ಐರ್ಲೆಂಡ್‍ನಲ್ಲಿ ಮೈಸೂರು ಮಹಿಳೆ, ಆಕೆಯ ಇಬ್ಬರು ಮಕ್ಕಳ ಭೀಕರ ಹತ್ಯೆ
ಮೈಸೂರು

ಐರ್ಲೆಂಡ್‍ನಲ್ಲಿ ಮೈಸೂರು ಮಹಿಳೆ, ಆಕೆಯ ಇಬ್ಬರು ಮಕ್ಕಳ ಭೀಕರ ಹತ್ಯೆ

November 1, 2020

ಮೈಸೂರು, ಅ.31-ಐರ್ಲೆಂಡ್‍ನಲ್ಲಿ ಮೈಸೂರು ಮಹಿಳೆ, ತನ್ನ ಇಬ್ಬರು ಮಕ್ಕಳೊಂದಿಗೆ ಭೀಕರವಾಗಿ ಹತ್ಯೆಯಾಗಿರುವುದು ವರದಿಯಾಗಿದೆ. ಐರ್ಲೆಂಡ್‍ನ ಉಪ ನಗರಿ ಬಲ್ಲಿಂಟಿರ್‍ನ ಲೈವೆಲ್ಲೆನ್ ಕೋರ್ಟ್‍ನಲ್ಲಿರುವ ತನ್ನ ನಿವಾಸದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಗ್ರಾಮದ ಅಬ್ದುಲ್ ಗಫಾರ್ ಮತ್ತು ಖುರ್ಷಿದ್ ಉನ್ನೀಸಾ ದಂಪತಿ ಪುತ್ರಿ ಸೀಮಾ ಬಾನು ಸಯ್ಯದ್(37), ಈಕೆಯ ಪುತ್ರಿ ಅಸ್ಫಿರಾ ರಿಝಾ(11) ಮತ್ತು ಪುತ್ರ ಫೈಝಾನ್ ಸಯ್ಯದ್(6) ಹತ್ಯೆಗೀಡಾದವರಾಗಿದ್ದು, ಮನೆಯ ಒಂದು ಕೊಠಡಿಯಲ್ಲಿ ಮಕ್ಕಳ ಮೃತದೇಹಗಳು ದೊರೆತರೆ, ಮತ್ತೊಂದು ಕೊಠಡಿಯಲ್ಲಿ ಸೀಮಾ ಬಾನು ಮೃತದೇಹ ಪತ್ತೆಯಾ ಗಿದೆ. ಮಕ್ಕಳ ಕುತ್ತಿಗೆಯ ಭಾಗದಲ್ಲಿ ತೀವ್ರ ತರವಾದ ಗಾಯದ ಗುರುತುಗಳಿವೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.

