ಬದುಕಿರುವವರು ಮತದಾರರ  ಪಟ್ಟಿಯಲ್ಲಿ ‘ಮರಣ’ ಹೊಂದಿದ್ದಾರೆ!?
ಮೈಸೂರು

ಬದುಕಿರುವವರು ಮತದಾರರ ಪಟ್ಟಿಯಲ್ಲಿ ‘ಮರಣ’ ಹೊಂದಿದ್ದಾರೆ!?

September 28, 2021

ಮೈಸೂರು,ಸೆ.27(ಆರ್‍ಕೆ)- ಬದುಕಿರುವ ಮತ ದಾರರನ್ನು ‘ಮರಣ’ ಎಂದು ಜ್ಞಾಪನ ಪತ್ರದಲ್ಲಿ ಮೈಸೂರು ಮಹಾ ನಗರ ಪಾಲಿಕೆಯು ನಮೂದಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಸಾವನ್ನಪ್ಪಿರುವವರ ಹೆಸರು ಮತದಾರರ ಪಟ್ಟಿಯಲ್ಲಿ ಮುಂದು ವರಿಯುತ್ತಿರುವುದು ಸರ್ವೇಸಾಮಾನ್ಯ. ಆದರೆ ಜೀವಂತ ವಾಗಿರುವವರನ್ನೇ ಮರಣ ಹೊಂದಿದ್ದಾರೆ (ಇxಠಿiಡಿeಜ) ಎಂದು ನಮೂದಿಸುತ್ತಿರುವುದಿಲ್ಲಿ ವಿಶೇಷ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿ ಯಲ್ಲಿದ್ದು, ಅದರಂತೆ ಗೋಪಾಲಸ್ವಾಮಿ ಪ್ರಾಥಮಿಕ ಶಾಲಾ ಶಿಕ್ಷಕರು ಕಳೆದ ಶನಿವಾರ ಮೈಸೂರಿನ ಹೊಸಬಂಡಿಕೇರಿಯ ಓಲ್ಡ್‍ವುಡ್ ರಸ್ತೆ, 2ನೇ ಕ್ರಾಸ್‍ನ 2441ನೇ ಮನೆ ವಿಳಾಸಕ್ಕೆ ಭೇಟಿ ನೀಡಿ ಕೃಷ್ಣಮೂರ್ತಿ ಭಟ್ ಅವರನ್ನು ಸಂಪರ್ಕಿಸಿದರು.
ತಾವು ಮತದಾರರ ಪಟ್ಟಿ ಪರಿಷ್ಕರಣೆಗೆಂದು ಬಂದಿದ್ದೇವೆ. ಮೈಸೂರು ಮಹಾನಗರ ಪಾಲಿಕೆ ನೀಡಿರುವ ಮೆಮರಾಂಡಂನಲ್ಲಿ ಕೃಷ್ಣಮೂರ್ತಿ ಭಟ್ ಎಂಬುವರು ಮರಣ ಹೊಂದಿದ್ದಾರೆಂದು ನಮೂ ದಾಗಿದೆ. ಪಟ್ಟಿಯನ್ನು ಪರಿಷ್ಕರಿಸಬೇಕೆಂದು ಆ ಇಬ್ಬರು ಮಹಿಳಾ ಶಿಕ್ಷಕರು ಹೇಳಿದಾಗ ನನಗೆ ಅಚ್ಚರಿಯಾಯಿತು ಎಂದು ಕೃಷ್ಣಮೂರ್ತಿ ಭಟ್ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನಾನೇ ನಿಮ್ಮೆದುರು ನಿಂತಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲೂ ಮತ ಚಲಾಯಿಸಿದ್ದೇನೆ.
ನಾನು ಮರಣ ಹೊಂದಿದ್ದೇನೆ ಎಂದು ಹೇಳಿ ದವರ್ಯಾರು, ಮರಣ ಪ್ರಮಾಣಪತ್ರ ಹೇಗೆ ಬಂದಿತು ಎಂದು ಪ್ರಶ್ನಿಸಿದಾಗ, ಅದೆಲ್ಲಾ ಗೊತ್ತಿಲ್ಲ, ನಮಗೆ ನೀಡಿರುವ ಪಟ್ಟಿಯಲ್ಲಿ ಮರಣ ಎಂಬ ಜ್ಞಾಪನ ಪತ್ರದ ಪಟ್ಟಿ ಇರುವುದರಿಂದ ಪರಿಶೀಲನೆಗೆ ಬಂದಿದ್ದೇವೆ ಎಂದು ಶಿಕ್ಷಕಿಯರು ತಿಳಿಸಿದರು ಎಂದು ಕೃಷ್ಣಮೂರ್ತಿ ಭಟ್ ತಿಳಿಸಿದರು.

ನಾನಲ್ಲದೇ ಬೇರೆ ಯಾರಿಗಾದರೂ ಹೀಗೆ ಹೇಳಿದ್ದರೆ, ಬೈದು ಕಳುಹಿಸುತ್ತಿದ್ದರು. ನಾನು ಸಾವ ಧಾನದಿಂದ ಹೇಳಿ ಕಳುಹಿಸಿದ್ದೇನೆ. ಇನ್ನೂ ಬದು ಕಿರುವವರನ್ನೂ ಸತ್ತಿದ್ದಾರೆ ಎಂದು ಬರೆದಿರ ಬಹುದು ಎಂದು ಅವರು ತಿಳಿಸಿದರು.

ಈ ಹಿಂದೆ ಕೆಲವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಕೆಲವರು ಮೃತಪಟ್ಟು ಹಲವು ವರ್ಷ ಕಳೆದಿದ್ದರೂ ಪಟ್ಟಿಯಲ್ಲಿ ಹೆಸರು ಮುಂದುವರಿದಿರುವ ಹಲವು ಪ್ರಸಂಗಗಳಿದ್ದು, ಅಂತಹ ತಪ್ಪುಗಳನ್ನು ಸರಿಪಡಿಸಲೆಂದೇ ಮತ ದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಸುತ್ತಿದ್ದರು, ಸಾರ್ವಜನಿಕರು ಆಸಕ್ತಿ ವಹಿಸಿ ನಿಗದಿತ ನಮೂನೆ ಯಲ್ಲಿ ಮಾಹಿತಿ ಭರ್ತಿ ಮಾಡಿ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕೆಂದು ನಗರ ಪಾಲಿಕೆ ಚುನಾವಣಾ ಶಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Translate »