ಮೈಶುಗರ್ ಸಂಪೂರ್ಣ ಖಾಸಗೀಕರಣ ಇಲ್ಲ
ಮೈಸೂರು

ಮೈಶುಗರ್ ಸಂಪೂರ್ಣ ಖಾಸಗೀಕರಣ ಇಲ್ಲ

May 17, 2020

ಬೆಂಗಳೂರು, ಮೇ 16- ಭಾರೀ ವಿವಾ ದಕ್ಕೆ ಕಾರಣವಾಗಿದ್ದ ಮಂಡ್ಯದ ಮೈಶು ಗರ್ ಕಾರ್ಖಾನೆ ಪೂರ್ಣ ಖಾಸಗೀ ಕರಣ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ. ಮಂಡ್ಯದ ಮೈಶುಗರ್ ಕಾರ್ಖಾನೆಯ ಮಾಲೀಕತ್ವವನ್ನು ರಾಜ್ಯ ಸರ್ಕಾರವೇ ಇಟ್ಟುಕೊಳ್ಳಲು ನಿರ್ಧರಿ ಸಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆ ಯನ್ನು ಸಂಪೂರ್ಣವಾಗಿ ಖಾಸಗಿಯ ವರಿಗೆ ಒಪ್ಪಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿ ನೀಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಚರ್ಚೆಗೆ ತರಲು ಅಧಿಕಾರಿ ಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಕಾರ್ಯಾಚರಣೆ ಮತ್ತು ನಿರ್ವಹಣೆ ಯಡಿ ಮೈಶುಗರ್ ಕಾರ್ಖಾನೆ ಉಳಿಸಿ ಕೊಳ್ಳಲು ನಿರ್ಧರಿಸಲಾಗಿದ್ದು, ಕಾರ್ಖಾ ನೆಯ ಮಾಲೀಕತ್ವ ಸರ್ಕಾರದ ಬಳಿಯೇ ಇರಲಿದೆ. ಇನ್ನು ಈ ಹಿಂದೆ ಇದೇ ವಿಚಾರ ವಾಗಿ ಮಾತನಾಡಿದ್ದ ಶಾಸಕ ಸಿ.ಎಸ್.ಪುಟ್ಟ ರಾಜು, ಸರ್ಕಾರದ ಸದ್ಯದ ನಡೆಯನ್ನು ನೋಡಿದರೆ ಪ್ರಸಕ್ತ ಸಾಲಿನಲ್ಲಿ ಮೈಶುಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆಗಳು ಆರಂಭವಾಗುವುದು ಅನುಮಾನ ಎಂದು ಹೇಳಿದ್ದರಲ್ಲದೆ ಮೈಶುಗರ್ ಕಾರ್ಖಾನೆ ಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದೂ ಎಚ್ಚರಿಸಿದ್ದರು.

Translate »