ಹಂತಕರು ಮನೆಯಲ್ಲಿನ ನಲ್ಲಿಯಿಂದ ನೀರನ್ನು ಬಿಟ್ಟು ಹೋಗಿದ್ದ ಕಾರಣ ಮನೆಯಲ್ಲಿ ನೀರು ತುಂಬಿ ಹೊರಗೆ ಹರಿಯಲಾರಂ ಭಿಸಿದೆ. ಅದನ್ನು ಕಂಡ ಸ್ಥಳೀಯರು ಮನೆಯಲ್ಲಿ ಯಾರೂ ಇಲ್ಲ, ಆದರೆ ನೀರು ಮನೆಯಿಂದ ಹೊರ ಬರುತ್ತಿದೆ ಎಂದು ಪೊಲೀಸ ರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀ ಸರು ಪರಿಶೀಲನೆ ನಡೆಸಿದ ವೇಳೆ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಐರ್ಲೆಂಡ್ ಪೊಲೀಸರು ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕಳೆದ ವಾರಾಂತ್ಯ ದಲ್ಲಿ ಅಂದರೆ 5 ದಿನದ ಹಿಂದೆಯೇ ಈ ಹತ್ಯೆಗಳು ನಡೆದಿರ ಬಹುದು ಎಂದು ಶಂಕಿಸಿದ್ದಾರೆ. ಈ ಮಧ್ಯೆ ಘಟನೆ ನಡೆದಾಗ ಮಹಿಳೆ ಪತಿ ಸಮೀರ್ ಊರಿನಲ್ಲಿರಲಿಲ್ಲವೆಂದು ಹೇಳಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಸೀಮಾ ಬಾನು ಪತಿ ಸಯ್ಯದ್ ಸಮೀರ್ ಅವರಿಗೆ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ಅವರು ದುಬೈನಿಂದ ಐರ್ಲೆಂಡ್‍ಗೆ ಸ್ಥಳಾಂತರಗೊಂಡಿದ್ದರು ಎಂದು ಹೇಳಲಾಗಿದೆ. ಕಳೆದ ಮೇ ತಿಂಗಳಲ್ಲಿ ಸೀಮಾ ಬಾನು ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಐರಿಷ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು `ಐರಿಷ್ ಟೈಮ್ಸ್’ ವರದಿ ಮಾಡಿದೆ. ಈ ಪ್ರಕರಣದ ವಿಚಾರಣೆ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಾಗಿತ್ತು ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಸಿ ಕ್ಯಾಮರಾ ಫುಟೇಜ್‍ಗಳನ್ನಾಧರಿಸಿ ತನಿಖೆ ಆರಂಭಿಸಿ ರುವ ಐರಿಷ್ ಪೊಲೀಸರು, ಸೀಮಾ ಬಾನು ಕುಟುಂಬಕ್ಕೆ ಪರಿ ಚಯಸ್ಥನಾದ 30 ವರ್ಷದ ವ್ಯಕ್ತಿಯೊಬ್ಬನ ಭಾವಚಿತ್ರವನ್ನು ಬಿಡು ಗಡೆಗೊಳಿಸಿ, ಈತನ ಬಗ್ಗೆ ಹಾಗೂ ಕುಟುಂಬದ ಬಗ್ಗೆಯೂ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಮಧ್ಯೆ ಆ ವ್ಯಕ್ತಿ ತಾನಾಗಿಯೇ ಪೊಲೀಸ್ ಠಾಣೆಗೆ ಹಾಜ ರಾಗಿದ್ದು, ಆತನನ್ನು 24 ಗಂಟೆಗಳ ಕಾಲ ನಿಗಾದಲ್ಲಿಡಲಾಗಿದೆ ಎಂದು ವರದಿಗಳು ತಿಳಿಸಿವೆ. ಮೃತದೇಹಗಳನ್ನು ಮೈಸೂರಿಗೆ ತರುವ ವ್ಯವಸ್ಥೆ ಮಾಡಬೇಕೆಂದು ಸೀಮಾ ಬಾನು ಕುಟುಂಬದವರು ಐರ್ಲೆಂಡ್‍ನ ಭಾರತೀಯ ರಾಯಭಾರಿ ಕಚೇರಿ ಮತ್ತು ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೃತದೇಹಗಳನ್ನು ಸಂರಕ್ಷಿಸಿ ಭಾರತಕ್ಕೆ ತರಲು ಸುಮಾರು 15 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಆ ವೆಚ್ಚವನ್ನು ಭರಿಸುವ ಅಸಹಾಯಕತೆ ಯನ್ನು ಕುಟುಂಬ ವ್ಯಕ್ತಪಡಿಸಿದೆ ಎಂದು ಸಹ ಹೇಳಲಾಗಿದೆ.

ಬೆಟ್ಟದಪುರ ವರದಿ: ಬೆಟ್ಟದಪುರ ಪೊಲೀಸ್ ಠಾಣೆ ಮುಂಭಾಗ `ಮೈಸೂರು ಮಿತ್ರ’ ಪ್ರತಿನಿಧಿಯೊಂದಿಗೆ ಮಾತನಾ ಡಿದ ಸೀಮಾ ಬಾನು ಸಹೋದರ ಮಹಮ್ಮದ್ ಫಯಾಜ್, ತಮ್ಮ ಸಹೋದರಿಯನ್ನು 13 ವರ್ಷಗಳ ಹಿಂದೆ ಮೈಸೂರಿನ ಸಯ್ಯದ್ ಸಮೀರ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಅವರು ಕೆಲಸದ ನಿಮಿತ್ತ ಐರ್ಲೆಂಡ್‍ಗೆ ತೆರಳಿ ಅಲ್ಲೇ ವಾಸವಿದ್ದಾರೆ. ಸಹೋದರಿ ಪ್ರತಿ ದಿನ ರಾತ್ರಿ ವೀಡಿಯೋ ಕಾಲ್ ಮಾಡಿ ತಾಯಿಯೊಂದಿಗೆ ಮಾತನಾಡುತ್ತಿದ್ದರು. ಅಕ್ಟೋಬರ್ 25ರಿಂದ ಅವರು ಕಾಲ್ ಮಾಡಿರಲಿಲ್ಲ. ಅ.28ಕ್ಕೆ ಹತ್ಯೆ ನಡೆದಿರುವ ವಿಚಾರ ನಮಗೆ ಗೊತ್ತಾಯಿತು ಎಂದರು.

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಹೇಲ್ ಪಾಷಾ, ಮೃತದೇಹಗಳನ್ನು ಗ್ರಾಮಕ್ಕೆ ತರಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ವಿಚಾರವಾಗಿ ಈವರೆಗೆ ಯಾರೂ ಸ್ಪಂದಿಸಿಲ್ಲ. ಸ್ಥಳೀಯ ಶಾಸಕರು ಮತ್ತು ಸಂಸದರು ಈ ಕುಟುಂಬದ ಸಹಾಯಕ್ಕೆ ನಿಲ್ಲಬೇಕು. ಮೃತ ದೇಹಗಳನ್ನು ಭಾರತಕ್ಕೆ ತಂದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಬೇಕು ಎಂದು ಒತ್ತಾಯಿಸಿದರು.

Translate »