ಇಂದು ರಾತ್ರಿಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ ಎರಡು ಹಂತದಲ್ಲಿ 14 ದಿನ ಸಾರ್ವಜನಿಕರಿಗೆ ನಿರ್ಬಂಧ
ಮೈಸೂರು

ಇಂದು ರಾತ್ರಿಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ ಎರಡು ಹಂತದಲ್ಲಿ 14 ದಿನ ಸಾರ್ವಜನಿಕರಿಗೆ ನಿರ್ಬಂಧ

October 14, 2020

ಮೈಸೂರು,ಅ.13(ಎಸ್‍ಬಿಡಿ)-ದಸರಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಎರಡು ಹಂತದಲ್ಲಿ ಒಟ್ಟು 14 ದಿನ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಅ.14ರಿಂದ 18- ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಅ.14ರ ಮಧ್ಯರಾತ್ರಿ 12ರಿಂದ ಅ.18ರ ಮಧ್ಯರಾತ್ರಿ 12ವರೆಗೆ ಸಾರ್ವ ಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ಅ.15ರಿಂದ 17ರವರೆಗೆ ದಸರಾ ಸಿದ್ಧತೆಯಲ್ಲಿ ಭಾಗಿಯಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನಗಳು ಮಾತ್ರ ಪ್ರವೇಶಿಸಬಹುದು. ಅ.23ರಿಂದ ನ.1- ನವರಾತ್ರಿ ಸಂದರ್ಭದಲ್ಲಿ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಅ.23ರ ಮುಂಜಾನೆ 5 ಗಂಟೆಯಿಂದ ನ.1ರ ಮಧ್ಯರಾತ್ರಿ 12ರವರೆಗೆ 2ನೇ ಹಂತದ ನಿಷೇಧ ವಿಧಿಸಲಾಗಿದೆ. ದಸರಾ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸು ತ್ತಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆಯಿದೆ. ಹಾಗಾಗಿ ಮುಂಜಾಗ್ರತೆ ದೃಷ್ಟಿಯಿಂದ 2 ಹಂತದಲ್ಲಿ ಒಟ್ಟು 14 ದಿನ ಸಾರ್ವಜನಿಕಕರ ಪ್ರವೇಶ ನಿಷೇಧಿಸಲಾಗಿದ್ದು, ಶಿಷ್ಟಾಚಾರ ವ್ಯವಸ್ಥೆಯಲ್ಲಿ ರುವ ಗಣ್ಯರು, ಸರ್ಕಾರಿ ಕೆಲಸ ನಿಮಿತ್ತ ಬರುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ಗ್ರಾಮಸ್ಥರ ವಾಹನಗಳಿಗೆ ಮಾತ್ರ ವಿನಾಯ್ತಿ ನೀಡಲಾಗಿದೆ. ಸಾರ್ವಜನಿಕರು ಮೆಟ್ಟಿಲ ಮೂಲಕವೂ ಬೆಟ್ಟಕ್ಕೆ ಹೋಗುವಂತಿಲ್ಲ. ಯಾವುದೇ ರೀತಿಯ ಪ್ರಸಾದ ಹಂಚಿಕೆ ಮಾಡುವಂತಿಲ್ಲ.

 

 

 

Translate »