ಮೇಲ್ಮನೆ ಅಗತ್ಯತೆಯ ಸಿಂಹಾವಲೋಕನ ಅಗತ್ಯ
ಮೈಸೂರು

ಮೇಲ್ಮನೆ ಅಗತ್ಯತೆಯ ಸಿಂಹಾವಲೋಕನ ಅಗತ್ಯ

January 6, 2022

ಬೆಂಗಳೂರು, ಜ.5- ವಿಧಾನಪರಿಷತ್ ಅಗತ್ಯತೆ ಹಾಗೂ ವಿಧಾನಪರಿಷತ್ ಸದಸ್ಯರ ಕಾರ್ಯಗಳ ಬಗ್ಗೆ ಸಿಂಹಾವ ಲೋಕನ ಮಾಡುವ ಆಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

ಇಂದು ವಿಕಾಸಸೌಧದಲ್ಲಿ ನಡೆದ ನಿವೃತ್ತ ಮೇಲ್ಮನೆ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಧಾನಪರಿಷತ್ ಡ್ಯೂಯಲ್ ಕ್ಯಾಮೆರಾ ಸಿಸ್ಟಮ್‍ನಂತೆ. ವಿಧಾನ ಪರಿಷತ್‍ಗೆ ದಿವ್ಯ ಪರಂಪರೆ ಇದೆ. ಮಹತ್ವದ ಚರ್ಚೆ ಆಗಿದೆ. ಈ ಬಾರಿ ಸದನದಲ್ಲಿ 7-8 ದಿನಗಳು ವಿಶ್ವವಿದ್ಯಾಲಯದ ಬಿಲ್ ಬಗ್ಗೆ ಚರ್ಚೆ, ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿವೆ ಎಂದರು.

ವಿವಿಧ ಕ್ಷೇತ್ರದ ಪ್ರಮುಖರು ವಿಧಾನ ಪರಿಷತ್‍ಗೆ ಆಯ್ಕೆಯಾಗಿ ಬಂದು ತಮ್ಮ ಅನುಭವಗಳನ್ನು ಇಲ್ಲಿ ಧಾರೆ ಎರೆಯುತ್ತಾರೆ. ಹಲವಾರು ಸಂದರ್ಭದಲ್ಲಿ ವಿಧಾನ ಪರಿಷತ್ ಬೇಕೇ? ಎಂಬುದರ ಬಗ್ಗೆ ಚರ್ಚೆ ಆಗುತ್ತದೆ. ರಾಜಕಾರಣಕ್ಕೆ ನಿವೃತ್ತಿ, ವಿದ್ಯಾ ರ್ಹತೆ ಇಲ್ಲ. ಇಂದು ನಿವೃತ್ತರಾಗಿರುವವರನ್ನು ನಿವೃತ್ತಿ ಎಂದು ಪರಿಗಣಿಸಲಾಗದು. ರಾಜ ಕಾರಣದಲ್ಲಿ ರಿಲವೆಂಟ್ ಆಗಿರುವುದು ಮುಖ್ಯ. ಕ್ರಿಯಾಶೀಲತೆಯಿಂದ ಮಾತ್ರ ರಾಜಕಾರಣ ದಲ್ಲಿ ಬೇರೆಬೇರೆ ಆಯಾಮಗಳಿಂದ ಪುನರಾಯ್ಕೆ ಆಗಲು ಸಾಧ್ಯವಿದೆ. ವಿಧಾನ ಪರಿಷತ್‍ನಲ್ಲಿ ವಿಧಾನಸಭೆಗೆ ಆಯ್ಕೆ ಆಗುವಂತೆ ಜನರ ಹೃದಯದಲ್ಲಿ ಸ್ಥಾನ ಗಳಿಸುವುದೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಸಿಎಂ ಮಾರ್ಮಿಕವಾಗಿ ನುಡಿದರು.

ನಾನೂ ಕೂಡ ವಿಧಾನ ಪರಿಷತ್ ಸದಸ್ಯ ನಾಗಿದ್ದವನು. ನಾವು ಹೋದಾಗ ಹಂಗೆ ಹೋಗಿದ್ದು, ಈ ರೀತಿ ಕಾರ್ಯಕ್ರಮ ಮಾಡಿ ರಲಿಲ್ಲ. ಆಗಿನ ಸಭಾಪತಿಯವರಿಗೆ ಈ ರೀತಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಬೇಕು ಎಂದೆನಿ ಸಿರಲಿಲ್ಲ ಎಂದು ಸೂಚ್ಯವಾಗಿ ಸಿಎಂ ಹೇಳಿದರು.
ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ಸದಸ್ಯರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಬೀಳ್ಕೊ ಟ್ಟರು. ವಿಕಾಸ ಸೌಧದಲ್ಲಿ ನಡೆದ ಸಮಾ ರಂಭದಲ್ಲಿ ವಿಪಕ್ಷ ಮುಖ್ಯ ಸಚೇತಕ ನಾರಾ ಯಣ ಸ್ವಾಮಿ, ಆಡಳಿತ ಪಕ್ಷ ಬಿಜೆಪಿಯ ಮಹಾಂತೇಶ್ ಕವಟಗಿಮಠ ಮತ್ತು ಸುನೀಲ್ ಸುಬ್ರಮಣಿ, ವಿಪಕ್ಷ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್,ಮಾಜಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ, ಸದಸ್ಯರಾದ ವಿಜಯ್ ಸಿಂಗ್, ಶ್ರೀಕಾಂತ್ ಘೋಟ್ನೇಕರ್, ಬಸವರಾಜ ಪಾಟೀಲ್ ಇಟಗಿ,ಕೆ. ಸಿ. ಕೊಂಡಯ್ಯ, ರಘು ಆಚಾರ್.ಆರ್, ಪ್ರಸನ್ನ ಕುಮಾರ್, ಪ್ರತಾಪ ಚಂದ್ರ ಶೆಟ್ಟಿ, ಎಂ.ಎ. ಗೋಪಾಲ ಸ್ವಾಮಿ, ಎಂ ನಾರಾಯಣಸ್ವಾಮಿ, ಆರ್. ಧರ್ಮಸೇನ ಹಾಗೂ ಜೆಡಿಎಸ್‍ನ ಕಾಂತರಾಜ್, ಅಪ್ಪಾಜಿ ಗೌಡ, ಸಂದೇಶ್ ನಾಗರಾಜ್, ಪಕ್ಷೇತರ ವಿವೇಕ್ ರಾವ್ ಪಾಟೀಲರನ್ನು ಬೀಳ್ಕೊಡಲಾಯಿತು.

Translate »