ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯ  ದಿ. ಜನರಲ್ ತಿಮ್ಮಯ್ಯ
ಮೈಸೂರು

ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯ ದಿ. ಜನರಲ್ ತಿಮ್ಮಯ್ಯ

March 31, 2021

ಮೈಸೂರು, ಮಾ. 30- ಸುಜೀವ್ ಫೌಂಡೇಶನ್ ವತಿಯಿಂದ ದಿ.ಜನರಲ್ ತಿಮ್ಮಯ್ಯ ಅವರ ಜನ್ಮ ದಿನದ ನೆನಪಿನಾರ್ಥವಾಗಿ ಮೈಸೂರು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಟಿವಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸುಜೀವ್ ಸಂಸ್ಥೆಯ ಅಧ್ಯಕ್ಷ ಹಾಗೂ ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ, ಮೈಸೂರು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರಾಜೇಶ್ವರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ದಿ. ಜನರಲ್ ತಿಮ್ಮಯ್ಯನವರು ಮಹಾನ್ ದೇಶಭಕ್ತ, ಅಪ್ರತಿಮ ಹೋರಾಟಗಾರ. ಭಾರತ ಭೂಸೇನೆಯ ದಂಡನಾಯಕರಾಗಿ ಸದಾ ಭಾರತೀಯರ ಮನೆ-ಮನಗಳಲ್ಲಿ ಪ್ರಾತಃಸ್ಮರಣೀಯರಾಗಿದ್ದಾರೆ.ಕೊರಿಯಾ ದೇಶ ಯುದ್ಧದ ನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳದ ನಾಯಕತ್ವ ವಹಿಸಿ, ಯುದ್ಧ ಖೈದಿಗಳಿಗೆ ಸ್ವದೇಶದಲ್ಲಿ ಪುನರ್ವಸತಿ ಕಲ್ಪಿಸುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಂತಹವರು. ತಂದೆ ಆಗರ್ಭ ಶ್ರೀಮಂತರಾದರೂ ದೇಶಸೇವೆಯೇ ಶ್ರೇಷ್ಠವಾದದ್ದು ಎಂದು ನಂಬಿದಂತಹ ತಿಮ್ಮಯ್ಯನವರು ತಮ್ಮ ಸೇವಾವಧಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಮಾಡಲಿಚ್ಛಿಸುವ ನವತರುಣರಿಗೆ ಸ್ಫೂರ್ತಿಯಾಗಿದ್ದರು. ನಿವೃತ್ತಿಯ ನಂತರವೂ ಸೇವಾ ಉತ್ಸಾಹವನ್ನು ಹೊಂದಿದ್ದು, ಸಂಯುಕ್ತ ರಾಷ್ಟ್ರಗಳ ಶಾಂತಿ ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೇವೆ ಮಾಡಿ ದೇಶಕ್ಕೆ ಕೀರ್ತಿ ತಂದರು ಎಂದರು.

Translate »