ಜಿಪಂ ಕಚೇರಿ ಮುಂದೆ ಪಶುವೈದ್ಯ   ಇಲಾಖೆ ‘ಡಿ’ ದರ್ಜೆ ನೌಕರರ ಧರಣಿ
ಹಾಸನ

ಜಿಪಂ ಕಚೇರಿ ಮುಂದೆ ಪಶುವೈದ್ಯ ಇಲಾಖೆ ‘ಡಿ’ ದರ್ಜೆ ನೌಕರರ ಧರಣಿ

January 3, 2019

ಹಾಸನ: ಜಿಲ್ಲೆಯ ಪಶುವೈದ್ಯ ಇಲಾಖೆ ಯಲ್ಲಿ ಹೊರಗುತ್ತಿಗೆ ‘ಡಿ’ ದರ್ಜೆ ನೌಕರರನ್ನು ಅವಧಿಗೆ ಮುಂಚೆ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ಕೆಲಸದಿಂದ ತೆಗೆದು ಹಾಕಿರು ವುದನ್ನು ವಿರೋಧಿಸಿ ಹಾಗೂ ಕೆಲಸದಿಂದ ತೆಗೆದು ಹಾಕಿರುವ ನೌಕರರಿಗೆ ಕೂಡಲೇ ಕೆಲಸ ನೀಡುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮುಂದೆ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹವನ್ನು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಭರವಸೆಯೊಂದಿಗೆ ತಾತ್ಕಾಲಿಕವಾಗಿ ಹೋರಾಟವನ್ನು ಹಿಂಪಡೆದಿದ್ದಾರೆ.
ಹಾಸನದ ಪಶುವೈದ್ಯ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ‘ಡಿ’ ದರ್ಜೆ ನೌಕರರಾಗಿ ನೇಮಕಗೊಂಡು ಕೆಲಸ ಮಾಡುತ್ತಿದ್ದವರನ್ನು ಏಕಾಏಕಿಯಾಗಿ ಟೆಂಡರ್ ಅವಧಿ ಮುಗಿಯುವ ಮುಂಚೆಯೇ ಕೆಲಸದಿಂದ ತೆಗೆಯಲಾಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಕೆಲವರನ್ನು ಮಾತ್ರ ಕೆಲಸ ದಲ್ಲಿ ಉಳಿಸಿಕೊಂಡು ಉಳಿದವರಿಗೆ ಯಾವುದೇ ಕಾರಣ ನೀಡದೆ ಕೆಲಸದಿಂದ ತೆಗೆಯಲಾಗಿದೆ. ಇದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ. ರಾಜಕೀಯ ಕಾರಣಗಳಿಗೆ ಬಡ ದಲಿತ ನೌಕರರನ್ನು ‘ಬಲಿಪಶು’ ಮಾಡಲಾಗಿದೆ. ಇದನ್ನು ವಿರೋಧಿಸಿ ಹಾಗೂ ಕೆಲಸದಿಂದ ಅಕ್ರಮವಾಗಿ ತೆಗೆದು ಹಾಕಿರು ವವರನ್ನು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರದ ಆದೇಶದಂತೆ ಮೆ.ಮಾತಾ ಟೆಕ್ನಾಲ ಜೀಸ್, ಧಾರವಾಡ ಇವರ ಮುಖಾಂತರ ಹಾಸನ ಜಿಲ್ಲೆಯ ಪಶುವೈದ್ಯ ಇಲಾಖೆಯಲ್ಲಿ ‘ಡಿ’ ದರ್ಜೆ ನೌಕರರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಟೆಂಡರ್ ಅವಧಿ ಮುಗಿಯುವ ಮುಂಚೆಯೇ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ಅನಧಿಕೃತವಾಗಿ ಈ ನೌಕರರನ್ನು ಕೆಲಸದಿಂದ ತೆಗೆ ಯಲಾಗಿದೆ. ಇವರನ್ನು ಕೆಲಸದಿಂದ ವಜಾಗೊಳಿ ಸುವ ಮುನ್ನ ಯಾವುದೇ ಕಾರಣಗಳನ್ನು ನೀಡಿ ರುವುದಿಲ್ಲ ಹಾಗೂ ಅವರಿಗೆ ಯಾವುದೇ ನೋಟೀಸ್ ನೀಡಿರುವುದಿಲ್ಲ. ಏಕಾಏಕಿ ಈ ನೌಕರರನ್ನು ಕೆಲಸ ದಿಂದ ತೆಗೆದು ಹಾಕಿರುವುದು ಅತ್ಯಂತ ಅನ್ಯಾಯದ ಹಾಗೂ ದೌರ್ಜನ್ಯದ ಕ್ರಮವಾಗಿದೆ ಹಾಗೂ ಈ ನೌಕರರಿಗೆ ನೈಸರ್ಗಿಕ ನ್ಯಾಯದ ನಿರಾಕರಣೆ ಯಾಗಿದೆ ಎಂದು ದೂರಿದರು.

