ಲಾಕ್‍ಡೌನ್ ಅವಧಿ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ
ಮೈಸೂರು

ಲಾಕ್‍ಡೌನ್ ಅವಧಿ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ

August 19, 2020

ಮೈಸೂರು, ಆ.18(ಪಿಎಂ)- ಲಾಕ್‍ಡೌನ್ ಅವಧಿಯ ಗೌರವಧನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇ ರಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಹಾಗೂ ಅತಿಥಿ ಉಪ ನ್ಯಾಸಕರ ರಕ್ಷಣಾ ವೇದಿಕೆ ಜಂಟಿ ಆಶ್ರಯದಲ್ಲಿ ಅತಿಥಿ ಉಪನ್ಯಾಸ ಕರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಸರ್ಕಾರ ಉದ್ಯಮ ಸೇರಿ ದಂತೆ ನಾನಾ ವಲಯಗಳಿಗೆ ಪ್ಯಾಕೇಜ್ ಘೋಷಿಸಿದೆ. ಆದರೆ ನಮಗೆ ನ್ಯಾಯಯುತವಾಗಿ ಕೊಡಬೇಕಿರುವ ಗೌರವಧನವನ್ನೇ ನೀಡುತ್ತಿಲ್ಲ. ಪರಿಣಾಮ ನಮ್ಮ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ 14,564 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿ ದ್ದೇವೆ. ಕೇವಲ 11 ಸಾವಿರದಿಂದ 13 ಸಾವಿರ ರೂ.ವರೆಗೆ ಮಾಸಿಕ ಗೌರವಧನ ನೀಡಿ ಸರ್ಕಾರ ನಮ್ಮನ್ನು ಭಿಕ್ಷುಕ ರಂತೆ ಕಾಣುತ್ತಿದೆ. ಈಗ ಲಾಕ್‍ಡೌನ್ ಅವಧಿಯಲ್ಲಿ ವೇತನವೂ ಇಲ್ಲದೆ, ನೌಕರಿಯೂ ಇಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿ ದ್ದೇವೆ ಎಂದು ಅಳಲು ತೋಡಿಕೊಂಡರು. ನಮ್ಮ ಕಷ್ಟ ವನ್ನು ಸರ್ಕಾರದ ಗಮನಕ್ಕೆ ತರಲೆಂದೇ ಜಿಲ್ಲಾ ಕೇಂದ್ರ ಗಳಲ್ಲಿ ಪ್ರತಿ ಮಂಗಳವಾರ ಪ್ರತಿಭಟಿಸುತ್ತಿದ್ದೇವೆ. ಮೈಸೂ ರಿನಲ್ಲಿದು 7ನೇ ಪ್ರತಿಭಟನೆ ಎಂದರು.

ಸಹಾಯಕ ಪ್ರಾಧ್ಯಾಪಕರ ನೇಮಕ ಅಧಿಸೂಚನೆ ರದ್ದು ಗೊಳಿಸಿ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ವಿಲೀನ ಗೊಳಿಸಬೇಕು. ಗುತ್ತಿಗೆ ಆಧಾರ ಸೇವೆ ಸಲ್ಲಿಸುತ್ತಿದ್ದ ವೈದ್ಯ ಕೀಯ ಸಿಬ್ಬಂದಿಯನ್ನು ಖಾಯಂಗೊಳಿಸಿದಂತೆ ಅತಿಥಿ ಉಪನ್ಯಾಸಕರನ್ನೂ ಖಾಯಂಗೊಳಿಸಬೇಕು. ಪಿಎಫ್, ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಕೆಲ ಅತಿಥಿ ಉಪ ನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೆಲವರು ಅನಾ ರೋಗ್ಯದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾ ಯಿಸಿದರು. ಸಂಘಟನೆ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎನ್.ಮಹೇಶ್, ನಾಗಾರ್ಜುನ್, ಪ್ರಧಾನ ಕಾರ್ಯದರ್ಶಿ ಹನುಮಂತೇಶ್, ಸಹ ಕಾರ್ಯದರ್ಶಿಗಳಾದ ಜಿ. ಮಹೇಶ್, ಸಿ.ಕೆ.ಕಿರಣ್ ಕೌಶಿಕ್, ಸಂಘಟನಾ ಕಾರ್ಯ ದರ್ಶಿ ಬಾಬುರಾಜ್, ಖಜಾಂಚಿ ನಿಂಗರಾಜು ಮತ್ತಿತ ರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »