ಸಂಸದರು ಹೇಳಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಭೆ ನಿಯಮಾವಳಿ ಪ್ರಕಾರ ನಡೆದಿಲ್ಲ
ಮೈಸೂರು

ಸಂಸದರು ಹೇಳಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಭೆ ನಿಯಮಾವಳಿ ಪ್ರಕಾರ ನಡೆದಿಲ್ಲ

May 12, 2020

ಮೈಸೂರು, ಮೇ11(ಆರ್‍ಕೆಬಿ)- ಸೀವೆಜ್ ಫಾರಂಗೆ ಸಂಬಂಧ ಪಟ್ಟಂತೆ ಹಿಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ನಡೆ ಸಿದ ಸಭೆಗಳಿಗೆ ತಮಗೆ ಪಾಲಿಕೆಯಿಂದ ಅಧಿಕೃತ ಆಹ್ವಾನ ನೀಡಿರಲಿಲ್ಲ. ಅಲ್ಲದೆ, ಸಂಸದರು ಹೇಳಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಭೆ ನಿಯಮ ದಂತೆ ನಡೆದಿಲ್ಲ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿ ರುವ ಅವರು, 2019ರ ಡಿ. 24, 30 ಮತ್ತು 2020ರ ಜ.3ರಂದು ನಡೆಸಲಾಗಿದೆ ಎನ್ನ ಲಾದ ಸಭಾ ಸೂಚಿಗಳನ್ನು ನನಗೆ ನಗರ ಪಾಲಿಕೆಯಿಂದ ಅಧಿಕೃತವಾಗಿ ಕಳುಹಿ ಸಿಲ್ಲ. ಅಲ್ಲದೆ ಸದರಿ ದಿನಗಳಂದು ನಾನು ಸರ್ಕಾರಿ ಸಭೆಗಳ ನಿಮಿತ್ತ ಬೆಂಗಳೂರಿ ನಲ್ಲಿದ್ದೆ. ಆ ಸಭೆಗಳ ಬಗ್ಗೆ ಸಂಬಂಧಪಟ್ಟ ವರಿಗೆ ತಿಳಿಸಿದ್ದರೂ ಅದೇ ದಿನಗಳಂದು ಈ ಯೋಜನೆ ಕುರಿತು ಸಭೆ ನಡೆಸಿರು ವುದು ಸಮಂಜಸವೇ? ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಅಹವಾಲು (Public Hearing) ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಕಾಲಮಿತಿಯೊಳಗೆ ಮತ್ತು ಪಾರದರ್ಶಕ ವಾಗಿ ಸಾರ್ವಜನಿಕರಿಗೆ ವ್ಯಾಪಕವಾಗಿ ಪ್ರಚಾರ ನೀಡುವ ಮೂಲಕ ಅವರ ಭಾಗವಹಿಸು ವಿಕೆಗೆ ಸಂಬಂಧಪಟ್ಟ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಯಿಂದ ವ್ಯವಸ್ಥೆ ಮಾಡಬೇಕು. ಸಾರ್ವ ಜನಿಕ ಅಹವಾಲು ಪ್ರಕ್ರಿಯೆಯಲ್ಲಿ ಜಿಲ್ಲಾಧಿ ಕಾರಿಗಳು, ನಗರಪಾಲಿಕೆಯ ಆಯುಕ್ತರು, ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧ ಪಟ್ಟ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂ ತ್ರಣ ಮಂಡಳಿಯ ಅಧಿಕಾರಿ, ಸ್ಥಳೀಯ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆ ಗಳು ಉಪಸ್ಥಿತರಿರಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಬಂಧಪಟ್ಟ ಅಧಿಕಾರಿಯು ಸಾರ್ವಜನಿಕ ಅಹವಾಲು ಪ್ರಕ್ರಿಯೆಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಇವರು ಸಾರ್ವಜನಿಕ ಅಹವಾಲು ಪ್ರಕ್ರಿಯೆಯ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯ ಪ್ರಕಟಣೆಯನ್ನು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಮಟ್ಟದ ಒಂದು ದಿನಪತ್ರಿಕೆಯಲ್ಲಿ ಕನಿಷ್ಠ 30 ದಿನಗಳ ಸೂಚನಾ ಅವಧಿಯ ಮಾಹಿತಿಯನ್ನು ಸಾರ್ವಜನಿಕರಿಗಾಗಿ ನೀಡಬೇಕು.

ಸಾರ್ವಜನಿಕ ಅಹವಾಲು ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾಧಿಕಾರಿ ಗಳ ಪ್ರತಿನಿಧಿಯವರ (ಟಿoಣ beಟoತಿ ಣhe ಡಿಚಿಟಿಞ oಜಿ ಂಜಜiಣioಟಿಚಿಟ ಆಅ) ಮೇಲ್ವಿ ಚಾರಣೆ ಮತ್ತು ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಯನ್ನೊಳಗೊಂಡಂತೆ ನಡೆಯಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಯು ಸಾರ್ವಜನಿಕ ಅಹವಾಲು ಪ್ರಕ್ರಿಯೆಯನ್ನು ಸಂಪೂರ್ಣ ವಾಗಿ ವೀಡಿಯೋ ಚಿತ್ರೀಕರಣದೊಂದಿಗೆ ನಡವಳಿಯನ್ನು ದಾಖಲಿಸಿಕೊಳ್ಳತಕ್ಕದು. ನಂತರ ಸದರಿ ವೀಡಿಯೋ ಚಿತ್ರೀಕರಣದ ನಡವಳಿಯನ್ನು ಮುಂದಿನ ನಿಯಂತ್ರಕ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದು. ಸದರಿ ಸಾರ್ವಜನಿಕ ಅಹವಾಲು ಪ್ರಕ್ರಿಯೆಯಲ್ಲಿ ಭಾಗವಹಿ ಸಿದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಎಲ್ಲರ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಿ ಅಂತಿಮ ನಡವಳಿಯೊಂದಿಗೆ ಅನುಬಂಧದ ರೂಪದಲ್ಲಿ ಲಗತ್ತಿಸಿ ಸಲ್ಲಿಸಬೇಕಾಗಿರುತ್ತದೆ. ಈ ರೀತಿಯ ಕ್ರಮಬದ್ಧ ಪ್ರಕ್ರಿಯೆ ನಡೆದಿಲ್ಲ ಎಂದು ಪಾಲಿಕೆ ಅಧಿಕಾರಿಗಳೇ ತಿಳಿಸಿ ರುತ್ತಾರೆ. ಸಂಸದರು ಹೇಳಿರುವಂತೆ ಸಂಗ್ರಹಿಸಲಾಗಿರುವ ಸಾರ್ವಜನಿಕ ಅಭಿಪ್ರಾಯಕ್ಕೆ ನಿಯಮಗಳಡಿ ಮನ್ನಣೆ ಇದೆಯೇ? ಎಂದು ರಾಮದಾಸ್ ಪ್ರಶ್ನಿಸಿದ್ದಾರೆ.

Translate »