ಮೈಸೂರು, ಜು.11(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿಗೆ ಒಟ್ಟು 37,692 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದ್ದು, ಆದರೆ ಅದಕ್ಕಿಂತಲೂ ತುಸು ಹೆಚ್ಚೇ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 39,673 ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನಿದೆ.
ಮೈಸೂರು ಜಿಪಂ ಸಭಾಂಗಣದಲ್ಲಿ ಮುಂಗಾರು ಹಂಗಾ ಮಿಗೆ ಜಿಲ್ಲಾಡಳಿತ ಮಾಡಿಕೊಂಡಿರುವ ಸಿದ್ಧತೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯ ಕ್ಷತೆಯಲ್ಲಿ ಶನಿವಾರ ಪರಿಶೀಲನಾ ಸಭೆ ನಡೆಯಿತು. ವಿವಿಧ ಬೆಳೆಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ ಎಂದು ಜಂಟಿ ಕೃಷಿ
ನಿರ್ದೇಶಕ ಎಂ.ಮಹಂತೇಶಪ್ಪ ಸ್ಪಷ್ಟಪಡಿಸಿದರು. ಈ ಬಗ್ಗೆ ವಿವರ ನೀಡಿದ ಜಂಟಿ ಕೃಷಿ ನಿರ್ದೇಶಕರು, 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 91,831 ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗುತ್ತದೆ. ಹಲವು ರೈತರು ತಾವೇ ಸಿದ್ಧಪಡಿಸಿಕೊಂಡಿರುವ ಬಿತ್ತನೆ ಬೀಜಗಳನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ ಪ್ರಸ್ತುತ ಜಿಲ್ಲೆಯ ಕೃಷಿ ಕ್ಷೇತ್ರದ ಬಿತ್ತನೆ ಬೀಜದ ಬೇಡಿಕೆಯನ್ನು 37,692 ಕ್ವಿಂಟಾಲ್ ಎಂದು ಅಂದಾಜು ಮಾಡಲಾಗಿದೆ. ಆದರೆ ಸದ್ಯ 39,673 ಕ್ವಿಂಟಲ್‍ಗಳಷ್ಟು, ಅಂದರೆ ತುಸು ಹೆಚ್ಚೇ ದಾಸ್ತಾನು ಇದೆ. ಈವರೆಗೆ 29,248 ರೈತರಿಗೆ 2,955 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ವಿವರಿಸಿದರು.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಭತ್ತ, ಜೋಳ, ರಾಗಿ, ಮುಸುಕಿನ ಜೋಳ, ನವಣೆ, ತೊಗರಿ, ಅಲಸಂದೆ, ಉದ್ದು, ಹೆಸರು, ಅವರೆ, ನೆಲಗಡಲೆ ಮುಂತಾದ ಕೃಷಿಗೆ ಅಗತ್ಯದಷ್ಟು ಬಿತ್ತನೆ ಬೀಜ ರೈತರಿಗೆ ನೀಡಲಾಗಿದೆ. ಅಲ್ಲದೆ, ಈ ವರ್ಷ ಬಿತ್ತನೆ ಬೀಜ ದಲ್ಲಿ 464 ಮಾದರಿ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸುವ ಗುರಿಯಿತ್ತು. ಅದರಲ್ಲಿ ಜುಲೈ ವೇಳೆಗೆ 108 ಮಾದರಿ ಕಳುಹಿಸಬೇಕಿತ್ತು. ಆದರೆ, 224ರಷ್ಟು ಹೆಚ್ಚಿನ ಮಾದರಿ ಯನ್ನೇ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು. ಈ ಮುಂಗಾರು ಹಂಗಾಮಿಗೆ 1,01,946 ಟನ್ ರಸಗೊಬ್ಬರ ಬೇಡಿಕೆ ಇದೆ. ಸದ್ಯ 98,920 ಟನ್ ದಾಸ್ತಾನಿದ್ದು, ಅದರಲ್ಲಿ ರೈತರಿಗೆ 48,079 ಟನ್ ವಿತರಿಸಲಾಗಿದೆ. ರಸಗೊಬ್ಬರ ಮಾರ್ಕೆಟಿಂಗ್ ಫೆಡರೇಷನ್ ಹಾಗೂ ಖಾಸಗಿ ಮಾರಾಟಗಾರರ ಬಳಿ 50,841 ಟನ್ ದಾಸ್ತಾನಿದೆ. ಈ ಬಾರಿ ರಸಗೊಬ್ಬರ ಕೊರತೆಯಾಗದು ಎಂದು ಮಾಹಿತಿ ನೀಡಿದರು.
ಯಂತ್ರ ಧಾರೆ: ಕೃಷಿ ಯಂತ್ರೋಪಕರಣ ಬಾಡಿಗೆ ಸೇವಾ ಕೇಂದ್ರ (ಯಂತ್ರ ಧಾರೆ) ಒಂದು ಪ್ರಮುಖ ಯೋಜನೆ. ಜಿಲ್ಲೆಯ 33 ಹೋಬಳಿಗಳಲ್ಲೂ ಈ ಸೇವಾ ಕೇಂದ್ರಗಳಿದ್ದು, ಸಣ್ಣ, ಅತಿಸಣ್ಣ ರೈತರಿಗೆ ಕಡಿಮೆ ಬಾಡಿಗೆಗೆ ಕೃಷಿ ಯಂತ್ರೋಪಕರಣ ಒದಗಿಸಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮಹಂತೇಶಪ್ಪ ವಿವರಿಸಿದರು.
ಜೋಳ ಬೆಳೆಗಾರರಿಗೆ ಪರಿಹಾರ: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಮುಸುಕಿನ ಜೋಳ ಬೆಳೆದ ರೈತರಿಗೆ ಮುಖ್ಯಮಂತ್ರಿಗಳು ತಲಾ 5 ಸಾವಿರ ರೂ. ಪರಿಹಾರ ಧನ ಘೋಷಿಸಿದ್ದರು. ಬೆಳೆ ಸಮೀಕ್ಷೆ ನಡೆಸಿ ಈವರೆಗೆ ಜಿಲ್ಲೆಯಲ್ಲಿ 12,688 ಫಲಾನುಭವಿ ಗಳನ್ನು ಆಯ್ಕೆ ಮಾಡಿ, ಈವರೆಗೆ 11,051 ಮಂದಿಗೆ ಪರಿಹಾರ ಧನ ಪಾವತಿಸಲಾಗಿದೆ.