ಬೇಲೂರು: ಇಲ್ಲಿನ ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಯಿಂದ ಬುದ್ಧ ಜಯಂತಿ ಅಂಗವಾಗಿ ಗೌತಮ ಬುದ್ಧನ 12 ಅಡಿ ಎತ್ತರದ ಪ್ರತಿಮೆಯ ಮೆರವಣಿಗೆ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಮದಘಟ್ಟ ಬಳಿಯ ಗುಡ್ಡ ದಲ್ಲಿ 100 ಕೋಟಿ ವೆಚ್ಚದಲ್ಲಿ ಬುದ್ಧನ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲು ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಉದ್ದೇಶಿಸಿದ್ದು ಇದಕ್ಕೆ ಪೂರ್ವಭಾವಿ ಯಾಗಿ ಮತ್ತು ಬೌದ್ಧ ಪೂರ್ಣಿಮೆ ಅಂಗ ವಾಗಿ ಬುದ್ಧನ 12 ಅಡಿ ಎತ್ತರದ ಪ್ರತಿಮೆ ಯನ್ನು ಮೆರವಣಿಗೆ ಮೂಲಕ ಗಾಂಧಾರ ವಿಹಾರ ಕೇಂದ್ರಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬುದ್ಧನ ಪ್ರತಿಮೆ ಮತ್ತು ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆಯು ಬಸವೇಶ್ವರ ವೃತ್ತ, ನೆಹರೂ ವೃತ್ತ ಮತ್ತು ಕೆಂಪೇಗೌಡ ವೃತ್ತದ ಮೂಲಕ 12ಕಿಮೀ ದೂರದ ಮದಘಟ್ಟ ಬಳಿಯ ಗಾಂಧಾರ ವಿಹಾರ ಕೇಂದ್ರ ತಲುಪಿತು. ಬಳಿಕ ಗಾಂಧಾರ ವಿಹಾರ ಕೇಂದ್ರದಲ್ಲಿ ಸಕಲ ವಿಧಿ ವಿಧಾನದ ಮೂಲಕ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ರಾಜು ಅರೇಹಳ್ಳಿ ಗಾಂಧಾರ ಬುದ್ಧ ವಿಹಾರ ಕೇಂದ್ರವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಸುಮಾರು 30ಕ್ಕೂ ಹೆಚ್ಚು ಬೌದ್ಧ ರಾಷ್ಟ್ರಗಳ ನೆರವಿನೊಂದಿಗೆ ಇಲ್ಲಿ ವಿಹಾರ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಗೌತಮ ಬುದ್ಧ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಸಾಕಾರಗೊಳಿಸಲು ವಿಹಾರ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು. ಬಸವೇಶ್ವರ ವೃತ್ತದಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಟ್ರಸ್ಟ್ನ ಸಹ ಕಾರ್ಯದರ್ಶಿ ಶಶಿಧರ್ ಮೌರ್ಯ, ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದÀತ್ತ ಭಂತೇಜಿ, ಪ್ರಮುಖರಾದ ಯಡೇಹಳ್ಳಿ ವಿರೂಪಾಕ್ಷ, ಪರ್ವತಯ್ಯ, ಬಿ.ಎಲ್.ಲಕ್ಷ್ಮಣ್, ತೆಂಡೇಕೆರೆ ರಮೇಶ್, ಬಾಬು ಇದ್ದರು.