಲ್ಲಿ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಜನ ಸಂಚಾರ ಹೆಚ್ಚಿದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಬಗ್ಗೆ ಹಾಗೂ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದವರನ್ನು ಪುರಸಭೆಯ ಕಂದಾಯಾಧಿಕಾರಿ ಪುಟ್ಟಸ್ವಾಮಿ, ಆರೋಗ್ಯಾಧಿಕಾರಿಗಳಾದ ಚೇತನ್‍ಕುಮಾರ್, ಮಹೇಂದ್ರ ಹಾಗೂ ಸಿಬ್ಬಂದಿ ಅವರು ರಸ್ತೆಯಲ್ಲಿ ನಿಂತು ಪರಿಶೀಲಿಸಿ ನೋಟೀಸ್ ನೀಡಿ ದಂಡ ವಸೂಲು ಮಾಡಿದರು. ಸುಮಾರು 45ಕ್ಕೂ ಹೆಚ್ಚು ಮಂದಿಗೆ ದಂಡ ವಿಧಿಸಲಾಯಿತು.

ಈ ವೇಳೆ ಮಾತನಾಡಿದ ಆರೋಗ್ಯಾಧಿಕಾರಿ ಚೇತನ್, ಪ್ರತಿಯೊಬ್ಬರು ವಾಹನದ ಸಂಚರಿಸುವ ವೇಳೆ ಕಡ್ಡಾಯ ಮಾಸ್ಕ್ ಹಾಕಿರಬೇಕು. ಜತೆಗೆ ಅಂಗಡಿಗಳ ಮುಂದೆ ಸಾಮಾಗ್ರಿ ಖರೀದಿಸುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ಆದೇಶಗಳನ್ನು ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಕಾರ ನೀಡಬೇಕು ಎಂದು ಹೇಳಿದರು. ಪುರಸಭಾ ಅಧಿಕಾರಿಗಳಾದ ಕೃಷ್ಣಪ್ಪ, ರವಿ ಮತ್ತಿತರರಿದ್ದರು.

Translate »