ಮೈಸೂರಲ್ಲಿ `ವಿಶ್ವ ಪೇಪರ್ ಬ್ಯಾಗ್ ದಿನ’ ಆಚರಣೆ
ಮೈಸೂರು

ಮೈಸೂರಲ್ಲಿ `ವಿಶ್ವ ಪೇಪರ್ ಬ್ಯಾಗ್ ದಿನ’ ಆಚರಣೆ

July 13, 2020

ಮೈಸೂರು, ಜು.12(ಆರ್‍ಕೆಬಿ)- ಭಾನುವಾರ ಜು.12 `ವಿಶ್ವ ಪೇಪರ್ ಬ್ಯಾಗ್ ದಿನ’. ಹಾನಿಕಾರಕ ಪ್ಲಾಸ್ಟಿಕ್ ಮತ್ತು ಪಾಲಿ ಥೀನ್ ಬ್ಯಾಗ್‍ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಬಳಕೆ ಉತ್ತೇಜಿ ಸುವ, ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು ಪೇಪರ್ ಬ್ಯಾಗ್‍ಗಳನ್ನೇ ಬಳಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ `ಪೇಪರ್ ಬ್ಯಾಗ್ ಡೇ’ ಆಚರಿಸಲಾಗುತ್ತ್ತಿದೆ.

ಅಮೆರಿಕದ ಫ್ರಾನ್ಸಿಸ್ ವೊಲ್ಲೆ 1852ರಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಮೊದಲ ಯಂತ್ರ ಸಿದ್ಧಪಡಿಸಿ ಪೇಟೆಂಟ್ (ಹಕ್ಕು ಸ್ವಾಮ್ಯ) ಪಡೆದುಕೊಂಡರು. ದಿನಸಿ ಚೀಲ ಗಳ ತಾಯಿ ಎಂದು ಕರೆಯಲ್ಪಡುವ ಮಾರ್ಗ ರೇಟ್ ಇ ನೈಟ್ 1870ರಲ್ಲಿ ಚಪ್ಪಟೆ ತಳ ಭಾಗದ ಚೀಲ ತಯಾರಿಸುವ ಮತ್ತು ಮಡುಚಿ ಅಂಟಿಸುವ ಯಂತ್ರವನ್ನು ವಿನ್ಯಾಸ ಗೊಳಿಸಿದರು. ಕಾಗದದ ಚೀಲಗಳ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳಿವು.

ಪೇಪರ್ ಬ್ಯಾಗ್‍ಗಳು ಶೇ.100ರಷ್ಟು ಮರು ಬಳಕೆಯವು. ಮಣ್ಣಿಗೆ ಬಿದ್ದರೆ 1 ತಿಂಗಳಲ್ಲಿ ಕೊಳೆಯುವಂತಹವು. ಪ್ಲಾಸ್ಟಿಕ್, ಪಾಲಿ ಥೀನ್ ಬ್ಯಾಗ್‍ಗಳಿಗೆ ಹೋಲಿಸಿದರೆ ಪೇಪರ್ ಬ್ಯಾಗ್‍ಗಳನ್ನು ತಯಾರಿಸಲು ಕಡಿಮೆ ಶಕ್ತಿ, ಸಮಯ ಸಾಕು. ಸಾಕುಪ್ರಾಣಿಗಳ ಹಿತ ದೃಷ್ಟಿಯಿಂದಲೂ ಪೇಪರ್ ಬ್ಯಾಗ್ ಬಳಸು ವುದು ಉತ್ತಮ. ಮನೆಯಲ್ಲಿಯೇ ತಯಾ ರಿಸಬಹುದು, ಬಳಸಿದ ನಂತರ ಕಾಂಪೆÇೀಸ್ಟ್ ಆಗಿ ಪರಿವರ್ತಿಸಬಹುದು. ಇಂಥ ಪೇಪರ್ ಬ್ಯಾಗ್‍ಗಳಿಗೆ ಇತ್ತೀಚೆಗೆ ಭಾರೀ ಬೇಡಿಕೆ ಬಂದಿದ್ದು, ಮೈಸೂರಲ್ಲಿ ಅನೇಕ ಸಂಘಟನೆ ಗಳು ಪೇಪರ್ ಬ್ಯಾಗ್ ತಯಾರಿಕಾ ತರ ಬೇತಿ ನೀಡುವ ಮೂಲಕ ಪರಿಸರ ಸಂರಕ್ಷಣೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಅರಿವು ಕಾರ್ಯಕ್ರಮ: ವಿಶ್ವ ಪೇಪರ್ ಬ್ಯಾಗ್ ದಿನದಂಗವಾಗಿ ಮೈಸೂರಿನಲ್ಲಿ ಪರಿಸರ ಸ್ನೇಹಿ ತಂಡದ ಸದಸ್ಯರು ಭಾನುವಾರ ಜಲ ಪುರಿ ಪೊಲೀಸ್ ಕ್ವಾಟ್ರಸ್‍ನಲ್ಲಿ ಸಾರ್ವಜನಿ ಕರಿಗೆ ಪೇಪರ್ ಬ್ಯಾಗ್ ವಿತರಿಸಿದರು. ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಪೇಪರ್ ಬ್ಯಾಗ್ ಬಳಸು ವಂತೆ ಮನವಿ ಮಾಡಿದರು. ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ಎನ್.ಆರ್. ಕ್ಷೇತ್ರ ಅಧ್ಯಕ್ಷ ಡಿ.ಲೋಹಿತ್, ಜಯಂತ್, ಕಿಶೋರ್, ಆನಂದ್ ಇನ್ನಿತರರಿದ್ದರು.

Translate »