ಈ ನೌಕರರಿಗೆ ಇದುವರೆಗೆ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ನಿಗದಿಪಡಿಸಿದಂತೆ ಕನಿಷ್ಟ ವೇತನ ಪಾವತಿಸಿಲ್ಲ. ಕಳೆದ ಮೂರು ವರ್ಷಗಳಿಂದ ಕಾರ್ಮಿಕರ ಪ್ರತೀ ತಿಂಗಳ ವೇತನದಲ್ಲಿ ಇಪಿಎಫ್ (ಭವಿಷ್ಯನಿಧಿ) ಮತ್ತು ಇಎಸ್‍ಐ ವಂತಿಗೆ ಹಣವನ್ನು ಕಡಿತಗೊಳಿಸಲಾಗಿದೆ. ಆದರೆ ಈ ನೌಕರರಿಗೆ ಭವಿಷ್ಯ ನಿಧಿ ದಾಖಲೆಗಳು ಮತ್ತು ಇಎಸ್‍ಐ ಗುರುತಿನ ಚೀಟಿಗಳನ್ನು ಇದುವರೆಗೂ ನೀಡಿರುವುದಿಲ್ಲ. ಅಲ್ಲದೆ ಪ್ರತೀ ನೌಕರರಿಂದ ಒಂದು ತಿಂಗಳ ವೇತನವನ್ನು ಅನಧಿಕೃತವಾಗಿ ಕಡಿತಗೊಳಿಸಲಾಗಿದೆ ಎಂದರು. ರಾಜಕೀಯ ಕಾರಣಕ್ಕಾಗಿ ಅನ್ಯಾಯಕ್ಕೊಳಗಾಗಿರುವ ಈ ಬಡ ಮತ್ತು ದಲಿತ ನೌಕರರಿಗೆ ಕೂಡಲೇ ಕೊಡಿಸಬೇಕು ಹಾಗೂ ಕಾರ್ಮಿಕ ಕಾನೂನು ಗಳನ್ನು ಉಲ್ಲಂಘಿಸಿರುವ ಮೆ|| ಮಾತಾ ಟೆಕ್ನಾಲಜೀಸ್, ಧಾರವಾಡ ಇವರ ಮೇಲೆ ಕಾನೂನು ಕ್ರಮ ಜರು ಗಿಸಿ, ಅನ್ಯಾಯಕ್ಕೊಳಗಾಗಿರುವ ನೌಕರರಿಗೆ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ ಮತ್ತು ಜಿಪಂ ಉಪಕಾರ್ಯದರ್ಶಿ ನಾಗರಾಜು ಅವರಿಗೆ ಮನವಿ ನೀಡಿ, ಅವರಿಗೆ ವಜಾಗೊಂಡ ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಮನ ವರಿಕೆ ಮಾಡಲಾಯಿತು. ಮನವಿ ಸ್ವೀಕರಿಸಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ‘ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ವಿನಾಕಾರಣ ನೌಕರರನ್ನು ವಜಾ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸಂಪೂರ್ಣ ವಿವರಗಳನ್ನು ದಾಖಲಾತಿ ಗಳೊಂದಿಗೆ ಪಶುಪಾಲನಾ ಮತ್ತು ಪಶುವೈದ್ಯ ಕೀಯ ಸೇವಾ ಇಲಾಖೆಯ ಆಯುಕ್ತರಿಗೆ ವಜಾ ಗೊಂಡ ನೌಕರರ ಪರವಾಗಿ ವರದಿ ಮಾಡಿ ಗುತ್ತಿಗೆ ದಾರರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಹಾಗೂ ವಜಾಗೊಂಡ ನೌಕರರನ್ನು ಮತ್ತೆ ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ದರು. ಕಾನೂನಾತ್ಮಕ ಪ್ರಕ್ರಿಯೆಗೆ ಕೆಲವು ದಿನಗಳ ಕಾಲಾವಕಾಶ ಕೇಳಿ ಧರಣಿ ನಿರತ ನೌಕರರ ಮನ ವೊಲಿಸಲು ಪ್ರಯತ್ನಿಸಿದರು.

ಅಧಿಕಾರಿಗಳ ಭರವಸೆಯಂತೆ ನೌಕರರನ್ನು ಒಂದು ವಾರದೊ ಳಗೆ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಜಿಲ್ಲಾ ಪಂಚಾ ಯತ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ತಿಳಿಸಿ ಧರಣಿ ಸತ್ಯಾಗ್ರಹ ವನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಇದೇ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಪಶುವೈದ್ಯ ಸಂಸ್ಥೆಗಳ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರ ಹೋರಾಟ ಸಮಿತಿಯ ಮುಖಂಡರು ಹೊಳೆನರಸೀಪುರ ತಾಲೂಕು ಹೆಚ್.ಡಿ.ಯೋಗೇಶ್, ಅರಸೀಕೆರೆ ತಾಲೂಕು ಯು.ಸಿ.ಅನಿಲ್ ಕುಮಾರ್, ಚನ್ನರಾಯಪಟ್ಟಣ ತಾಲೂಕು ಎನ್.ಎಲ್. ವಿಶ್ವನಾಥ್, ಹಾಸನ ತಾಲೂಕು ಸಿ.ಕಾಂತರಾಜು, ಅರಕಲಗೂಡು ತಾಲೂಕು ವಿ.ಎ.ಸೋಮಶೇಖರ್, ಬೇಲೂರು ತಾಲೂಕು ಅನಂತಕುಮಾರ್, ಅರವಿಂದ್ ಇತರರು ಪಾಲ್ಗೊಂಡಿದ್ದರು.

Translate »